
ದಾವಣಗೆರೆ : ಭದ್ರಾ ಕಾಲುವೆಗಳ ಆಧುನಿಕರಣ ಇಲ್ಲ. ಬೆಲೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ, ರೈತನ ಸಂಕಷ್ಟಕ್ಕೆ ಧಾವಿಸಲು ಆವರ್ತ ನಿಧಿಯ ಪ್ರಸ್ತಾವ ಇಲ್ಲ ಎಂದುರೈತಪರ ಹೋರಾಟಗಾರರು, ಜಿಲ್ಲಾ ಬಿಜೆಪಿ ವಕ್ತಾರ ಕೊಳೆನೇಹಳ್ಳಿ ಬಿ.ಎಂ.ಸತೀಶ್ ಬಜೆಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹನಿ, ತುಂತುರು ನೀರಾವರಿ ಘಟಕಗಳಿಗೆ ಕೇಂದ್ರ ಸರ್ಕಾರ ಶೇ.90 ಸಹಾಯಧನ ಲಭ್ಯವಿದೆ. ಆದ್ರೂ 1.81 ಲಕ್ಷ ರೈತರಿಗೆ ಹನಿ, ತುಂತುರು ನೀರಾವರಿ ಘಟಕಗಳಿಗೆ ಸಬ್ಸಿಡಿ ಎಂದು ಘೋಷಿಸಿರುವುದು ಹಳೆ ಬಾಟಲಿಯಲ್ಲಿ ಹೊಸ ಮಧ್ಯೆ ಎಂಬಂತಾಗಿದೆ.
ಅನುಗ್ರಹ ಯೋಜನೆಯಡಿ ಹಿಂದಿನ ಸಾಲಿನಲ್ಲಿ ಒಂದೇ ಒಂದು ಸತ್ತ ಕುರಿ, ಮೇಕೆ, ಧನ ಕರುಗಳಿಗೆ ಪರಿಹಾರ ನೀಡದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಹಾರದ ಮೊತ್ತ ಏರಿಕೆ ಮಾಡಿರುವುದು ಕುರಿಗಾರರ, ಪಶು ಪಾಲಕರ ಕಣ್ಣು ಹೊರೆಸುವ ಕುತಂತ್ರ. ಒಟ್ಟಾರೆಯಾಗಿ ರೈತ ವಿರೋಧಿ ಬಜೆಟ್ ಇದಾಗಿದೆ ಎಂದರು.

