
ದಾವಣಗೆರೆ:
ಸಾರ್ವಜನಿಕರ ಮನವಿ ಮೇರೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನಗರಸಾರಿಗೆ ವ್ಯವಸ್ಥೆ ಕೈಗೊಳ್ಳಲು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್ ಹೆಬ್ಬಾಳ್ ಅವರಿಗೆ ಸೂಚನೆ ನೀಡಿದ್ದಾರೆ ಹಾಗೂ ನಗರಸಾರಿಗೆ ವ್ಯವಸ್ಥೆ ಜಾರಿಗೊಳಿಸಿದ್ದಾರೆ.
ದಾವಣಗೆರೆ ನಗರ ವ್ಯಾಪ್ತಿಯ ಅಕ್ತರ್ ರಾಜ್ ವೃತ್ತದ ಮಾರ್ಗವಾಗಿ ಸಂಗೊಳ್ಳಿರಾಯಣ್ಣ ವೃತ್ತ,ಬಾಲಾಜಿ ವೃತ್ತ,ಕುಂದವಾಡ ಕೆರೆ,ಎಸ್ ಎಸ್ ಬಡಾವಣೆ,ಶಾರದಾಮಂದಿರ,ಲಕ್ಷ್ಮೀ ಫ್ಲೋರ್ ಮಿಲ್,ಗುಂಡಿವೃತ್ತ ಮಾರ್ಗವಾಗಿ ರೈಲ್ವೆನಿಲ್ದಾಣಕ್ಕೆ ಬೆಳಗ್ಗೆ 7 ಗಂಟೆಗೆ,ಮಧ್ಯಾಹ್ನ 1.05 ಕ್ಕೆ ಹಾಗೂ ಸಂಜೆ 5 ಗಂಟೆಗೆ ನಗರ ಸಾರಿಗೆ ಬಸ್ ಸಂಚರಿಸಲಿದೆ ಹಾಗೂ ರೈಲ್ವೆ ನಿಲ್ದಾಣದಿಂದ ಗುಂಡಿವೃತ್ತ,ಲಕ್ಷ್ಮೀಫ್ಲೋರ್ ಮಿಲ್,ಶಾರದಾಮಂದಿರ,ಎಸ್ ಎಸ್ ಬಡಾವಣೆ,ಕುಂದವಾಡಕೆರೆ ಮುಖಾಂತರ ಬಾಲಾಜಿವೃತ್ತ,ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಅಕ್ತರ್ ರಾಜ್ ವೃತ್ತ ಮಾರ್ಗದಲ್ಲಿ ಮಧ್ಯಾಹ್ನ 12.30ಕ್ಕೆ ಹಾಗೂ ಸಂಜೆ 4.30 ಕ್ಕೆ ಪ್ರತಿನಿತ್ಯ ನಗರ ಸಾರಿಗೆ ಬಸ್ ವ್ಯವಸ್ಥೆ ಪ್ರಾರಂಭಿಸಲಾಗಿದೆ.


ನಗರದ ಎಸ್ ಎಸ್ ಬಡಾವಣೆ,ಬಾಲಾಜಿನಗರ,ಬಸವೇಶ್ವರ ಲೇಔಟ್ ,ಮಹಾಲಕ್ಷ್ಮೀ ಲೇಔಟ್ ನಾಗರೀಕರ ಬಹುಬೇಡಿಕೆಗೆ ಸ್ಪಂದನೆ ದೊರೆತಿದೆ.ಸಂಸದರ ಜನಸ್ನೇಹಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.