
ಶಿವಮೊಗ್ಗ : ವೈಯಕ್ತಿಕ ಕಾರಣಕ್ಕೆ ಅಣ್ಣನೇ ತನ್ನ ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಇಲ್ಲಿನ ಅನುಪಿನಕಟ್ಟೆ ಬಡಾವಣೆಯಲ್ಲಿ ನಡೆದಿದೆ.
ಗಿರೀಶ್ ನಾಯ್ಕ (30) ಮೃತಪಟ್ಟ ವ್ಯಕ್ತಿ. ಲೋಕೇಶ್ ನಾಯಕ ಹತ್ಯೆ ಮಾಡಿದ ಆರೋಪಿ. ಅನುಪಿನಕಟ್ಟೆ ಲಂಬಾಣಿ ತಾಂಡದಲ್ಲಿ ಘಟನೆ ನಡೆದಿದೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ಮಧ್ಯೆ ನಡೆದ ಗಲಾಟೆಯಿಂದ ಈ ಒಂದು ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಮೊದಲು ಈಳಿಗೆ ಮಣೆಯಿಂದ ಹೊಡೆದು ತದನಂತರ ಕಲ್ಲು ಎತ್ತಾಕಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ತೀವ್ರ ರಕ್ತ ಶ್ರಾವದಿಂದ ಗಿರೀಶ್ ಸ್ಥಳ ದಲ್ಲೇ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಆರೋಪಿ ಲೋಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ.


ಸಹೋದರರಿಬ್ಬರೂ ಕೂಲಿ ಕಾರ್ಮಿಕರೆಂದು ಹೇಳಲಾಗುತ್ತಿದ್ದು ಲೋಕೇಶ್ ಮದುವೆಯಾಗಿದ್ದರೂ ಪ್ರತ್ಯೇಕವಾಗಿ ವಾಸವಾಗಿದ್ದನು. ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಆರೋಪಿ ಲೋಕೇಶ್‌ನನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

