
ನ್ಯಾಮತಿ : ಪಟ್ಟಣದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಅಭಿಷೇಕ, ಮಂಡಲ ಪೂಜೆ ಮತ್ತು ಪಡಿ ಪೂಜೆ ಹಾಗೂ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಆಚರಿಸಲಾಯಿತು.
ಮಂಡಲ ಪೂಜೆ ಮತ್ತು ಪಡಿ ಪೂಜೆ ಮಹೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ಬುಧವಾರ ಶ್ರೀ ಸ್ವಾಮಿಯ ಧ್ವಜಾರೋಹಣದಿಂದ ಆರಂಭಗೊಂಡು ಶುಕ್ರವಾರ ಕುಂಭಾಭಿಷೇಕ, 18 ಮೆಟ್ಟಿಲು (ಪಡಿ) ಪೂಜೆ, ಪೂಜಾ ಕಾರ್ಯಕ್ರಮ, ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳಿಂದ ಶರಣು ಘೋಷ, ಪಡಿ ಪೂಜೆ, ಭಜನೆಯನ್ನು ಸಂಜೆ ನಡೆಸಲಾಯಿತು.
ಶನಿವಾರ ಮುಂಜಾನೆ ಗಣಪತಿ ಪೂಜಾ, ಶ್ರೀಅಯ್ಯಪ್ಪಸ್ವಾಮಿಯ ವಿಗ್ರಹಕ್ಕೆ ಭಸ್ಮ, ಅರಿಶಿಣ, ಕುಂಕುಮ, ಹಾಲು, ಮೊಸರು, ಜೇನುತುಪ್ಪ ರುದ್ರಾಭಿಷೇಕ ನಂತರ ದೇಗುಲದ ಅವರಣದಲ್ಲಿ ಗಣಹೋಮ ಮತ್ತು ಶ್ರೀ ಅಯ್ಯಪ್ಪಸ್ವಾಮಿಯ ವಿಗ್ರಹಕ್ಕೆ ತುಪ್ಪದ ಅಭಿಷೇಕ, ಮಹಾ ಮಂಗಳಾರತಿಯನ್ನು ಕೋಹಳ್ಳಿ ಹಿರೇಮಠದ ವಿಶ್ವಾರಾಧ್ಯ ಶಾಸ್ತ್ರೀ ನೇತೃತ್ವದಲ್ಲಿ ನೆರವೇರಿಸಲಾಯಿತು.

ಶ್ರೀಅಯ್ಯಪ್ಪಸ್ವಾಮಿ ದೇಗುಲದ ಅರ್ಚಕ ಸುಬ್ರಹ್ಮಣ್ಯ ಸ್ವಾಮಿ ಪೌರೋಹಿತ್ಯದಲ್ಲಿ ಅಯ್ಯಪ್ಪ ಸ್ವಾಮಿ ವ್ರತಧಾರಿ ಸ್ವಾಮಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ, ಅಯ್ಯಪ್ಪ ಶರಣು ಘೋಷ, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನೆರವೇರಿತು.
ಅಯ್ಯಪ್ಪ ಮಾಲೆ ಹಾಕಿದ ದೀಕ್ಷಾಧಾರಿಗಳು ಸುಮಾರು 3 ವರ್ಷದಿಂದ 12 ವರ್ಷದೊಳಗಿನ 12 ಬಾಲೆಯರು ಮತ್ತು ಬಾಲಕರು ಶನಿವಾರ ಪೂಜಾ ಸಲ್ಲಿಸಿ ವ್ರತಾಧಾರಿಗಳು ತಲೆಯ ಮೇಲೆ ಇರುಮುಡಿ ಹೊತ್ತು 18 ಮೆಟ್ಟಿಲು (ಪಡಿ) ಪೂಜೆ ಸಲ್ಲಿಸಿ 18 ಮೆಟ್ಟಿಲು ಹತ್ತುವ ಮೂಲಕ ಅಯ್ಯಪ್ಪನ ತುಪ್ಪದ ಅಭಿಷೇಕ ಸಲ್ಲಿಸಿ ದರ್ಶನ ಪಡೆದರು.
ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಹಾಗೂ ಅಯ್ಯಪ್ಪ ಸ್ವಾಮಿ ಸದಸ್ಯರೆಲ್ಲರೂ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳಿಂದ ಮಹಾಪೂಜಾ ಸೇವೆ, ಪೂಜಾ ಕಾರ್ಯಕ್ರಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.