
ದಾವಣಗೆರೆ: ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಎನ್.ರುದ್ರಮುನಿ ಮತ್ತು ಕಾರ್ಯಧ್ಯಕ್ಷ ಟಿ.ಎಸ್.ರಾಮಯ್ಯ ಹಾಗೂ ಪದಾಧಿಕಾರಿಗಳ ಸಹಯೋಗದೊಂದಿಗೆ ಹಾಗೂ ಉಪಸ್ಥಿತಿಯಲ್ಲಿ ನಾಯಕನಹಟ್ಟಿ ಹಾಗೂ ಹಿರಿಯೂರು ಛಲವಾದಿ ಬಂಧುಗಳ ಸಂಯುಕ್ತಾಶ್ರಯದಲ್ಲಿ ಇದೇ ಮೇ 12 ರಂದು ಇಲ್ಲಿನ ಜಯನಗರದ ಹೆಚ್.ಬಿ.ಇಂದಿರಮ್ಮ ರಾಮಯ್ಯ ಫಂಕ್ಷನ್ ಹಾಲ್ ನಲ್ಲಿ ಛಲವಾಧಿ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಮಾವೇಶದ ಸಂಚಾಲಕ ಎಲ್.ಪಂಚಾಕ್ಷರಯ್ಯ ಮಾತನಾಡಿ, ಅಂದು ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ಸಮಾವೇಶ ನಡೆಯಲಿದ್ದು ಸುಮಾರು 500 ಜನ ಆಗಮಿಸುವ ನಿರೀಕ್ಷೆ ಇದೆ. ವಧು ವರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಆಗಮಿಸತಕ್ಕದ್ದು. ನೊಂದಣಿ ಶುಲ್ಕ 300 ನಿಗದಿಪಡಿಸಲಾಗಿದ್ದು, ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ, ರಾಮಯ್ಯ, ಎಸ್.ಶೇಖರಪ್ಪ, ಹೆಚ್.ತಿಪ್ಪೇಸ್ವಾಮಿ, ಎ.ಡಿ.ರೇವಣಸಿದ್ದಪ್ಪ ಇದ್ದರು.

