ನ್ಯಾಮತಿ ; ಖಚಿತ ಮಾಹಿತಿ ಆಧಾರದ ಮೇಲೆ ತಾಲೂಕಿನ ಮಾದಾಪುರ ಗ್ರಾಮದ ನೀರಿನ ಟ್ಯಾಂಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೋಡಗಿದ್ದ ಐದಾರು ಜನರನ್ನ ಬಂಧಿಸಿ 3050ರೂ ಹಣವನ್ನು ನ್ಯಾಮತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.
ನ್ಯಾಮತಿ : ಚಿನ್ನಿಕಟ್ಟೆ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ವಶ
ನ್ಯಾಮತಿ : ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಮನೆಯೊಂದರಲ್ಲಿ (16ಗ್ರಾಂ) ಸುಮಾರು 85000 ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳನ್ನು ಈಚೆಗೆ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ನ್ಯಾಮತಿ ಪೊಲೀಸ್ ಇಲಾಖೆಯ ಪಿಎಸ್ಐ. ಜಯ್ಯಪ್ಪ ನಾಯ್ಕ, ಸಿಬ್ಬಂದಿಗಳಾದ ಮಹೇಶ ನಾಯ್ಕ, ದೇವರಾಜ್, ನಿರಂಜನ, ಆನಂದ ಹಾಗೂ ಯಶವಂತಾಚಾರಿ ತಂಡ ಪತ್ತೆ ಹಚ್ಚಿ ಕಳ್ಳತನ ಮಾಡಿದವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಪಿ.ಐ, ಎನ್.ಎಸ್.ರವಿ ತಿಳಿಸಿದ್ದಾರೆ.
…