ಭದ್ರಾವತಿ : ಪೇಪರ್ ಟೌನ್ ಯುವಕನೊಬ್ಬ ಆನ್ಲೈನ್ ಆಪ್ಗೆ ಸಾವಿರಾರು ರೂಪಾಯಿ ಹಣ ಹೂಡಿಕೆ ಮಾಡಿ, ಹಣ ಬಾರದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರದೀಪ್ (27) ಆತ್ಮಹತ್ಯೆಗೆ ಶರಣಾದವನು. ಈತ ಆನ್ಲೈನ್ ನಲ್ಲಿ ಹಣ ಹಾಕಿದರೆ ಡಬಲ್ ಆಗುತ್ತೆ ಎಂದು ನಂಬಿ ಸುಮಾರು ಕಡೆ ಸಾಲ ಮಾಡಿ ಪ್ರದೀಪ್ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದ. ಆದರೆ ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.