ದಾವಣಗೆರೆ ; ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ರಂಭಾಪುರಿ ಶ್ರೀಗಳುಅ ಸಮಾಧಾನವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ರೇಣುಕಾ ಮಂದಿರದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿ, 9 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವೀರಶೈವ ಎಂಬ ಪದ ಬಿಟ್ಟಿದ್ದೇ ಬಸವರಾಜ್ ಬೊಮ್ಮಾಯಿ
ಮುಖ್ಯಮಂತ್ರಿ ಗಳ ಲೆಟರ್ ಪ್ಯಾಡ್ ನಲ್ಲಿ ಬಸವಣ್ಣ ಚರಿತ್ರೆ ಪರಿಷ್ಕರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಲೆಟರ್ ಪ್ಯಾಡ್ ನಲ್ಲೇ ಮೊದಲು ಏನಿತ್ತು. ಆ ನಂತರ ಏನಾಯಿತು ಎಂಬುದನ್ನು ಕಳಿಸಿಕೊಟ್ಟಿದ್ದಾರೆ.
ಪ್ರಾಚೀನ ಪರಂಪರೆಯಲ್ಲಿ ಲಿಂಗಾಯತ ಎನ್ನುವ ಪದ ರೂಢಿಗತವಾಗಿ ಬಂದಿತ್ತು. ಆದರೆ ಈಗ ಅಖಿಲ ಭಾರತ ವೀರಶೈವ ಮಹಾಸಭೆಯವರನ್ನು ಕೆಲ ಸ್ವಾಮೀಜಿಗಳು ಹೆದರಿಸಿ ಬೆದರಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಡಿದ್ರು.ಸಮಾಜ ಸಮಗ್ರತೆಯಿಂದ ಭಾವೈಕ್ಯತೆಯಿಂದ ಬದುಕಲಿ ಎಂದು ಪೀಠಗಳು ಕರೆಯಲ್ಪಟ್ಟವು. ಆದರೆ ಇವತ್ತು ಅದೇ ಬಸವಣ್ಣನ ಅನುಯಾಯಿಗಳಾದ ಬುದ್ದಿ ವಿಕಾರಗೊಂಡ ಮಠಾಧೀಶರು. ವೀರಶೈವ ರನ್ನು ತೆಗೆದುಹಾಕಿ ಬಸವಣ್ಣ ನವರ ನಿಜವಾದ ಚಾರಿತ್ರ್ಯಕ್ಕೆ ಕಪ್ಪು ಚುಕ್ಕಿ ತರುವ ಕೆಲಸ ಮಾಡುತ್ತಿದ್ದಾರೆ
ಯಾರು ರೀತಿ ದ್ವಂದ್ವ ಹೇಳಿಕೆ ಖಂಡಿಸಿ ಸರಿಪಡಿಸಬೇಕು ಎಂದು ವೀರಶೈವ ಮಹಾಸಭೆಗೆ ತಿಳಿಸಿದ್ದೇವೆ. ವೀರಶೈವ ಸಮಾಜದ ಮುಖ್ಯಮಂತ್ರಿಗಳು ಅವರು ಮೂಲ ಪದವನ್ನು ತೆಗೆದುಹಾಕಿರುವುದು ಎಷ್ಟು ನೋವು ಸಂಗತಿ. ಅವರ ಕಾಲದಲ್ಲಿ ಶಿಫಾರಸ್ಸು ಆಯ್ತು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಮುದ್ರಣಗೊಂಡು ಜಾರಿಗೆ ಬಂತು.
ಹಿಂದೆ ವೀರಶೈವ ಲಿಂಗಾಯತ ಎಂದು ಬೇರ್ಪಡಿಸುವ ಕೆಲಸ ಕಾಂಗ್ರೇಸ್ ಮಾಡಿದ್ರು ಆಗ ವೀರಶೈವ ಸ್ವಾಮೀಜಿ ಗಳು ಪಂಚ ಮಠಾಧೀಶರು ಹೋರಾಟ ಮಾಡಿ ಜಯಗಳಿಸಿದ್ದೇವು. ಆಗ ಕಾಂಗ್ರೇಸ್ ಬೇರ್ಪಡಿಸುವ ಕೆಲಸ ಮಾಡಿದ್ರು. ಬಿಜೆಪಿ ಗೊತ್ತಿಲ್ಲದಂತೆ ಬೇರ್ಪಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.ಆದರೆ ನಮ್ಮ ಸಮಾಜದ ಮುಖ್ಯಸ್ಥರು ವೀರಶೈವ ಎನ್ನುವ ಪದವನ್ನು ತೆಗೆದು ಹಾಕಲು ಹುನ್ನಾರ ನಡೆಸಿದರು. ಇದಕ್ಕೆ ಯಾವುದೇ ಕ್ಷಮೆ ಕೊಡಲು ಸಾದ್ಯವಾಗುವುದಿಲ್ಲ.ಈ ರೀತಿ ತಪ್ಪು ನಮ್ಮ ಸಮಾಜದ ನಾಯಕರು ಮುಂದೆ ಮಾಡಬಾರದು ಎಂದು ಈ ಸಭೆಯ ಮೂಲಕ ತಿಳಿಸುತ್ತೇನೆ ಎಂದುಬ ರಂಭಾಪುರಿ ಜಗದ್ಗುರು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಈ ತಪ್ಪು ಆಗಿದೆ ಎಂದು ತಪ್ಪು ಕಲ್ಪನೆ ಬರಬಾರದು. 22-23 ರಲ್ಲಿ ಆಗಿನ ಸಿಎಂ ಆಗಿರುವ ಬೊಮ್ಮಾಯಿ ಪಠ್ಯ ಪರಿಷ್ಕರಣೆಗೆ ಪತ್ರ ಬರೆದಿದ್ದರು.ಅಗಿನ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರು ಆಗಿದ್ದರು9ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಬಸವಣ್ಣನವರ ವಿಚಾರ ಪರಿಷ್ಕರಣೆ ಮಾಡಿದ್ದಾರೆ.
ಆ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಲೆಟರ್ ಪ್ಯಾಡ್ ನಲ್ಲೇ ಬರೆದಿದ್ದರು. ಮೊದಲು ಏನ್ ಇತ್ತು ಈಗ ಏನು ಬರೆಯಬೇಕು ಎಂದು ಬರೆಸಿ ಸಹಿ ಹಾಕಿ ಕಳುಹಿಸಿಕೊಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.