ನ್ಯಾಮತಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ತಕ್ಕ ಮಟ್ಟಿಗೆ ಮಳೆ ಬಿಡುವು ನೀಡಿದೆ.
ಹೆಚ್ಚು ಮಳೆ ಗಾಳಿಯಿಂದಾಗಿ ತಗ್ಗು ಪ್ರದೇಶದ ಈರುಳ್ಳಿ, ಮೆಕ್ಕೆಜೋಳ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಅಡಿಕೆ ಮರಗಳು ಸೇರಿದಂತೆ, ಬೀನ್ಸ್, ಸೌತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ
ಬಿದ್ದ ಮನೆಗಳ ವಿವರ; ಕಂಕನಹಳ್ಳಿ ಶೇಖರಪ್ಪ, ಕುಂಕುವ ಮಂಜಮ್ಮ ಮತ್ತು ವೃಂದಮ್ಮ, ಕಂಕನಹಳ್ಳಿ ಶೇಖರಪ್ಪ, ಸುರಹೊನ್ನೆ ಚಂದ್ರಮ್ಮ, ಯರಗನಾಳು ಲೋಕೇಶ್ವರಪ್ಪ ಎಂಬುವವರ ಮನೆಗಳ ಗೋಡೆಗಳು ಬಿದ್ದರೆ ಶನಿವಾರ ; ಸುರಹೊನ್ನೆ ಲೋಕೇಶಪ್ಪ, ದೊಡ್ಡೇರಿ ಲಕ್ಷೀದೇವಿ, ದೊಡ್ಡೇರಿ ಮೈಲಮ್ಮ, ಯರಗನಾಳ್ ತೀರ್ಥಪ್ಪ, ಚಟ್ನಹಳ್ಳಿ ಶೇಷಮ್ಮ, ದಾನಿಹಳ್ಳಿ ಗ್ರಾಮದ ರಾಜಪ್ಪ, ನ್ಯಾಮತಿ ನಟರಾಜ್, ಒಡೆಯರ ಹತ್ತೂರು ಗ್ರಾಮದ ರವಿಕುಮಾರ್ ಎಂಬುವವರ ಮನೆಯ ಗೋಡೆಗಳು ಬೀಳುವ ಮೂಲಕ ೨ದಿನಗಳಲ್ಲಿ ಅಪಾರ ನಷ್ಟ ಉಂಟಾಗಿದ್ದು ಯಾವುದೇ ಜೀವಹಾನಿಯಂತಹ ಪ್ರಕರಣಗಳು ವರದಿಯಾಗಿಲ್ಲ. ಗೋಡೆ ಬಿದ್ದು ಹಾನಿಯಾಗಿದ್ದ ಗೋಡೆಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.