ನ್ಯಾಮತಿ : ಶಿಕಾರಿಪುರ-ಶಿವಮೊಗ್ಗ ರಸ್ತೆಯ ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಸಮೀಪ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಚಿನ್ನಿಕಟ್ಟೆಯ ಗ್ರಾಮದ ತಮಿಳು ಕಾಲೋನಿ ನಿವಾಸಿಏಳುಮಲೈ (50) ಮೃತ ವ್ಯಕ್ತಿ. ಇವರು ಸವಳಂಗ ಗ್ರಾಮದಿಂದ ಸ್ವಗ್ರಾಮಕ್ಕೆ ವಾಪಸ್ ತೆರಳುವಾಗ ಶಿಕಾರಿಪುರದ ಕಡೆಯಿಂದ ಬಂದ ಕಾರು ಬೈಕ್ಗೆ ಡಿಕ್ಕಿಯಾಗಿ ಗಂಭೀರ ಪೆಟ್ಟಾಗಿದೆ.
ಗಂಭೀರ ಪೆಟ್ಟಾದ ಬೈಕ್ ಸವಾರನನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತನ ಪುತ್ರ ನ್ಯಾಮತಿ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.