ಸಾಗರ : ನಿಮ್ಮನ್ನು ನಂಬಿ ದೋಣಿ ಹತ್ತಿದ್ದೇನೆ ದಡ ಸೇರಿಸಿ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಆನಂದಪುರದಲ್ಲಿ ಗಂಗಾಮತ ಸಮಾಜದ ಹಾಗೂ ಕಾರ್ಯಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದ್ದೇನೆ, ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಅಭಿಲಾಷೆ ಹೊಂದಿದ್ದೇನೆ ನಿಮ್ಮನ್ನು ನಂಬಿ ನಾನು ದೋಣಿ ಮೇಲೆ ಕೂತಿದ್ದೇನೆ ನನ್ನನ್ನು ದಡ ಸೇರಿಸಿ ಎಂದು ಮತದಾರರಲ್ಲಿ ಮತಯಾಚನೆ ಮಾಡಿದರು.