ನ್ಯಾಮತಿ : ಮಗು ಆಡಿಸಲೆಂದು ಮನೆಯ ನಡುಮನೆಯಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡು ಬಾಲಕನೋವ್ರನು ಮೃತಪಟ್ಟಿರುವ ಘಟನೆ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ.
ಪಿ.ಜೆ.ಕೋಟ್ರೇಶ್ (13)ಮೃತ ಬಾಲಕ. ಶಿವಮೊಗ್ಗ ಜ್ಞಾನಸಾಗರ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಬಾಲಕ ಎಂದಿನಂತೆ ಶಾಲೆಯಿಂದ ಮನೆ ಬಂದಾಗ ಜೋಕಾಲಿ ಆಡುವಾಗ ಆಕಸ್ಮಿಕ ಕೊರಳಿಗೆ ಸುತ್ತಿಕೊಂಡು ದುರ್ಘಟನೆ ನಡೆದಿದೆ.ಈ ಸಂಬಂಧ ಮೃತರ ತಂದೆ ಎನ್.ಜಿ.ಪ್ರವೀಣ ನೀಡಿದ ಮಾಹಿತಿಯ ಮೇರೆಗೆ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.