


ದಾವಣಗೆರೆ : ಮಾರಿಕಣ್ಣು ಹೋರಿ ಮೇಲೆ ಎನ್ನುವಂತೆ ಎಲ್ಲರ ಕಣ್ಣು ನನ್ನ ಮೇಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ದಾವಣಗೆರೆಯ ಅಧಿಕೃತ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ.ನಾ ಮಪತ್ರ ವಾಪಸ್ಸು ಪಡೆಯುತ್ತೇನೆಂದು ಊಹಾಪೋಹಗಳಿಗೆ ತೆರೆ ಬಿದ್ದಿದೆ.ಗ್ಯಾಸ್ ಸಿಲಿಂಡರ್ ಚಿಹ್ನೆ ಸಿಕ್ಕಿದ್ದು ವಿನಯ್ ಕುಮಾರ್ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ.

ನಾನು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದಿಲ್ಲಾ. ದಾವಣಗೆರೆ ಜಿಲ್ಲೆಯಲ್ಲಿ ವಿನಯ್ ಕುಮಾರ್ ಹೆಸರು ಮನೆ ಮಾತಾಗಿದೆ.ಪಾಪ್ಯುಲಾರಿಟಿ ತಡೆಯಲಾಗದೆ ಪೋಟೋ ತಿರುಚುವ ಕೆಲಸ ಮಾಡುತ್ತಿದ್ದಾರೆ.ಲೋಕಸಭಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಿದ್ದೇನೆ.

ನನ್ನ ಜೊತೆ ಓಡಾಡುವವರನ್ನು ಗುರುತಿಸಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಶಾಮನೂರು ಅಭ್ಯರ್ಥಿ, ಸಿದ್ದೇಶ್ವರ್ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿಗಳಲ್ಲಾ. ಎಲ್ಲಾ ಸೇರಿ ಆರೋಗ್ಯಕರ ಚುನಾವಣೆ ಮಾಡೋಣ.30 ರಿಂದ 35 ವರ್ಷದಿಂದ ಅಧಿಕಾರ ಮಾಡಿಕೊಂಡು ಬಂದೋರು ಏನು ಮಾಡಿದ್ದೀರಿ.
ಮೇ 7 ಅತಿ ಹೆಚ್ಚು ಮತ ಹಾಕಿದರೆ ಪ್ರಜಾಪ್ರಭುತ್ವದ ಗೆಲುವಾಗುತ್ತದೆ.ಕುಟುಂಬ ರಾಜಕಾರಣದಿಂದ ದಾವಣಗೆರೆ ಜಿಲ್ಲೆಯ ಜನರು ಬೇಸತ್ತಿದ್ದಾರೆ.ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ, ಬಿಜೆಪಿಗೂ ಭಯ ಶುರುವಾಗಿದ್ದು ಬಿಜೆಪಿ ಹಾಗೂ ನನ್ನ ನಡುವೆ ಪೈಟ್ ನಡೆಯುತ್ತಿದೆ.
ದಾವಣಗೆರೆಯಲ್ಲಿ ಸಿಲಿಂಡರ್ ಗೆಲ್ಲುತ್ತೇ. ಮೋದಿ ಬಂದರು,ಸಿದ್ದರಾಮಯ್ಯ ಬಂದರೂ ನನ್ನ ಪರ ಪ್ರಚಾರ ಮಾಡುತ್ತಾರೆ.
ನಾವು ಸ್ಪೋಟವಾಗುವ ಸಿಲಿಂಡರ್ ಅಲ್ಲ ಆದರೂ ಹುಷಾರಾಗಿ ಇರಬೇಕು ಎಂದು ವಿನಯ್ ಕುಮಾರ್ ಹೇಳಿದರು.