
ದಾವಣಗೆರೆ: ಕನ್ನಡ ಚಿತ್ರರಂಗದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಸೇರಿಕೊಂಡು ಹೊಸದಾಗಿ ಕನ್ನಡ ಫಿಲಂ ಚೇಂಬರ್ ಸ್ಥಾಪಿಸಿದ್ದೇವೆ ಎಂದು ಚೇಂಬರ್ ನ ಅಧ್ಯಕ್ಷ ಎಂ.ಎಸ್ ರವೀಂದ್ರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಸಿನಿಮಾಗೆ ಸಂಬಂಧಪಟ್ಟ ನಿರ್ದೇಶಕರು, ಕ್ಯಾಮೆರಾಮನ್, ಸಂಗೀತ, ಫೈಟ್ ಮಾಸ್ಟರ್ ಎಲ್ಲ ವಿಭಾಗದವರಿಗೆ ಲೈಫ್ ಟೈಮ್ ನೊಂದಣಿ ಮಾಡಿ ಐಡಿ ಕಾರ್ಡ್ ನೀಡಲಾಗುವುದು. ಲೈಫ್ ಟೈಮ್ ಸದಸ್ಯತ್ವ 2000 ರೂ ನೊಂದಣಿ ಮಾಡಿ ಐಡಿ ಕಾರ್ಡ್ ಕೊಡಲಾಗುವುದು. ನಿರ್ಮಾಪಕರು ಮೂವಿ ಬ್ಯಾನರ್ ಲೈಫ್ ಟೈಮ್ ಸದಸ್ಯತ್ವ 5000 ಹಾಗೂ ಮೂವಿ ಟೈಟಲ್ ಗೆ 500 ರೂ ಶುಲ್ಕ ನಿಗದಿಮಾಡಿದ್ದೇವೆ.ನೊಂದಣಿಯಾದ ಕನ್ನಡ ಫಿಲಂ ಚೇಂಬರ್ ಚುನಾವಣೆಯಲ್ಲಿ ಮತಹಾಕುವ ಅರ್ಹತೆ ಹೊಂದಿರುತ್ತಾರೆ ಹಾಗೂ ಅವರು ಕೂಡ ಸ್ವರ್ಧೆ ಮಾಡಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್ ಎನ್ ಪ್ರಹ್ಲಾದ್,ಎಂ.ಎಸ್ ರಮೇಶ್,ರುದ್ರಮುನಿ,ಜಗನ್ನಾಥ್,ಚಿರತೆ ನಾಗರಾಜ್,ಅಂಜಿನಪ್ಪ,ನರಸಿಂಹಯ್ಯ ಉಪಸ್ಥಿತರಿದ್ದರು.