ದಾವಣಗೆರೆ : ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ತಾ.? ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಅಸಲಿ ಮುಖವಾಡವನ್ನೇ ಕಳಚಿದ್ರಾ ನಟ ಪ್ರಕಾಶ್ ರಾಜ್.? ‘ನಿನ್ನ ಆ ದಾರಿ ತಪ್ಪಿದ ಮಗ ಎಲ್ಲಿದ್ದಾನೆ’ ಅಂತೇಳಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಪ್ರಕಾಶ್ ರಾಜ್ ಕೇಳಿದ್ದೇಕೆ.? ಏನಿದು ಪ್ರಕಾಶ್ ರಾಜ್ ಬಿಚ್ಚಿಟ್ಟ ಆ ರಹಸ್ಯ ಅಂದ್ರಾ? ಮುಂದೆ ಓದಿ.
ಒಂದಲ್ಲ, ಎರಡಲ್ಲ., ನೂರಾರು, ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಕೇಳಿಬಂದಿದೆ.. ಆ ಕುರಿತ ಅಶ್ಲೀಲ ವಿಡಿಯೋಗಳು ಮೊಬೈಲ್ಗಳಿಂದ ಮೊಬೈಲ್ಗಳಿಗೆ ಹರಿದಾಡ್ತಾಯಿವೆ. ಹೀಗಾಗಿ ಈ ಪ್ರಕರಣವನ್ನ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ ವಹಿಸಿದೆ. ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಕ್ಷಣ ಕ್ಷಣಕ್ಕೂ ಕಿಡಿಕಾರುತ್ತಿದ್ದಾರೆ. ಪರಿಸ್ಥಿತಿ ಹೀಗಿರೋವಾಗ್ಲೇ ಇದೀಗ ನಟ ಪ್ರಕಾಶ್ ರಾಜ್ ಕೂಡ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೌದು ಓದುಗರೇ, ರಾಯಚೂರಿನ ಸಮಾವೇಶದಲ್ಲಿ ಮಾತನಾಡಿರೋ ನಟ ಪ್ರಕಾಶ್ ರಾಜ್, ನಮ್ಮ ಪ್ರತಿನಿಧಿಗಳನ್ನು ನಾವೇ ಆರಿಸಬೇಕು ಅಂತ ಹೇಳಿದ್ದಾರೆ. ಇದೇ ವೇಳೆ ಹಾಸನದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಪ್ರಸ್ತಾಪಿಸಿ, ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಮಹಾಪ್ರಭುಗಳಿಗೆ ಕೇಳಬೇಕು ಅಂತದ್ಕೊಂಡಿದ್ದೆ ಅಂತೇಳಿ ಪರೋಕ್ಷವಾಗಿ ಪ್ರಧಾನಿ ನರೇದ್ರ ಮೋದಿ ಅವರ ಮೇಲೆ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ. ನಿನ್ನ ಜೊತೆ ಮೈತ್ರಿ ಮಾಡಿಕೊಂಡ ಅಣ್ಣ ಇದಾನಲ್ಲ. ಆ ಅಣ್ಣ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಕೊಟ್ಟರೆ ದಾರಿ ತಪ್ಪಿದ್ರು ಅಂದ್ರು. ಆದ್ರೆ ನಿನ್ನ ಆ ದಾರಿ ತಪ್ಪಿದ ಮಗ ಈಗ ಎಲ್ಲವ್ನೆ ವಸಿ ಹೇಳಪ್ಪಾ ಅಂತೇಳಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದಲ್ಲಿ ಬಿಜೆಪಿಗರು ಎಷ್ಟೆಲ್ಲಾ ಮಾಡಿದರು. ಆದರೆ ದಾರಿ ತಪ್ಪಿದ ಮಗನಿಂದ ಹಾಳಾದ ಹೆಣ್ಣುಮಕ್ಕಳು ಹಿಂದೂ ಮಹಿಳೆಯರಲ್ವಾ.? ದಾರಿ ತಪ್ಪಿದ ಮಗನಿಂದ ಹಾಳಾದ 2,000ಕ್ಕೂ ಹೆಚ್ಚು ಮಹಿಳೆಯರಿಗೋಸ್ಕರ ನಿಮಗೆ ಆಕ್ರೋಶ ಬರಲ್ವಾ ಅಂತೇಳಿ ಪ್ರಕಾಶ್ ಬಿಜೆಪಿಯನ್ನ ಮಾರ್ಮಿಕವಾಗಿ ಕುಟುಕಿದ್ದಾರೆ.
BJPಗರ ಹುಸಿ ಹಿಂದೂತ್ವ ಬಟಾಬಯಲು?
ವೋಟ್ಗಾಗಿ ಮಾತ್ರ ಹಿಂದೂಗಳ ಭಾವನೆ ಕೆರಳಿಸೋದಾ?
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಬಿಜೆಪಿಗರ ಹುಸಿ ಹಿಂದೂತ್ವ ಬಟಾಬಯಲಾದಂತಾಗಿದೆ. ಬಿಜೆಪಿಯವರು ವೋಟ್ಗಾಗಿ ಮಾತ್ರ ಹಿಂದೂಗಳ ಭಾವನೆಗಳನ್ನ ಕೆರಳಿಸೋದು ಅನ್ನೋದು ಇಲ್ಲಿ ಸ್ಪಷ್ಟವಾಗ್ತಾಯಿದೆ. ನಿಮ್ಮ ರಾಜಕಾರಣ ನಮಗೆ ಅರ್ಥ ಆಗುವುದಿಲ್ಲ ಅಂತದ್ಕೊಂಡಿದ್ದೀರಾ.? ದೊಡ್ಡ ಮನಸ್ಸಿನವರು ನಾವು ಕ್ಷಮಿಸಬಹುದು. ಆದರೆ ಮರೆಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮ್ಮ ಜವಾಬ್ದಾರಿ ಮುಖ್ಯ. ಸೂಕ್ತ ವ್ಯಕ್ತಿಯನ್ನು ಆರಿಸುವುದು ನಮ್ಮ ಜವಾಬ್ದಾರಿ ಅಂತೇಳಿ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಯಾರನ್ನು ಬೈಬೇಡಿ ನೀವು. ಅಂಧ ಭಕ್ತರು ಅಂತೆಲ್ಲಾ ಬೈಬೇಡಿ. ಅವರು ನಮ್ಮವರೇ, ಅವರಿಗೆ ಮತ್ತೆ ಮತ್ತೆ ತಿಳಿ ಹೇಳೋಣ. ಇಲ್ಲಿಂದ ಹೋಗಿ ನೀವು ನಿಮ್ಮ ಗೆಳೆಯರಿಗೆ ಸಾಧ್ಯವಾದಷ್ಟು ಮೇ ಏಳನೇ ತಾರೀಕಿನವರೆಗೆ ಮೊದಲು ಈ ಪ್ರತಿನಿಧಿಗಳನ್ನು ಇಳಿಸುವ ಕೆಲಸ ಮಾಡೋಣ ಎಂದು ಅರ್ಥ ಮಾಡಿಸಿ. ಇದಾದ ನಂತರ ಬರುವ ಯಾವುದೇ ಸರ್ಕಾರವಿದ್ದರೂ, ನಾವು ಮತ್ತೆ ಹೀಗೆ ಸೇರಿ ಹಿರಿಯರೊಂದಿಗೆ ಚರ್ಚಿಸಿ ನಮ್ಮ ಬೇಡಿಕೆಯನ್ನು ಇನ್ನೂ ತೀವ್ರವಾಗಿ ಇಡೋಣ ಅವರ ಮುಂದೆ ಅಂತೇಳಿ ನಟ ಪ್ರಕಾಶ್ ರಾಜ್ ಮತದಾರರಿಗೆ ಕರೆ ಕೊಟ್ಟಿದ್ದಾರೆ.
ಹಾಗಾದ್ರೆ ಬಿಜೆಪಿ ನಾಯಕರಿಗೆ ಈಗ ಹಿಂದೂ ಹೆಣ್ಣುಮಕ್ಕಳಿಗಾಗಿರೋ ಅನ್ಯಾಯ ಕಾಣ್ತಾಯಿಲ್ವಾ..? ನೇಹಾ ಪ್ರಕರಣದಲ್ಲಿ ಬೀದಿಗಿಳಿದು ಹೋರಾಟ ನಡೆಸಿರೋ ಬಿಜೆಪಿ ನಾಯಕರು ಈಗ್ಯಾಕೆ ತುಟಿಕ್ ಪಿಟಿಕ್ ಅಂತಿಲ್ಲ.