ನ್ಯಾಮತಿ.; ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಮೂಲಕ ವಸ್ತು ನಿಷ್ಠಾ ವರದಿಗಳನ್ನು ಮಾಡುವ ಮೂಲಕ ಇಂದಿಗೂ ತನ್ನ ವಿಶ್ವಾಸರ್ಹತೆಯನ್ನು ಪತ್ರಿಕೆಗಳು ಉಳಿಸಿಕೊಂಡು ಬರುತ್ತಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಇ.ಎಂ.ಮಂಜುನಾಥ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ನ್ಯಾಮತಿ ಘಟಕದ ವತಿಯಿಂದ ನಡೆದ ೩ನೇ ವರ್ಷದ ಪತ್ರಿಕಾ ದಿನಾಚರಣೆಯ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವಾ ಮನೊಭಾವದಿಂದ ಮಾಡುವವರು ಪತ್ರಿಕಾ ವೃತ್ತಿಗೆ ಬರಬಹುದಾಗಿದ್ದು ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗವನ್ನು ಕಲಿಯುವಂತೆ ಹೇಳಿದ ಅವರು ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳ ಹೊರತಾಗಿ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಮುಂದಿನ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಪತ್ರಿಕೆಗಳ ಓದು ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳು ನಿತ್ಯವು ಪತ್ರಿಕೆಗಳನ್ನು ಓದುವಂತೆ ಸಲಹೆ ನೀಡಿದರು. ೩೪ನೇ ರಾಜ್ಯಮಟ್ಟದ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.
ನ್ಯಾಮತಿ ಪೊಲೀಸ್ ಠಾಣೆಯ ಪಿಐ ಎನ್.ಎಸ್.ರವಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗವು ಬಡವರ, ಅಸಾಹಾಯಕರಿಗೆ ಸುಲಭವಾಗಿ ದೊರೆಯುವ ಮೂಲಕ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಧ್ವನಿಯಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಕಿಚ್ಚುಹಚ್ಚಿಸುವಲ್ಲಿ ಪತ್ರಿಕಾ ರಂಗದ ಪಾತ್ರ ದೊಡ್ಡದಾಗಿದ್ದು ಸಮಾಜದ ತಪ್ಪು ಸರಿಯನ್ನು ತಿದ್ದಿ ತೀಡುವ ಮೂಲಕ ಕೆಲಸ ಮಾಡುತ್ತಿದ್ದು ಪತ್ರಕರ್ತರ ಸಮಸ್ಯೆಗಳಿದ್ದರೆ ಸರ್ಕಾರವು ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಬೆಳಗುತ್ತಿ ಬಿ.ಎಚ್.ಉಮೇಶ್ ಮಾತನಾಡಿ, ಸಾಧಕರನ್ನು ಬೆಳಕಿಗೆ ತರುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ಎಲ್ಲಿಯಾದರೂ ಸಮಸ್ಯೆಗಳಿದ್ದರೆ ಸಂಬಂಧಿತ ಇಲಾಖೆಯವರನ್ನು ಗಮನ ಸೆಳೆಯುವ ವರದಿ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಕೆರೆ, ರೈತರ ರಸ್ತೆಯ ಬದಿಯ ಜಮೀನುಗಳಲ್ಲಿ ಕುಡುಕರು, ಮದ್ಯ ಸೇವಿಸಿ ಬಾಟಲಿಗಳನ್ನು ಹೊಡೆದು ಹಾಕಿ ಜಮೀನುಗಳಲ್ಲಿ ರೈತರು ಓಡಾಡದಂತೆ ಮಾಡುತ್ತಾರೆ ಇವುಗಳ ಬಗ್ಗೆ ವರದಿ ಮಾಡಬೇಕು ಎಂದರು.
ಕಾರ್ಯಕ್ರಮದ ನ್ಯಾಮತಿ ಘಟಕದ ಸಂಚಾಲಕ ಎಂ.ಎಸ್.ಶಾಸ್ತ್ರೀಹೊಳೆಮಠ ಅಧ್ಯಕ್ಷತೆ ವಹಿಸಿ ಅಧ್ಯಕ್ಷರ ಮಾತುಗಳನ್ನಾಡಿದರು. ನ್ಯಾಮತಿ ಘಟಕಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಹೊನ್ನಾಳಿ ಪರ್ತಕರ್ತರಾದ ಎಂಪಿಎಂ. ಷಣ್ಮುಖಯ್ಯ ಹಿರಿಯ ಪತ್ರಕರ್ತರಾದ ಶಿವರುದ್ರಯ್ಯ ಹಿರೇಮಠ ಸನ್ಮಾನ ಸ್ವಿಕರಿಸಿ ಮಾತನಾಡಿದರು. ಪ್ರಾರ್ಥನೆ ಚಿನ್ಮಯಿ, ಕವನ ಸಂಗಡಿಗರು ಹಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೃದ್ದಿನ್, ವಿರೇಶ್ ಸಹಕಾರ್ಯದರ್ಶಿ, ವೇದಮೂರ್ತಿ ಜಿಲ್ಲಾಘಟಕ, ಹಿರಿಯ ಉಪನ್ಯಾಸಕ ನಾಗರಾಜ, ನವಲೆ ಗಂಗಾಧರ, ರೈತ ಮುಖಂಡ ಹೊಸಮನೆ ಮಲ್ಲಿಕಾರ್ಜುನ ಕುಂಬಾರ, ಸಾಮಾಜಿಕ ಕಾರ್ಯಕರ್ತ ಡಿ.ಎಂ.ವಿಜಯೇಂದ್ರ, ಸೇರಿದಂತೆ ಪರ್ತಕರ್ತರಾದ ಸದಶಿವಯ್ಯ ಹಿರೇಮಠ, ಷಣ್ಮುಖ.ಬಿ.ಈ, ಹಳದಪ್ಪ, ರಾಂಪುರ ಹಾಲೇಶ್, ಗಿರೀಶನಾಡಿಗ್, ರಮೇಶಮಡಿವಾಳ ಇತರರು ಇದ್ದರು.