ಶಿವಮೊಗ್ಗ : ಜಾಗತಿಕ ಯುಗದಲ್ಲಿ ವಿಲಾಸಿ ಜೀವನಕ್ಕೆ ಮಾರು ಹೋದ ಯುವತಿಯರಿಗೆ ಹೈಫೈ ಜೀವನ ಬೇಕಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಯುವಕರು ಹೆಣ್ಣು ಸಿಗದೆ ಹತಾಶೆಯಾಗುತ್ತಿದ್ದಾರೆ. ಈ ಕಾರಣದಿಂದ ಸಮಾಜದಲ್ಲಿ ಯುವಕರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ..ಇದಕ್ಕೆ ತಾಜಾ ಉದಾಹರಣೆಯಾಗಿ ಸಾಗರ ತಾಲೂಕಿನ ಕೈರಾ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹೌದು..ಈ ಗ್ರಾಮದ ಯುವಕ ಹಲವು ದಿನಗಳಿಂದ ಹೆಣ್ಣು ಹುಡುಕುತ್ತಿದ್ದು, ಅವರು ನೀಡುತ್ತಿದ್ದ ಬೇಡಿಕೆಗಳು ಆತನಲ್ಲಿ ಇರಲಿಲ್ಲ. ಸುಮಾರು ಹೆಣ್ಣು ನೋಡಿದರೂ ಅವರು ಯಾರು ಒಪ್ಪುತ್ತಿರಲಿಲ್ಲ. ಈ ನಡುವೆ ವಯಸ್ಸು ದಿನದಿಂದ ದಿನಕ್ಕೆ ಏರ ತೊಡಗಿತ್ತು. ಇನ್ನೊಂದೆಡೆ ಸಮಾಜದಲ್ಲಿ ಚುಚ್ಚು ಮಾತುಗಳು ಆತನಲ್ಲಿ ಜುಗುಪ್ಸೆ ಮೂಡುವಂತೆ ಮಾಡಿತ್ತು. ಈ ಕಾರಣದಿಂದ ಆತ ಆತ್ಮಹತ್ಯೆ ದಾರಿ ಹಿಡಿದು ನೇಣಿಗೆ ಶರಣಾದ ಎಂದು ಹೇಳಲಾಗಿದೆ. ಸಾಗರ ತಾಲೂಕಿನ ಆಚಾಪುರ ಗ್ರಾಮ ಪಂಚಾಯಿತಿಯ ಕೈರಾ ಗ್ರಾಮದ ಸಂದೀಪ (33) ಮೃತಪಟ್ಟ ನತದೃಷ್ಟನಾಗಿದ್ದು, ತೋಟದ ಶೆಡ್ನಲ್ಲಿ ಮೃತಪಟ್ಟಿದ್ದಾರೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.