
ದಾವಣಗೆರೆ : ಬಿಎಸ್ ವೈ ಮೇಲಿನ ಪೋಕ್ಸೋ ಪ್ರಕರಣ ಸಿಐಡಿಗೆ, ಬಿಎಸ್ ವೈ ಅರೆಸ್ಟ್ ಆದ್ರೆ ಕೈ ನಾಯಕರಿಗೆ ಗೆಲುವಿನ ಲೈನ್ ಈಜಿಯಾಗುತ್ತಾ?… ಈಗ ಕಮಲ ಪಾಳಯದಲ್ಲಿ ಢವ..ಢವ..ಮುಂದೆ ಇನ್ನೇನೂ ಸುದ್ದಿ ಇದೆ ಅಂತ ಮುಂದೆ ಓದಿ..
ಹೌದು…ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ ಬಿದ್ದಿದ್ದು, ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಡಿಜಿ ಐಜಿಪಿ ಅಲೋಕ್ ಮೋಹನ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಫ್ಯಾಕ್ಸ್ ಮೂಲಕ ಸೂಚನೆ ನೀಡಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಸೂಚನೆಯಂತೆ ಈ ಆದೇಶ ಮಾಡಲಾಗಿದೆ..
ಸಂತ್ರಸ್ತ ಮಹಿಳೆ ಇನ್ನು ಅನೇಕರ ವಿರುದ್ಧನೂ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ನಿಟ್ಟಿನಲ್ಲಿ ಸತ್ಯಾಸತ್ಯತೆ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಪರಿಸ್ಥಿತಿ ಹೀಗಿರೋವಾಗ್ಲೇ ಪೋಕ್ಸೋ ಪ್ರಕರಣದಲ್ಲಿ ಮೊದಲು ಆರೋಪಿಯನ್ನ ಬಂಧಿಸಬೇಕು.

ಬಂಧಿಸಿದ ನಂತರವೇ ಆರೋಪಿಯನ್ನ ವಿಚಾರಣೆ ನಡೆಸಬೇಕು ಅನ್ನೋ ನಿಯಮ ಇದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಬಿಎಸ್ವೈ ಅವರ ಬಂಧನವಾಗೋ ಸಾಧ್ಯತೆ ಇದೆ.. ಇದೇ ಶನಿವಾರ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನ ಘೋಷಣೆ ಮಾಡೋ ಸಾಧ್ಯತೆ ಇದೆ. ಇಂಥ ಟೈಂಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿಎಸ್ವೈ ಅರೆಸ್ಟ್ ಆದ್ರೆ ರಾಜ್ಯ ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನಡೆಯಾಗೋ ಸಾಧ್ಯತೆಯ ಲಕ್ಷಣಗಳಿವೆ.
ಇಲ್ಲಿ ಗಮನಿಸಬೇಕಾ ಅಂಶ ಏನಂದ್ರೆ ಬಿಎಸ್ವೈ ಅವರ ಮೇಲೆ ಕೇಳಿಬಂದಿರೋ ಕೇವಲ ಆರೋಪ. ಆದ್ರೆ ಪೋಕ್ಸೋ ಪ್ರಕರಣದಲ್ಲಿ ಆರೋಪ ಕೇಳಿಬಂದ್ರೂ ಮೊದಲು ಆರೋಪಿಯನ್ನ ಬಂಧಿಸಲೇಬೇಕು.. ಮುರುಘಾಶ್ರೀಗಳ ಪ್ರಕರಣದಲ್ಲಿ ಶ್ರೀಗಳನ್ನ ಬಂಧಿಸಿರ್ಲಿಲ್ವಾ.? ಆದ್ರೆ ರಾಜಕಾರಣಿಗಳ ವಿಷಯದಲ್ಲಿ ಮಾತ್ರ ಅದರಲ್ಲೂ ಬಿಜೆಪಿ ಸರ್ಕಾರ ಇರೋ ರಾಜ್ಯಗಳಲ್ಲಿ ಪೋಕ್ಸೋ ಪ್ರಕರಣ ಕೇಳಿಬಂದ್ರೂ ರಾಜಕಾರಣಿಗಳ ಬಂಧನವಾಗಿಲ್ಲ. ಅದಕ್ಕೆ ಬೆಸ್ಟ್ ಎಂಕ್ಸಾಪಲ್, ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್ಭೂಷಣ್ ಸಿಂಗ್ ಅಂತ ಹೇಳುತ್ತಾರೆ ಕಾಂಗ್ರೆಸ್ ನಾಯಕರು.
ಹೌದು ವೀಕ್ಷಕರೇ, ಬ್ರಿಜ್ಭೂಷಣ್ ಮೇಲೆ ಪೋಕ್ಸೊ ಕಾಯಿದೆಯಲ್ಲಿ ಒಂದು ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಮಾಡಿರುವ ಆರೋಪದಲ್ಲಿ ಎರಡನೇ ಎಫ್ಐಆರ್ ದಾಖಲು ಮಾಡಲಾಗಿತ್ತು. ಈ ಸಂಬಂಧ ಬ್ರಿಜ್ಭೂಷನ್ ಸಿಂಗ್ ಅವರನ್ನ ಬಂಧಿಸುವಂತೆ ಮಹಿಳಾ ಕುಸ್ತಿಪಟುಗಳು ಹಲವು ತಿಂಗಳುಗಳ ಕಾಲ ಪ್ರತಿಭಟನೆಗಳನ್ನ ನಡೆಸಿದ್ರು. ಆದ್ರೂ ಬಂಧನವಾಗಿರ್ಲಿಲ್ಲ..
ಹಾಗಾದ್ರೆ ಪ್ರಧಾನಿ ಮೋದಿ ಅವರು ಹೇಳೋ ಭೇಟಿ ಬಚಾವೋ, ಅನ್ನೋ ಮಾತಿಗೆ ಅರ್ಥ ಎಲ್ಲಿದೆ ಅಂತೇಳಿ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ನಿಮಗೆ ಗೊತ್ತಿರ್ಲಿ, ಕಳೆದೊಂದು ವರ್ಷದಿಂದಲೂ ಸಂಘರ್ಷಪೀಡಿತವಾಗಿರುವ ಮಣಿಪುರದಲ್ಲಿ ಮಹಿಳೆಯರೇ ಹೆಚ್ಚು ಬಲಿಪಶುಗಳಾಗಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿದ ವಿಡಿಯೊ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಕೇಂದ್ರ–ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ, ಅಲ್ಲಿಗೆ ಭೇಟಿ ನೀಡಲು ಪ್ರಧಾನಿಗೆ ಏನು ತೊಂದರೆಯಾಗಿತ್ತು ಅಂತೇಳಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಇತ್ತೀಚೆಗೆ ಪ್ರಶ್ನಿಸಿದ್ರು. ಅಷ್ಟೇ ಅಲ್ಲ,
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರಧಾನಿಯ ಮೌನ ಎದ್ದು ಕಾಣುತ್ತಿದೆ. ಸಿಂಗ್ ಅವರನ್ನು ‘ಮೋದಿ ಪರಿವಾರದ ಸದಸ್ಯ’ ಎಂದು ಪರಿಗಣಿಸಿದ್ದಾರೆಯೇ’ ಅಂತಾನೂ ಪ್ರಶ್ನಿಸಿದ್ರು..
ಇದರ ಬೆನ್ನಲ್ಲೇ ಇದೀಗ ಕರ್ನಾಟಕದ ಮಾಜಿ ಸಿಎಂ ಬಿಎಸ್ವೈ ಅವರ ಮೇಲೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು., ಬಿಎಸ್ವೈ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಸದ್ಯದ ಬೆಳವಣಿಗೆಗಳ ಪ್ರಕಾರ ಈ ಪ್ರಕರಣದಲ್ಲಿ ಎಲ್ಲೂ ರಾಜಕೀಯ ಎದ್ದು ಕಾಣ್ತಾಯಿಲ್ಲ. ಮಾಜಿ ಸಿಎಂ ಒಬ್ಬರ ಮೇಲೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಗಂಭೀರ ಆರೋಪ ಕೇಳಿಬಂದಿರೋದ್ರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನ ಸಿಐಡಿ ತನಿಖೆಗೆ ಒಪ್ಪಿಸಿದೆ.
.ಒಂದೊಮ್ಮೆ ಈ ಪ್ರಕರಣದಲ್ಲಿ ಮಹತ್ವದ ದಾಖಲೆ ಕಲೆ ಹಾಕಲು ಬಿಎಸ್ವೈ ಅವರನ್ನ ಬಂಧಿಸೋ ಸಾಧ್ಯತೆ ಇದೆ.. ಬಿಎಸ್ವೈ ಪ್ರಭಾವಿ ವ್ಯಕ್ತಿಯಾಗಿರೋದ್ರಿಂದ ಸಾಕ್ಷ್ಯ ನಾಶ ಮಾಡೋ ಅನುಮಾನ ಇದ್ದೇ ಇರುತ್ತೆ. ಜೊತೆಗೆ ಪೋಕ್ಸೋ ಪ್ರಕರಣವಾಗಿರೋದ್ರಿಂದ ಬಿಎಸ್ವೈ ಬಂಧನದ ಸಾಧ್ಯತೆ ಹೆಚ್ಚಾಗಿರುತ್ತೆ. ಆದ್ರೆ ರಾಜ್ಯ ಸರ್ಕಾರ ಈ ಪ್ರಕರಣವನ್ನ ತುಂಬಾ ಎಚ್ಚರಿಕೆಯಿಂದ ಡೀಲ್ ಮಾಡಬೇಕಾಗಿದೆ. ಯಾಕಂದ್ರೆ ಒಂದೊಮ್ಮೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಬಂಧನವಾದ್ರೆ ಬಿಎಸ್ವೈ ಮತ್ತು ಬಿಜೆಪಿ ಪರ ಅನುಕಂಪದ ಅಲೆ ಸೃಷ್ಟಿಯಾಗೋ ಸಾಧ್ಯತೆ ಇರುತ್ತೆ.
ಹೀಗಾಗಿ ಬರೀ ಲಿಂಗಾಯತಷ್ಟೇ ಇತರೆ ಸಮುದಾಯಗಳು ಕೂಡ ಬಿಜೆಪಿ ಕಡೆ ವಾಲೋ ಸಾಧ್ಯತೆ ಇದೆ. ಹೀಗಾಗಿ ಸಿಐಡಿಗೆ ಫ್ರೀ ಹ್ಯಾಂಡ್ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಸೂಚಿಸಲಾಗಿದೆ. ಒಂದೊಮ್ಮೆ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿದ್ರೆ ಬಿಎಸ್ವೈ ಬಂಧನವಾದ್ರೂ ಆಶ್ಚರ್ಯವಿಲ್ಲ.
ಹಾಗಾದ್ರೆ FIRನಲ್ಲಿ ಏನಿದೆ ಗೊತ್ತಾ?
ಅಪ್ರಾಪ್ತೆಯ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರದ ಬಗ್ಗೆ ಸಹಾಯ ಯಾಚಿಸಲು ತಾಯಿ ಮಗಳು ಬಿಎಸ್ವೈ ಬಳಿ ತೆರಳಿದ್ದಾಗ 9 ನಿಮಿಷಗಳ ಕಾಲ ಮೊದಲು ಮಾತನಾಡಿದ್ದ ಯಡಿಯೂರಪ್ಪ ಅವರು, ಆನಂತರ ಅಪ್ರಾಪ್ತೆಯನ್ನು ರೂಂ ಒಳಗೆ ಕರೆದು ಹೋಗಿ 5 ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅಪ್ರಾಪ್ತೆಯ ಖಾಸಗಿ ಭಾಗ ಮುಟ್ಟಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ರೂಂ ನಿಂದ ಹೊರ ಬಂದು ಯಡಿಯೂರಪ್ಪ ಅವರು ಕ್ಷಮೆಯಾಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಹೆದರಿಸಿ ನಮ್ಮನ್ನ ತಡೆದಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Sಹೀಗಾಗಿ ಈ ಪ್ರಕರಣದಲ್ಲಿ ಸದ್ಯ ಬಿಎಸ್ವೈ ಆರೋಪಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನಿಷ್ಪಕ್ಷಪಾತವಾಗಿ ಸಿಐಡಿ ತನಿಖೆ ನಡೆಯುತ್ತೆ ಅನ್ನೋ ನಂಬಿಕೆ ಇದೆ.. ಜೊತೆಗೆ ಬಿಎಸ್ವೈ ಮಾಜಿ ಸಿಎಂ ಆಗಿರೋದ್ರಿಂದ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಸರಕಾರದ ನಡೆ ಬಗ್ಗೆ ಎಲ್ಲರುಗೂ ಕುತೂಹಲವಿದೆ.