
ಶಿವಮೊಗ್ಗ : ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ವಿಶ್ವ ಸ್ಕಾರ್ಫ್ ಡೆ ಹಾಗೂ ಸ್ಕೌಟಿಂಗ್ ಸೂರ್ಯೋದಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಭಾ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯದರ್ಶಿ ರಾಜೇಶ್.ವಿ.ಅವಲಕ್ಕಿ ದಿನದ ಮಹತ್ವವನ್ನು ಸರ್ವರಿಗೂ ತಿಳಿಸಿದರು. ಈ ಸಂದರ್ಭದಲ್ಲಿ ಸ್ಕೌಟಿಂಗ್ ಚಳವಳಿಯ ಸಂಸ್ಥಾಪಕ ಲಾರ್ಡ್ ಬೇಡನ್ ಪೋವೆಲ್ ಹಾಗೂ ಲೇಡಿ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಸ್ಕಾರ್ಫ್ ಧರಿಸುವ ಮೂಲಕ ಗೌರವಿಸಲಾಯಿತು. ಜಿಲ್ಲಾ ತರಬೇತಿ ಆಯುಕ್ತ (ಗೈಡ್) ಗೀತಾ ಚಿಕ್ಮಠ್ ಸ್ಕೌಟ್ ಗೈಡ್ ವಂದನೆಯೊಂದಿಗೆ ಪ್ರತಿಜ್ಞೆಯ ಪುನರುಚ್ಛಾರಣೆ ಮಾಡಿಸಿದರು.
ನಂತರ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದ ಜಿಲ್ಲಾಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್, ವಿಶ್ವ ಸ್ಕಾರ್ಫ್ ದಿನಾಚರಣೆ ಪರಿಕಲ್ಪನೆಯಂತೆ ಈ ಹಿಂದೆ ಸ್ಕೌಟಿಂಗ್ ಚಳವಳಿಯಲ್ಲಿದ್ದವರು ಹಾಗೂ ಪ್ರಸ್ತುತ ಸಕ್ರಿಯವಾಗಿ ರುವ ಎಲ್ಲಾ ಸದಸ್ಯರು ಸಾರ್ವಜನಿಕವಾಗಿ ಸ್ಕಾರ್ಫ್ ನ್ನು ಧರಿಸಿ ಎಂದೆಂದಿಗೂ ಸ್ಕೌಟಿಂಗ್ ಚಳುವಳಿಯ ತತ್ವಗಳನ್ನು ಪ್ರಚಾರಪಡಿಸ ಬೇಕೆಂದು ಹೇಳಿದರು.


ನಗರದ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ಮಕ್ಕಳು ಹಾಗೂ ದಳನಾಯಕರುಗಳಾದ M.L.ಶಾಂತಮ್ಮ, M.ಹೇಮಲತಾ. ಸುನಂದಮ್ಮ. ನಾಗಪ್ರಿಯಾ, ಶ್ರೀ.ಕೃಷ್ಣಸ್ವಾಮಿ, ಪ್ರತಿನಿಧಿ ಭದ್ರಾವತಿ, ನಾಗರಾಜ್, ಹಿರಿಯ ಸ್ಕೌಟ್ ಮಾಸ್ಟರ್, ಶ್ರೀ ವಿವೆಕಾನಂದ ಮಾನೆ , ಸ್ಕೌಟ್ ಮಾಸ್ಟರ್. ಜಿಲ್ಲಾ. ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ,ಹಾಗೂ ಜಿಲ್ಲಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಸಂಸ್ಥೆಯ ಕಾರ್ಯದರ್ಶಿ ಶ್ರೀ ಪರಮೇಶ್ವರ ಸ್ವಾಗತವನ್ನು ಕೋರಿದರು..ಜಿ. ವಿಜಯಕುಮಾರ್.PRO. ವಂದನಾರ್ಪಣೆ ಮಾಡಿದರು. ಶ್ರೀ ರಾಜೇಶ್.ವಿ.ಅವಲಕ್ಕಿ ನಿರೂಪಣೆ ಮಾಡಿದರು.