ದಾವಣಗೆರೆ :ಲೋಕಸಭಾ ಚುನಾವಣೆ ವೇಳೆ ಬಿಜೆಪಿಯೊಳಗೆ ಟಿಕೆಟ್ ವಂಚಿತ ಅಸಮಾಧಾನಿತರ ಕೋಪತಾಪ ದಿನೇ ದಿನೇ ಕಡಿಮೆ ಆಗುತ್ತಿದೆ. ಈಗಾಗಲೇ ಮನಿಸು, ಅಸಮಾಧಾನಕ್ಕೆ ರಾಜಾಹುಲಿ ಬಿಎಸ್ವೈ ಮದ್ದೆರದಿದ್ದಾರೆ. ಸಣ್ಣ ಪುಟ್ಟ ಗೊಂದಲಗಳ ನಡುವೆ ಬಿಜೆಪಿ ಮದಗಜದಂತೆ ಮುನ್ನುಗ್ಗುತ್ತಿದೆ. ಕೆಲ ನಾಯಕರು ಅಪಸ್ವರ ಎತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದರ ನಡುವೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಕ್ಕೆ ರಾಜ್ಯ ಚುನಾವಣೆ ಉಸ್ತುವಾರಿ ನಿಂತಿರುವುದು ಬಿಎಸ್ವೈ ವಿರೋಧಿ ಬಣ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಅಷ್ಟೇಅಲ್ಲ, ಬಿವೈವಿ ನಾಯಕತ್ವಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿರುವುದು ಎದುರಾಳಿಗಳಿಗೆ ನುಂಗಲಾರದ ತುತ್ತಾಗಿದೆ. ಹಾಗಾದ್ರೆ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಬಿವೈವಿ ಕುರಿತು ಹೇಳಿದ್ದೇನು? ರಾಜಾಹುಲಿ ವಿರೋಧಿ ಆತಂಕಗೊಂಡಿರುವುದು ಯಾಕೆ..? ಪಕ್ಷದ ಆಂತರಿಕ ಸರ್ವೇ ಏನು ಹೇಳುತ್ತೆ.
ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಿದೆ ಜೊತೆಗೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ.. ಇನ್ನ ವಿಶೇಷ ಅಂದ್ರೆ ಲೋಕಸಭೆ ಚುನಾವಣೆಯನ್ನ ಸವಾಲಾಗಿ ಸ್ವೀಕರಿಸಿರುವ ವಿಜಯೇಂದ್ರ, ಹಠಕ್ಕೆ ಬಿದ್ದು ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಬಿಎಸ್ವೈ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದರಿಂದ ಎಲ್ಲಡೆ ಭಾರೀ ಬೆಂಬಲ ಸಿಗ್ತಿದೆ.
ಚುನಾವಣೆ ಸಜ್ಜಾಗಿ ಅಖಾಡಕ್ಕೆ ಮರಿಹುಲಿ ಇಳಿದಿರುವ ಹೊತ್ತಿನಲ್ಲಿ ಪಕ್ಷದ ಕೆಲ ನಾಯಕರು ಪದೇ ಪದೇ ಅಪ್ಪ ಮಕ್ಕಳು, ಕುಟಂಬದಿಂದ ಪಕ್ಷಕ್ಕೆ ಹಾನಿಯಾಗಲಿದೆ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ಬಿ.ವೈ. ವಿಜಯೇಂದ್ರ ಪಕ್ಷಕ್ಕೆ ಅಧಿಕ ಸ್ಥಾನ ಗೆಲ್ಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿವೈವಿ ನಾಯಕತ್ವದಿಂದ ರಾಜ್ಯದೆಲ್ಲೆಡೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಗ್ತಿದೆ.. ಇದನ್ನ ಮನಗೊಂಡಿರುವ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಂಘಟನಾ ಚತುರತೆಯನ್ನ ಹಾಡಿ ಹೊಗಳಿಸಿದ್ದಾರೆ. ವಿಜಯೇಂದ್ರ ಅವರನ್ನ ಯಡಿಯೂರಪ್ಪ ಚಾಲೀಸಿನಿಂದ ನೋಡಬೇಡ ಎಂದು ಹೇಳುವ ಮೂಲಕ ಕುಟುಂಬವೆಂದು ಅರಚಾಡುವ ಅತೃಪ್ತರಿಗೆ ಕಠಿಣ ಸಂದೇಶ ಕಳುಹಿಸಿದ್ದಾರೆ..
ಬಿಎಸ್ವೈ ಅವರ ಪುತ್ರ ಎಂಬ ಒಂದೇ ಕಾರಣಕ್ಕೆ ಅವರಿಗೆ ಜವಾಬ್ದಾರಿ ನೀಡಿಲ್ಲ. ಬದಲಿಗೆ ಅವರಿಗಿರುವ ಸಂಘಟನಾ ಸಾಮರ್ಥ್ಯ, ಚತುರತೆ ಹಾಗೂ ಕಾರ್ಯಕರ್ತರ ಜೊತೆಗಿನ ಸಂಬಂಧ ಮನಗೊಂಡು ಅಧ್ಯಕ್ಷರಾಗಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರು ವಿಜಯೇಂದ್ರ ಅವರನ್ನು ಒಬ್ಬ ನಾಯಕನಾಗಿ ನೋಡುತ್ತದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅನ್ಯಾಯವಾಗಿದೆ. ಅವರ ಮೌಲ್ಯಾಂಕನವಾಗುತ್ತಿಲ್ಲ. ನಾನು ಕಳೆದ ಒಂದೂವರೆ ತಿಂಗಳಿಂದ ನಾನು ವಿಜಯೇಂದ್ರ ಅವರನ್ನು ಗಮನಿಸುತ್ತಿದ್ದೇನೆ. ಅವರೊಬ್ಬ ಪರಿಪಕ್ವ ರಾಜಕಾರಣಿ. ವ್ಯವಹಾರ ಕುಶಲತೆ ಮತ್ತು ಚತುರತೆಯುಳ್ಳ ವ್ಯಕ್ತಿ. ಬಹಳಷ್ಟು ವಿಷಯಗಳಲ್ಲಿ ಪ್ರಬುದ್ಧರಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿರುವುದು ಬಿಎಸ್ವೈ ವಿರೋಧಿ ಬಣದಲ್ಲಿ ನಡುಕ ಉಂಟು ಮಾಡಿದೆ.
ವಿಜಯೇಂದ್ರ ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ. ಅವರ ಶಕ್ತಿ ಏನೆಂಬುದು ಲೋಕಸಭೆ ಚುನಾವಣೆ ಬಳಿಕ ಗೋಚರವಾಗಲಿದೆ. ಪಕ್ಷದ ಹಿತಕ್ಕಾಗಿ ಕುಟುಂಬದ ಹಿತ ಕಡೆಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯೇಂದ್ರ ನಾಯಕತ್ವ ಮತ್ತಷ್ಟು ಪ್ರಖರವಾಗಿ ಹೊರಬರಲಿದೆ ಅಂದಿರುವುದು ಬಿಗ್ಬಾಸ್ ಟೀಂಗೆ ಆತಂಕ ಉಂಟು ಮಾಡಿದೆ. ಯಾಕಂದ್ರೆ, ಈಗಾಗಲೇ ಹಲವು ಸಮೀಕ್ಷೆಗಳು ಬಿಜೆಪಿಗೆ ಕರ್ನಾಟಕದಲ್ಲಿ 22ರಿಂದ 25 ಸ್ಥಾನಗಳು ಬರಲಿವೆ ಅಂತ ಹೇಳಿವೆ. ಜೊತೆಗೆ ಪಕ್ಷದ ಆಂತರಿಕ ಸಮೀಕ್ಷೆಯೂ 20ಕ್ಕೂ ಅಧಿಕ ಸ್ಥಾನಗಳು ಗೆಲ್ಲಿದೆ ಅಂತ ಹೇಳಿದೆ.
ಇದರಿಂದ ದಿಗಿಲುಗೊಂಡಿರುವ ವಿರೋಧಿ ಬಣ, ಈ ಸಂಖ್ಯೆ ಬಿಜೆಪಿಗೆ ಬರಬಾರದು ಎಂದು ಬಯಸ್ತಿದೆ ಎನ್ನಲಾಗಿದೆ. 20ಕ್ಕೂ ಅಧಿಕ ಸ್ಥಾನ ಬಂದ್ರೆ ತಾವು ಯಾವ ಮೂಲೆಯಲ್ಲಿ ಇರ್ತಿವಿ ಎಂಬ ಚಿಂತೆ ವಿರೋಧಿ ಬಣವನ್ನ ಕಾಡ್ತಿದೆ. ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿಎಂ ಕಾಂಡಿಡೇಟ್ ಆಗ್ತಾರೆ ಎಂಬ ಆತಂಕ ಕೂಡ ಕಾಡ್ತಿದೆ..ಒಟ್ಟಾರೆ.. ರಾಜ್ಯಾಧ್ಯಕ್ಷರ ಬೆಂಬಲಕ್ಕೆ ರಾಜ್ಯ ಚುನಾವಣೆ ಉಸ್ತವಾರಿ ನಿಂತಿರುವುದು ಎದುರಾಳಿಗಳಿಗೆ ನಡುಕ ಶುರುವಾಗಿದೆ.