ರಿಪ್ಪನ್ ಪೇಟೆ : ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಬಂಟರ ಸಂಘ ಅಸ್ತಿತ್ವಕ್ಕೆ ಬಂದಿದೆ. ನೂತನವಾಗಿ ಬಂಟರ ಸಂಘ ಯಾನೆ ನಾಡವ ಸಂಘ ರಚನೆ ಮಾಡಲಾಗಿದೆ. ಈ ನೂತನ ಸಂಘಕ್ಕೆ ಅಧ್ಯಕ್ಷರಾಗಿ ಉದ್ಯಮಿ ವಿಜಯ ಕುಮಾರ್ ಶೆಟ್ಟಿ ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ.
ಪಟ್ಟಣದ ರಾಯಲ್ ಕಂಫರ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಸಂಘದ ಶ್ರೇಯೋಭಿವೃದ್ಧಿಗಾಗಿ ನಾನು ಶ್ರಮಿಸಲು ಸದಾ ಸಿದ್ದನಿರುತ್ತೇನೆ. ಅಲ್ಲದೇ ನಮ್ಮ ಸಮಾಜದ ಶ್ರೇಯಸ್ಸಿಗೆ ಹಗಲಿರುಳು ದುಡಿಯಲು ನಾನು ರೆಡಿ ಇದ್ದೇನೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಾಗಿದೆ. ಅಲ್ಲದೇ ನಮ್ಮ ಸಮಾಜಕ್ಕೆ ರಾಜಕೀಯ, ಆರ್ಥಿಕವಾಗಿ ದುಡಿಯಲು ಬೇಕಾದ ಎಲ್ಲ ಶ್ರಮ ಹಾಕುತ್ತೇನೆ ಎಂದರು.