ದಾವಣಗೆರೆ: ಒರಿಸ್ಸಾದ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹೂ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಭ್ರಷ್ಟಾಚಾರ, ಹಗರಣಗಳ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೂ ದೇಶದ ಇತಿಹಾಸದಲ್ಲೇ ಎಲ್ಲಿಯೂ ಕೂಡ ಇಷ್ಟೊಂದು ಬೃಹತ್ ಮೊತ್ತದ ಹಣ ದೊರೆತಿರುವ ಉದಾಹರಣೆ ಇಲ್ಲ.ಕಳೆದೆರಡು ದಿನಗಳಿಂದಲೂ ಅಧಿಕಾರಿಗಳು ನೋಟು ಎಣಿಕೆ ಮಾಡಿದರೂ ಮುಗಿಯುತ್ತಿಲ್ಲ.ಇದುವರೆಗೂ ನಾವೆಲ್ಲಾ ಮತ ಎಣಿಕೆ ನೋಡಿದ್ದೆವು ಆದರೆ ಕಾಂಗ್ರೆಸ್ ನ ಸಂಸದನ ಮನೆಯಲ್ಲಿ ನೋಟನ್ನು ಎಣಿಕೆ ಮಾಡುತ್ತಿರುವುದನ್ನು ದೇಶದ ಜನತೆ ಕೂತೂಹಲದಿಂದ ನೋಡುತ್ತಿದ್ದಾರೆ ಎಂದರು.
ಮೋದಿ ಟೀಕೆ ಮಾಡುವರು ಇಂದು ಉತ್ತರ ಕೊಡಲಿ
ಕಾಂಗ್ರೆಸ್ ನವರು ಮಾತೆತ್ತಿದರೆ ನರೇಂದ್ರ ಮೋದಿಯವರು ಐಟಿ ದಾಳಿ ಮಾಡಿಸುತ್ತಾರೆ ಎಂದು ಬಿಜೆಪಿ ಮೇಲೆ ಹಾಗೂ ಪ್ರಧಾನಿಯವರ ಮೇಲೆ ಆರೋಪ ಮಾಡುತ್ತಿದ್ದರು. ಆದರೀಗ ಅವರದೇ ಸಂಸದನ ಮನೆಯಲ್ಲಿ ಅನಧಿಕೃತ ಹಣ ದೊರೆತಿದೆ. ಅಷ್ಟು ಹಣ ಎಲ್ಲಿಂದ ಬಂದಿದೆ.ಇವೆಲ್ಲಕ್ಕೂ ಕಾಂಗ್ರೆಸ್ ನವರು ದೇಶದ ಜನತೆಗೆ ಉತ್ತರ ನೀಡಬೇಕು ಎಂದರು.
ಕಾಂಗ್ರೆಸ್ ನ ಭ್ರಷ್ಟಾಚಾರ ಕ್ಕೆ ಸಾಹೂ ಮನೆಯಲ್ಲಿ ಸಿಕ್ಕಿರುವ ಹಣವೇ ಸಾಕ್ಷಿ
ಕಾಂಗ್ರೆಸ್ ನ ಭ್ರಷ್ಟಾಚಾರ ಕ್ಕೆ ಸಾಹೂ ಮನೆಯಲ್ಲಿ ದೊರೆತಿರುವ ಹಣವೇ ಸಾಕ್ಷಿ. ಈ ರೀತಿದೇಶವನ್ನು ಲೂಟಿ ಮಾಡುವ ಕೆಲಸ ಕಾಂಗ್ರೆಸ್ ನವರು ನಿರಂತರವಾಗಿ ಮಾಡುತ್ತಿದ್ದಾರೆ.ದೇಶದ ಜನತೆ ಕಾಂಗ್ರೆಸ್ ನವರಿಗೆ ತಕ್ಕ ಉತ್ತರ ನೀಡಿದ್ದಾರೆ ಹಾಗೂ ಮುಂದೆಯೂ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ನವರ ಬಳಿ ಭಾರೀ ಹಣವಿದೆ
ಕಾಂಗ್ರೆಸ್ ನವರ ಬಳಿ ಸಾಕಷ್ಟು ಕಳ್ಳ ಹಣ ಇದೆ.ಈ ಹಿಂದೆ ಡಿಕೆ ಶಿವಕುಮಾರ್ ಅವರ ದೆಹಲಿ ನಿವಾಸದಲ್ಲಿಯೂ ಕೋಟಿಗಟ್ಟಲೇ ಹಣ ದೊರೆತಿತ್ತು.ಚುನಾವಣೆಗಳಲ್ಲಿ ಈ ಹಣ ಬಳಕೆ ಮಾಡಿಕೊಳ್ಳುತ್ತಾರೆ.ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಸೇರಿದಂತೆ ವಿವಿಧೆಡೆ ಈ ಹಣ ಬಳಕೆಯಾಗಿದೆ.ತನಿಖೆ ನಂತರ ಈ ಹಣ ಎಲ್ಲಿಯದು ಹಾಗೂ ಎಲ್ಲಿಂದ ಬಂತು ಹಾಗೂ ಎಲ್ಲಿಗೆ ಬಳಕೆ ಮಾಡಲು ಇಟ್ಟಿದ್ದರು ಇವೆಲ್ಲವೂ ತನಿಖೆ ನಂತರ ಹೊರಬರಲಿದೆ ಎಂದರು.
ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ
ಈ ರೀತಿ ಕಾಂಗ್ರೆಸ್ ನ ಮುಖಂಡರ ಬಳಿ ಎಷ್ಟು ಹಣವಿದೆ ತನಿಖೆ ಮಾಡಬೇಕು.ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನವರು ನಂಬರ್ ೧ ಸ್ಥಾನದಲ್ಲಿದ್ದಾರೆ.ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ .ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದು ಸಾಬೀತಾಗಿದೆ ಎಂದರು.