ದಾವಣಗೆರೆ : ಒಂದು ರಾಷ್ಟ್ರದ ಸರ್ವತೋಮುಖ ಬೆಳವಣಿಗೆಯಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯ . ಅಂತೆಯೇ ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ದೇಶವು ಬಲಿಷ್ಠವಾಗುತ್ತ ಹೋಗುತ್ತದೆ.
ಹಾಗೂ ನಮ್ಮ ದೇಶದಲ್ಲಿ ಸುಮಾರು 70 ಕೋಟಿ ಯುವಜನತೆ ಪ್ರಮಾಣವಿದೆ . ಯುವ ಜನತೆಯನ್ನು ಸರಿಯಾಗಿ ಬಳಸಿಕೊಂಡರೆ ದೇಶವು ಅತಿ ವೇಗವಾಗಿ ಉನ್ನತ ಸ್ಥಾನಕ್ಕೆ ಏರುವುದು 100% ಸತ್ಯ, ಹೀಗಿದ್ದರೂ ನಮ್ಮ ದೇಶ ಭಾರತ ಏಕೆ ಇನ್ನೂ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ? ಎಂಬುದೇ ಎಲ್ಲರಿಗೂ ಉದ್ಭವ ವಾಗುವ ಪ್ರಶ್ನೆ ?
ಯುವಜನತೆಯ ಪ್ರಮಾಣ ಹೆಚ್ಚಿದ್ದರೂ ಏಕೆ ಇಂಥಹ ಸ್ಥಿತಿ ?
ಮೊದಲನೆಯದಾಗಿ ಪ್ರಮುಖವಾಗಿ ಹೇಳುವುದಾದರೆ ಇತ್ತೀಚೆಗೆ ಯುವಜನತೆ ದಾರಿ ತಪ್ಪುತ್ತಿರುವುದು ಅಂತರ್ಜಾಲದಿಂದ ….!!! ಇಂದಿನ ಪೀಳಿಗೆಯ ಯುವಕ – ಯುವತಿಯರು ದಿನದ ಇಪ್ಪತ್ನಾಲ್ಕು ಗಂಟೆಯೂ ಸಹ ಫೇಸ್ಬುಕ್, ವಾಟ್ಸಾಪ್, ಟಿಕ್ ಟಾಕ್ ,ವಿಚಾಟ್ ,ಇನ್ಸ್ಟ್ರಾಗ್ರಾಮ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ . ಇದರ ಪೂರಕವಾಗಿ ಮೊಬೈಲ್ ಕಂಪನಿಗಳು ಇವರಿಗೆ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ . ಅಪಾಯಕಾರಿ ಅಂಶವೇನೆಂದರೆ ನಕಲಿ ಖಾತೆಗಳನ್ನು ತೆರೆದು ವ್ಯವಹರಿಸುವುದು, ಅಶ್ಲೀಲ ಸಂದೇಶ ರವಾನಿಸುವುದು , ಅಂತಹ ದುರ್ದೈವವೇ ಸರಿ.
ಪ್ರಸ್ತುತದಲ್ಲಿ ರಾಜಕಾರಣಿಗಳು ಯುವಜನತೆಯನ್ನು ಹಾಳು ಮಾಡುವುದರಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಪೈಪೋಟಿ ನೀಡಬಲ್ಲವರಾಗಿದ್ದಾರೆ . ಏಕೆಂದರೆ ತಮ್ಮ ಎಲ್ಲಾ ನೈತಿಕ ಮತ್ತು ಅನೈತಿಕ ಕೆಲಸಗಳನ್ನು ಬೇಕಾಬಿಟ್ಟಿಯಾಗಿ ನದಿ ನೀರಿನಂತೆ ಯುವಜನತೆಯನ್ನುಉಪಯೋಗಿಸಿಕೊಳ್ಳುತ್ತಿದ್ದಾರೆ.
ಚುನಾವಣೆ ಘೋಷಣೆಯಾದರಿಂದ ತಮ್ಮ ಪರ ಪ್ರಚಾರ ಮಾಡುವುದರಿಂದ ಹಿಡಿದು ಜನರನ್ನು ಮತಗಟ್ಟೆಗೆ ತರುವ ಜವಾಬ್ದಾರಿಯನ್ನು ಯುವಜನತೆಗೆ ಬಿಟ್ಟಿರುತ್ತಾರೆ . ಧರ್ಮ ಪ್ರೇಮದ ಆಮಿಷವನ್ನು ಅಡ್ಡಿ ಯುವಜನರಲ್ಲಿ ಕೋಮುಗಲಬೆ ಗಳನ್ನು ಎಬ್ಬಿಸುವಲ್ಲಿ ರಾಜಕಾರಣಿಗಳು ಪ್ರಮುಖ ಪಾತ್ರ ವಹಿಸುತ್ತಾರೆ , ಇವೆಲ್ಲವೂ ನಮ್ಮ ಯುವಜನತೆಗೆ ಹೇಗೆ ಅರ್ಥವಾದೀತು??
ದೇಶದ ತರುಣ ಸಂಪನ್ಮೂಲ ಇಷ್ಟೊಂದು ಕೆಟ್ಟ ರೀತಿಯಲ್ಲಿ ವಿನಾಶ ಹೊಂದುತ್ತಿರುವುದು ಖಂಡಿತವಾಗಿಯೂ ಅಪಾಯಕಾರಿ ಸಂಗತಿ ಅಲ್ಲವೇ? .
ಅಂತರ್ಜಾಲ ,ಭೂಗತಲೋಕ, ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಸಮಸ್ಯೆ ಇನ್ನೊಂದೆಡೆ ನಿಲ್ಲುತ್ತದೆ . ಪದವಿ ಮುಗಿಸಿದ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಸುಮ್ಮನೆ ಕೂರುವ ಪರಿಸ್ಥಿತಿ ಎದುರಾಗಿದೆ . ಕೆಲಸವಿಲ್ಲದೆ ಅಲೆಯುವವರ ಸಂಖ್ಯೆ ಒಂದೆಡೆಯಾದರೆ, ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆಯುವವರ ಸಮಸ್ಯೆಯು ಇನ್ನೊಂದೆಡೆ .
ಉತ್ತಮ ರೀತಿಯ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಸರ್ಕಾರಿ ನೌಕರರಿಗೂ ಸಿಗುವುದು ಕಬ್ಬಿಣದ ಕಡಲೆಯಂತಾಗಿದೆ. ಭ್ರಷ್ಟಾಚಾರಿಗಳಿಗೆ ಲಂಚವನ್ನು ನೀಡಿದರೆ ಮಾತ್ರ ನೌಕರಿಯೂ ಖಚಿತ.
ಇದಕ್ಕೆಲ್ಲಾ ನಮ್ಮನ್ನಾಳುವ ಸರ್ಕಾರವೇ ನೇರ ಹೊಣೆ ಹೊರಬೇಕು. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದ ಯುವಶಕ್ತಿ ಪೋಲಾಗುತ್ತಿದೆ.
ಇದಲ್ಲದೇ ಇನ್ನು ಕಾಲೇಜು ವಿದ್ಯಾರ್ಥಿಗಳ ವಿಷಯದ ಬಗ್ಗೆ ಗಮನಿಸುವುದಾದರೆ ಅವರದ್ದೂ ಕೂಡ ಭಿನ್ನವಾಗಿಲ್ಲ. ಉಜ್ವಲ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ವಿದ್ಯಾರ್ಥಿಗಳು ಬೀದಿ-ಬೀದಿಗಳಲ್ಲಿ ಪೊರ್ಕಿಗಳಂತೆ ಅಡ್ಡಾಡುತ್ತಾರೆ. ಸಮಾಜದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ.ಬೀಡಿ, ಸಿಗರೇಟ್, ಮದ್ಯಪಾನ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಅಲ್ಲವೇ? ದೇಶಕ್ಕಾಗಿ ಯಾ ಸಮಾಜಕ್ಕಾಗಿ ಅಲ್ಲದಿದ್ದರೂ ತಮ್ಮ ಏಳಿಗೆಗೋಸ್ಕರ ಹಗಲು ರಾತ್ರಿ ಶ್ರಮಿಸುವ ತಮ್ಮ ತಂದೆ-ತಾಯಿಯರ ಆಸೆಯ ಸಲುವಾಗಿಯಾದರೂ ಇಂತಹ ವಿದ್ಯಾರ್ಥಿಗಳು ಬದಲಾಗಬಹುದಲ್ಲವೇ????
ಸ್ವಾಮಿ ವಿವೇಕಾನಂದರು “ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ, ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ ” ಎಂದು ಜಗತ್ತಿಗೇ ಸಾರುತ್ತರೆ. ಎಂತಹ ಛಾತಿ ಇದೆ ಅವರ ಆ ಮಾತಿನಲ್ಲಿ. ಅಂದು ಅವರಾಡಿದ ಮಾತಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ಆದರೆ ದಿನದ ಕೆಲ ಗಂಟೆಗಳು ಅಥವಾ ವಾರದಲ್ಲಿ ಒಂದೋ ಎರಡೋ ದಿನ ಸಮಾಜಕ್ಕಾಗಿ ಮೀಸಲಿಟ್ಟರೆ ಸಾಕು ಅಬ್ದುಲ್ ಕಲಾಂ ರ 2020ರ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ. ಇದೆಲ್ಲದಕ್ಕೂ ಮೊದಲು ನಮ್ಮಲ್ಲಿ ದೇಶಭಕ್ತಿ ಜಾಗೃತವಾಗಬೇಕು.
ನನ್ನ ದೇಶ, ನನ್ನ ಜನ,ನನ್ನ ಸಮಾಜ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಜೈನ ಬೌದ್ಧ ಎಂಬ ಧರ್ಮ ಸಂಕೋಲೆಗಳಿಂದ ಹೊರ ಬಂದು ನಾವೆಲ್ಲರೂ ಭಾರತೀಯರು ಎಂಬ ಒಂದೇ ಧರ್ಮದಡಿ ಸೇರಬೇಕು. ಸ್ವದೇಶಿ ಉತ್ಪನ್ನಗಳ ಖರೀದಿ-ಮಾರಾಟದ ಬಗ್ಗೆ ಆಸಕ್ತಿವಹಿಸಬೇಕು. ಆಗ ಮಾತ್ರ ಈ ದೇಶದಲ್ಲಿ ಬದುಕಿದ್ದೂ ಸಾರ್ಥಕವಾಗುತ್ತದೆ. ಆದ್ದರಿಂದ ವಿವೆಕಾನಂದರ ವಾಕ್ಯದಂತೆ ಏಳಿ ಎದ್ದೇಳಿ ಯುವಕ-ಯುವತಿಯರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ, ವಿಶ್ರಮಿಸದಿರಿ. ತಾಯಿ ಭಾರತಾಂಬೆಯ ಪಾದಕ್ಕೆನಮ್ಮನ್ನು ಅರ್ಪಿಸಿಕೊಂದು ಅವಳ ಸೇವೆಗೆ ಕಂಕಣ ಬದ್ಧರಾಗೋಣ. ಇಡೀ ಪ್ರಪಂಚವೇ ಸಹಾಯಕ್ಕಾಗಿ ನಮ್ಮತ್ತ ಕೈ ಚಾಚುವಂತಹ ಜಗದ್ಗುರು ಭಾರತವನ್ನು ನಿರ್ಮಾಣ ಮಾಡಿ ನಮ್ಮ ಸನಾತರಿಗೆ ಗೌರವ ಸಲ್ಲಿಸೋಣ…….
|| ||ವಂದೇ ಮಾತರಂ|।
ಮಲ್ಲೇಶ್ ನಾಯ್ಕ . ಎಂ ಉಪನ್ಯಾಸಕರು
ದಾವಣಗೆರೆ . ಪ್ರತಿಕ್ರಿಯಿಸಿ (9632818431)…