ದಾವಣಗೆರೆ : ದೇಶದಲ್ಲಿ ಯಾವ ಮೋದಿ ಅಲೆ ಇಲ್ಲ ಬದಲಾವಣೆ ಮಾಡಬೇಕೆನ್ನುವ ಗಾಳಿ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ದಾವಣಗೆರೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ.
ಯಾವ ಮೋದಿ ಅಲೆ ಇಲ್ಲ, ಮೋದಿಯನ್ನು ಬದಲಾವಣೆ ಮಾಡಬೇಕು ಎನ್ನುವ ಗಾಳಿ ಇದೆ. ರಾಜ್ಯದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದು ಅದರಲ್ಲೂ ಕಾಂಗ್ರೆಸ್ ಪರ ಅಲೆ ಇದೆ.
ರಾಜ್ಯದ ಜನರಿಗೆ ನೀಡಿದ ಗ್ಯಾರೆಂಟಿ ಯೋಜನೆಗಳಿಂದ ಜನರು ಕಾಂಗ್ರೆಸ್ ಮೇಲೆ ಆಶೀರ್ವಾದ ಮಾಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಡೋಗಿದೆ ಎಂದು ಪ್ರಧಾನಿ ಗಳು ಹೇಳಿದ್ದಾರೆ.ನಾನು ಅಂಕಿಅಂಶಗಳನ್ನು ಸದನದಲ್ಲಿ ಬಹಿರಂಗ ಪಡಿಸುತ್ತೇನೆ
ಅವರ ಅಡಳಿತ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದನ್ನು ತಿಳಿಸುತ್ತೇನೆ. ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಯನ್ನು ಕರ್ನಾಟಕ ಪೋಲೀಸರೇ ಸುಳಿವು ಹಿಡಿದು ಬಂಧಿಸಿದ್ದಾರೆ.
ನೇಹಾ ಹತ್ಯೆ ಮಾಡಿದ ಅರೋಪಿಯನ್ನು ಒಂದು ಗಂಟೆಯೊಳಗೆ ಬಂಧನ ಮಾಡಿದ್ದೇವೆ.ಕಾನೂನು ಬಾಹಿರವಾಗಿ ಕೃತ್ಯಗಳು ನಡೆದರೆ ಅದರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ನಮ್ಮ ಸರ್ಕಾರ ಮಾಡಿದೆ.
ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಕೂಡ ನಾನೇ ಮುಂದು ನಿಂತು ಸುಟ್ಟು ಹಾಕಿಸಿದ್ದೇನೆ. ಆದರೆ ಬಿಜೆಪಿಯವರು ಇದನ್ನೇಲ್ಲ ಅರಿತು ಮಾತಮಾಡಲಿ.
ಸಂಸದ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಮೇಲೆ ಈಗಾಗಲೇ ದೂರು ದಾಖಲಾಗಿದೆ.ರಾಜ್ಯದಲ್ಲಿ ಈ ರೀತಿ ಘಟನೆ ನಡೆದಿದೆ ಎಂದು ಕೂಡಲೇ ತನಿಖೆ ನಡೆಸುತ್ತೇವೆ
ವಿದೇಶಕ್ಕೆ ಓಡಿ ಹೋದ ಪ್ರಜ್ವಲ್ ರ ಪ್ಲೈಟ್ ಟಿಕೇಟ್ ಅನ್ನು ಈಗಾಗಲೇ ಸೀಜ್ ಮಾಡಲಾಗಿದೆ.
ಫಾರಂ41ನಲ್ಲಿ ನೋಟೀಸ್ ನೀಡಲಾಗಿದೆ 24 ಗಂಟೆಯ ಒಳಗೆ ತನಿಖೆಗೆ ಹಾಜರಾಗಬೇಕು.ಇಲ್ಲವಾದ್ರೆ ಅವರನ್ನು ಬಂಧಿಸಬೇಕೋ ಇಲ್ಲ ಬೇರೆ ಕ್ರಮಕೈಗೊಳ್ಳಬೇಕೋ ಎನ್ನುವುದು ಎಸ್ ಐ ಟಿಗೆ ಬಿಟ್ಟಿದ್ದೇವೆ.ತಪ್ಪಿತಸ್ಥನನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡೋದಿಲ್ಲ
ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ, ಕಾನೂನು ಎಲ್ಲರಿಗೂ ಒಂದೇ. ಅಮಿತ್ ಶಾ ಅವ್ರುಗೆ ಮಾಹಿತಿ ಕೊರತೆ ಇದೆ ಅನ್ಸುತ್ತೆ.ಮಹಿಳಾ ಅಯೋಗಕ್ಕೆ ದೂರು ಬಂದ ನಂತರ ತನಿಖೆ ನಡೆಸಿದ್ದೇವೆ, ಎಸ್ ಐ ಟಿಗೆ ತನಿಖೆಗೆ ವಹಿಸಲಾಗಿದೆ.
ಲೋಕಸಭಾ ಚುನಾವಣೆಯ ನಂತರ ಗ್ಯಾರೆಂಟಿ ನಿಲ್ಲುತ್ತದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ.
ಅದಕ್ಕಾಗಿಯೇ ಬಜೆಟ್ ನಲ್ಲಿ ಹಣವನ್ನು ತೆಗೆದಿಡಲಾಗಿದೆ ಜಿ ಪರಮೇಶ್ವರ್ ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿತ ಮಾತನಾಡಿ, ದೇಶದಲ್ಲಿ ಇಂತಹ ಘಟನೆ ನಡೆದಿದೆ ಎಂದು ಕೇಳಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಮೇಲೆ ಆರೋಪ ಬಂದಿದೆ.ಸಿಎಂಗೆ ಮತ್ತು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೆ ಪತ್ರ ಬರೆದಿದ್ದಾರೆ. ತಕ್ಷಣ ವಿಶೇಷ ತನಿಖಾತಂಡ ರಚಿಸಿ ತನಿಖೆ ಮಾಡಲು ಹೇಳಲಾಗಿದೆ, ತನಿಖೆ ನಡಿತಾ ಇದೆ ತನಿಖೆ ವರದಿ ಭೇಗ ಕೊಡುವಂತೆ ಸರ್ಕಾರ ಸೂಚನೆ ನೀಡಿದೆ.ಪ್ರಜ್ವಲ್ ಹೊರದೇಶಕ್ಕೆ ಹೋಗಿರುವುದು ಅವರ ಏರ್ ಟಿಕೆಟ್ ಮೇಲೆ ಗೊತ್ತಾಗಿದೆ.
ಪ್ರಜ್ವಲ್ ಹೊರದೇಶಕ್ಕೆ ಹೋದರೆ ಬಿಡುವುದಿಲ್ಲ.ಎಸ್ ಐಟಿ ಅವರನ್ನು ಕರೆತರುವ ನಿರ್ಧಾರ ಮಾಡುತ್ತಾರೆ. ಕೇಂದ್ರ ಸರ್ಕಾರದ ಸಹಾಯಬೇಕು.ನಮ್ಮವರೇ ಹೋಗಿ ಕರೆದುಕೊಂಡು ಬರಬೇಕು. ಎಲ್ಲ ಎಸ್ ಐಟಿ ನಿರ್ಧಾರ ಮಾಡುತ್ತದೆ. ಘಟನೆಗೆ ಸಾಕಷ್ಟು ಟಿಕೆ ಟಿಪ್ಪಣಿ ಬರ್ತಾ ಇದಾವೆ.ತನಿಖೆ ಹಿನ್ನೆಲೆ ಯಾವುದಕ್ಕು ಪ್ರತಿಕ್ರಿಯೆ ಕೊಡಲ್ಲ
ಕಾನೂನು ಎಲ್ಲರಿಗೂ ಒಂದೇ ಎಂದು ಪರಮೇಶ್ವರ್ ಹೇಳಿದರು.
ಹೈಕಮಾಂಡ್ ಆದೇಶದ ಮೇರೆಗೆ ದಾವಣಗೆರೆಗೆ ಬಂದಿರುವೆ. ನಾನು ಶಾಮನೂರು ಕುಟುಂಬದ ಸದಸ್ಯ, ನಮ್ಮ ತಂದೆ ಕಾಲದಿಂದ ಒಡನಾಟ ಇದೆ. ಪ್ರಧಾನಿ ಮತ್ತು ಶಾ ರಾಜ್ಯಕ್ಕೆ ಬಂದ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದಿದ್ದಾರೆ.ಅವರಿಗೆ ಅಂಕಿ ಅಂಶಗಳನ್ನು ಸದನದಲ್ಲಿ ಹೇಳುತ್ತೆನೆ.ಕ್ರೀಮಿನಲ್ ಆಕ್ಟಿವಿಟೀಸ್ ಡಿಟಿಯಲ್ಸ್ ಕೊಡ್ತೆನಿ. ನಿಮ್ಮ ಸರ್ಕಾರಕ್ಕಿಂತ ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ
ರಾಮೇಶ್ವರಂ ಕೆಫೆ ಆರೋಪಿಯನ್ಞು ತುರ್ತಾಗಿ ಬಂಧಿಸಿದ್ದು ಇತಿಹಾಸ.ಇದುಕರ್ನಾಟಕ ಪೊಲೀಸ್ ಸಾಧನೆಆರೋಪಿ ಖರೀದಿಸಿದ ಟೋಪಿ ಆದಾರದ ಮೇಲೆ ಬಂಧನ ಮಾಡಲಾಗಿದೆ. ನೇಹಾ ಹತ್ಯ ಆರೋಪಿಯನ್ನು ಅರ್ದ ಗಂಟೆಯಲ್ಲಿ ಬಂಧನ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಸಿಐಡಿಗೆ ನೀಡಲಾಗಿದೆ.ಆ ಕುರಿತು ಹೆಚ್ಚು ಮಾತನಾಡಲಾರೆ.
ಡ್ರಗ್ ಪ್ರೀ ಸೋಸೈಟಿ ಮಾಡಲು ಮುಂದಾಗಿದ್ಧೆವೆ.ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದಿರುವ ಅವರಿಬ್ಬರ ಹೇಳಿಕೆ ಸತ್ಯಕ್ಕೆ ದೂರ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಪರಮೇಶ್ವರ್ ಕೌಂಟರ್ ನೀಡಿದರು.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಸ್ಫರ್ಧೆ ಮಾಡಿದ್ದಾರೆ.ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.ಪ್ರಭಾ ಮಲ್ಲಿಕಾರ್ಜುನ್ ಖಂಡಿತ ಗೆಲ್ಲುತ್ತಾರೆ
ನಾನು ಗೃಹ ಸಚಿವನಾಗಿ ನನಗೆ ಮಾಹಿತಿ ಇದೆ ಅವರು ಬಹುಮತದಿಂದ ಗೆಲ್ಲುತ್ತಾರೆ.ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಿದ್ದೆವೆ, ಅವುಗಳನ್ನು ದೇಶದಲ್ಲಿ ಕೊಡಬೇಕೆಂದು ಅನೌನ್ಸ್ ಮಾಡಿದ್ದಾರೆ.ಬಡ ಮಹಿಳೆಯರಿಗೆ ಒಂದು ಲಕ್ಷ ಕೊಡಲು ನಿರ್ಧಾರ ಮಾಡಿದ್ದಾರೆ.ರೈತರಿಗೆ ಅನುಕೂಲವಾಗುವಂತಹ ಯೋಜನೆ ಮಾಡುತ್ತೆವೆ ಎಂದರು.
ಬಿಜೆಪಿ ಮುಖಂಡ ಜೋಷಿ ವಿರುದ್ದ ಹರಿಹಾಯ್ದ ಗೃಹ ಸಚಿವ
ಸಂಸದ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಹಾರಲು ಬಿಟ್ಟು ಕಡ್ಲೇಪೂರಿ ತಿಂತಾ ಇದ್ದಾರೆ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಏರಪೋರ್ಟ್, ಪಾಸ್ ಪೋಟೊ, ವಿಸಾ ಯಾರ ಅಧೀದನಲ್ಲಿ ಬರುತ್ತೆ ಗೊತ್ತಾ..ಏರ್ ಟಿಕೆಟ್ ಕಸ್ಟಮ್ಸ್ ಏನ್ ಮಾಡ್ತಾ ಇದ್ದರು..ಕೇಂದ್ರ ಸರ್ಕಾರವೇ ಕ್ರಮ ವಹಿಸಬಹುದಿತ್ತು..ಅವರಿಗೆ ಮಾಹಿತಿ ಇದ್ದರೇ ಅವರೇ ತಡೀಬೇಕಾಗಿತ್ತಲ್ಲ..ನಮಗೆ ಯಾಕೆ ಬ್ಲೇಮ್ ಮಾಡ್ತಾರೆ..
ಜರ್ಮನಿಗೆ ಹೋಗಿದ್ದಾರೆ, ಅಲ್ಲಿ ಎಷ್ಟು ದಿನ ಇಟ್ಕೊಂಡು ಇರ್ತಾರೆ..ಕರೆ ತರುವ ಪ್ರಯತ್ನ ನಡೆದಿದೆ ಎಂದರು.
ಎಸ್ ಐಟಿ ವಿಶ್ವಾಸ ಇಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿ ನೀಡಿ, ಅವರು ಸಿಎಂ ಇದ್ದಾಗ ಪೊಲೀಸ್ ಚೆನ್ನಾಗಿತ್ತಾ..ಆಗ ಇದ್ದ ವಿಶ್ವಾಸ ಈಗ ಹೊರಟು ಹೋಯ್ತಾ..ಅವರ ಸರ್ಕಾರದಲ್ಲಿ ಎಸ್ ಐಟಿ ಚೆನ್ನಾಗಿತ್ತಾ..
ಅವರ ಜೊತೆ ಡಿಸಿಎಂ ಆಗಿದ್ದೇ ನಾನು ಎಂದರು.
ರಾಜು ಕಾಗೆ ಕರೆಂಟ್ ಕಟ್ ವಿಚಾರಕ್ಕೆ ಪ್ರತಿಕ್ರಿಯಿಸಿ,
ನಾವು ಈಗಾಗಲೇ ಹೇಳಿದ್ದೆವೆ.ಯಾವುದೇ ಗ್ಯಾರಂಟಿ ಕಟ್ ಮಾಡುವುದಿಲ್ಲ. ಚುನಾವಣೆ ನಂತರವು ಗ್ಯಾರಂಟಿ ಮುಂದುವರೆಯಲಿದೆ ಎಂದರು.