ಶಿವಮೊಗ್ಗ : ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಎಲ್ಲರಿಗೂ ಅವಶ್ಯಕ ಅದರಲ್ಲಿಯು ಮಕ್ಕಳಿಗೆ ಅತ್ಯವಶ್ಯಕ. ಆದ್ದರಿಂದ ತಮ್ಮ ಹುಟ್ಟು ಹಬ್ಬದ ನೆನಪಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಚೇತನ ಹಿರಿಯ ಪ್ರಾಥಮಿಕ ಶಾಲೆಗೆ, ರೋಟರಿ ಕ್ಲಬ್ ಶಿವಮೊಗ್ಗ, ಜ್ಯೂಬಿಲಿ ಕ್ಲಬ್ ಮೂಲಕ ಕೊಡುಗೆ ನೀಡುತ್ತಿರುವುದಾಗಿ ಸತೀಶ್ ತಿಳಿಸಿದರು.
ಮಾಜಿ ಸಹಾಯಕ ಗೌರ್ನರ್ ರಾಜೇಂದ್ರಕುಮಾರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ದುಡುಮೆಯಲ್ಲಿ ಹತ್ತು ಭಾಗ ಅವಶ್ಯಕತೆ ಇರುವವರಿಗೆ ನೀಡುವುದರಿಂದ ಸತಕ್ಷ ಸಮಾಜ ನಿರ್ಮಾಣ ಸಾಧ್ಯ. ರೋಟರಿಯ ಎಲ್ಲಾ ಸದಸ್ಯರು ಶತಮಾನದಿಂದ ಈ ರೀತಿಯ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದ ಅವರು, ಸಂತೃಪ್ತಿ ಜೀವನದಿಂದ ವಿಶ್ವ ಶಾಂತಿ ಸಾದ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೊ. ರೂಪ ಪುಣ್ಯಕೊಟಿ ಮಾತನಾಡಿ, ಕೊಡುಗೈ ದಾನಿಗಳಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ ನನ್ನ ಸಹೋದರ ಸಮಾನರಾದ ಸತೀಶ್ ಅವರು ಪ್ರತಿ ವರ್ಷ ಒಂದೊಂದು ಶಾಲೆಯ ಅಗತ್ಯತೆ ಪೂರೈಸುತ್ತಿದ್ದಾರೆ. ಅವರ ಈ ರೀತಿಯ ಕಾರ್ಯ ಎಲ್ಲರಿಗೂ ಪ್ರೇರಕ ಎಂದರು.
ಕಾರ್ಯಕ್ರಮದಲ್ಲಿ ಭಾರದ್ವಾಜ್ ಸ್ವಾಗತಿಸಿ, ಲಕ್ಷೀನಾರಾಯಣ್ ನಿರೂಪಿಸಿ, ಉಮಾದೇವಿ ವಂದಿಸಿದರು.
==============