![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ: ಮಂಡಿ ನೋವಿಗೆ ಶಾಶ್ವತ ಮತ್ತು ಶೀಘ್ರ ಪರಿಹಾರ ಒದಗಿಸಲು ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಪ್ರತಿಷ್ಠಿತ ಆರಾಧನ ಆರ್ಥೋಪೆಡಿಕ್ ಸೆಂಟರ್ ನಲ್ಲಿ ರೋಬೋಟಿಕ್ ನೀ ರಿಪ್ಲೇಸ್ ಮೆಂಟ್ ಶಸ್ತಚಿಕಿತ್ಸೆ ಸೌಲಭ್ಯವಿದ್ದು, ಈಗಾಗಲೇ 25ಕ್ಕೂ ಹೆಚ್ಚು ರೋಗಿಗಳು ಈ ಶಸ್ತçಚಿಕಿತ್ಸೆಗೆ ಒಳಗಾಗಿ ಮರುದಿನವೇ ಓಡಾಡುತ್ತಿದ್ದಾರೆ ಎಂದು ಸೆಂಟರ್ನ ಸರ್ಜನ್ ಡಾ. ಗಿರೀಶ್ ಕುಮಾರ್ ಕೆ. ತಿಳಿಸಿದರು.
ಅವರು ತಮ್ಮ ಸೆಂಟರ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರೋಬೋಟಿಕ್ ನೀ ರಿಪ್ಲೇಸ್ ಮೆಂಟ್ ಯಂತ್ರದ ಸಹಾಯದಿಂದ ಶಸ್ತಚಿಕಿತ್ಸೆ ಮಾಡಲಾಗುತ್ತಿದೆ. ಈ ಯಂತ್ರದ ಶಸ್ತç ಚಿಕಿತ್ಸೆಯು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಲಭ್ಯವಿದ್ದು, ಈಗ ಶಿವಮೊಗ್ಗದಲ್ಲೂ ಸಹ ಯಂತ್ರದಿಂದ ಶಸ್ತಚಿಕಿತ್ಸೆ ಮಾಡಬಹುದಾಗಿದೆ ಎಂದರು.
ರೋಬೋಟಿಕ್ ನೀ ರಿಪ್ಲೇಸ್ ಮೆಂಟ್ ಸರ್ಜರಿಯ ಆಧುನಿಕ ಯಂತ್ರವಾಗಿದ್ದು, ಈ ಹಿಂದೆ ಮೊಣಕಾಲು ನೋವಿಗೆ ಸರ್ಜರಿ ಮಾಡಲಾಗುತ್ತಿತ್ತು. ಸಾಂಪ್ರದಾಯಿಕ ವಿಧಾನದಿಂದ ಚೇತರಿಸಿಕೊಳ್ಳುವುದಕ್ಕೆ ಸಮಯ ಬೇಕಾಗಿತ್ತು.ಶಸ್ತ್ರ ಚಿಕಿತ್ಸೆ ವೇಳೆ ಇತರ ಅಂಗಾಂಗಳಿಗೆ ತೊಂದರೆಯಾಗುವ ಸಾಧ್ಯತೆ ಜೊತೆಗೆ ರಕ್ತಸ್ರಾವವೂ ಉಂಟಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ರೋಬೋಟಿಕ್ ನೀ ರಿಪ್ಲೇಸ್ ಮೆಂಟ್ ಶಸ್ತಚಿಕಿತ್ಸೆ ಮೂಲಕ ರೋಬೋಟಿಕ್ ಮೊಣಕಾಲು ಬದಲಿ ಮೂಳೆ ಶಸ್ತçಚಿಕಿತ್ಸೆ ಕ್ಷೇತ್ರದಲ್ಲಿ ಒಂದು ಅದ್ಭುತ ಬೆಳವಣಿಗೆಯಾಗಿದೆ ಎಂದರು.
ರೋಬೊಟ್ ಶಸ್ತçಚಿಕಿತ್ಸೆ ಮಾಡುವುದಿಲ್ಲ. ಬದಲಾಗಿ ಸರ್ಜನ್ ಗಳಿಗೆ ಸರ್ಜರಿ ಸಮಯದಲ್ಲಿ ನಿರ್ದಿಷ್ಟ, ನಿಖರವಾದ ಸಲಹೆ, ಸೂಚನೆಗಳನ್ನು ಅದು ನೀಡುತ್ತದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಹಲವಾರು ಪ್ರಯೋಜನಗಳನ್ನು ಅದು ಒದಗಿಸುತ್ತದೆ. ಹಳೆ ಶಸ್ತಚಿಕಿತ್ಸೆಗಳು ಪರಿಣಾಮಕಾರಿಯಾಗಿದ್ದರೂ, ಇಂಪ್ಲಾಂಟ್ ಸ್ಥಾನ ಮತ್ತು ಜೋಡಣೆಯ ನಿಖರತೆಗೆ ಸಂಬಂಧಿಸಿದ ಮಿತಿಗಳು ಇದ್ದೇ ಇರುತ್ತವೆ.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250116-WA0230.jpg)
ಪ್ರಾಸ್ಥೆಟಿಕ್ ಕೀಲಿನ ದೀರ್ಘಾಯುಷ್ಯ ಮತ್ತು ಕಾರ್ಯಕ್ಷಮತೆಗೆ ಈ ಅಂಶಗಳು ನಿರ್ಣಾಯಕ. ರೋಬೊಟಿಕ್ ನೆರವಿನ ಶಸ್ತçಚಿಕಿತ್ಸೆಯು ಸರ್ಜನ್ ಗಳಿಗೆ ಸಾಟಿ ಇಲ್ಲದ ನಿಖರತೆಯೊಂದಿಗೆ ಕಾರ್ಯವಿಧಾನ ರೂಪಿಸಲು ಮತತು ಕಾರ್ಯಗತಗೊಳಿಸಲು ನಿರ್ದಿಷ್ಟ ಸಾಧನಗಳನ್ನು ಒದಗಿಸುವ ಮೂಲಕ ಈ ಸವಾಲುಗಳನ್ನು ಪರಿಹರಿಸುತ್ತವೆ ಎಂದರು.
ರೋಬೋಟಿಕ್ ನೀ ರಿಪ್ಲೇಸ್ ಮೆಂಟ್ ಶಸ್ತçಚಿಕಿತ್ಸೆಯಿಂದ ನಿಖರ ಫಲಿತಾಂಶ, ಶೀಘ್ರ ಚೇತರಿಕೆ ಸಾಧ್ಯವಿದೆ. ಅಡ್ಡ ಪರಿಣಾಮ ಇರುವುದಿಲ್ಲ. ಮೊಣಕಾಲಿನ ಜೊತೆಗೆ ರೋಗಿಯ ಭವಿಷ್ಯದ ದೃಷ್ಟಿಯಿಂದಲೂ ಈ ಚಿಕಿತ್ಸೆ ಉತ್ತಮವಾಗಿದೆ. ಮೊಣಕಾಲಿನ ರೋಗಿಗೆ ಅತ್ಯಾಧುನಿಕ ರೋಬೊಟಿಕ್ ಶಸ್ತçಚಿಕಿತ್ಸೆ ಮದ್ದಾಗಿದೆ ಎಂದರು.
ಆರಾಧನ ಆರ್ಥೋಪಡಿಕ್ ಸೆಂಟರ್ 2020ರ ಆ. 16ರಂದು ಆರಂಭವಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಮಲೆನಾಡಿನ ಸುತ್ತಮುತ್ತಲಿನ ರೋಗಿಗಳ ಅಗತ್ಯತೆಗಳನ್ನು ಪೂರೈಸಲು ನುರಿತ ಶಸ್ತಚಿಕಿತ್ಸಕರು, ಅರವಳಿಕೆ ತಜ್ಞರು, ಫಿಸಿಯೋಥೆರಪಿಸ್ಟ್ಗಳು ಮತ್ತು ಆರೈಕೆ ಮಾಡುವ ನರ್ಸಿಂಗ್ ಸಿಬ್ಬಂದಿಯ ತಂಡ ಹೊಂದಿದೆ. ಹಾಗೂ ಸುಸಜ್ಜಿತ ಆಪರೇಷನ್ ಥಿಯೇಟರ್ ಸಹ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಆರಾಧನ ಆಸ್ಪತ್ರೆಯ ಚೇರ್ಮನ್ ಟಿ. ಕೃಷ್ಣಪ್ಪ ಉಪಸ್ಥಿತರಿದ್ದರು.
ನವೆಂಬರ್ 17 ರಂದು ಉದ್ಘಾಟನೆ
ನವೆಂಬರ್ 17ರಂದು ಬೆಳಗ್ಗೆ 10 ಗಂಟೆಗೆ ಸಾಗರ ರಸ್ತೆಯಲ್ಲಿರುವ ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಉದ್ಘಾಟನೆ ಕಾರ್ಯಕ್ರಮವಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ರೋಬೊಟಿಕ್ ಪ್ರದರ್ಶನ ಮಾಡಲಾಗುವುದು. ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
![](https://davangerevijaya.com/wp-content/uploads/2025/01/IMG-20250116-WA01462.jpg)