ಶಿವಮೊಗ್ಗ : ಶ್ರಾವಣ ಮಾಸದ ಮೊದಲನೆಯ ಮಂಗಳವಾರದ ಕೃಷ್ಣ ಪಕ್ಷದ ತಿಥಿ ದಿನದಂದು ಈ ಮಂಗಳಗೌರಿ ವ್ರತವನ್ನು ಆಚರಣೆ ಮಾಡಲಾಗುತ್ತದೆ. ಈ ಮಂಗಳ ಗೌರಿ ವ್ರತವು ಮಹಿಳೆಯರಿಗೆ ತುಂಬಾ ವಿಶೇಷವಾದ ವ್ರತವಾಗಿದೆ. ಬೇಡಿದ ವರವನ್ನು ಕರುಣಿಸುವ ಈ ವ್ರತವು ಹಿಂದೂ ಧರ್ಮದ ಮಹಿಳೆಯರಿಗೆ ತುಂಬಾ ವಿಶೇಷವಾಗಿದೆ. ಪಾರ್ವತಿ ದೇವಿಯ ಆರಾಧನೆಯಿಂದ ಕುಟುಂಬ ವರ್ಗದವರಿಗೆ ಆಯಸ್ಸು ಆರೋಗ್ಯ ಎಲ್ಲವನ್ನು ಕರುಣಿಸುವ ಈ ದೇವಿಯ ಆರಾಧನೆ ತುಂಬಾ ವಿಶೇಷವಾಗಿದೆ .
ಕೃಷಿ ನಗರದ ಇನ್ನರ್ ವಿಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಅವರ ಮನೆಯಲ್ಲಿ ಮಂಗಳ ಗೌರಿ ವೃತವನ್ನು ಆಚರಣೆ ಮಾಡಲಾಗಿದ್ದು, ಸುಮಂಗಲಿಯರಿಗೆ ಫಲ ಪುಷ್ಪವನ್ನು ನೀಡಿ ಸತ್ಕರಿಸುವ ಮುಖಾಂತರ ಮಂಗಳ ಗೌರಿ ವ್ರತವನ್ನು ಬಹಳ ಭಕ್ತಿ ಶ್ರದ್ಧೆಯಿಂದ ಮಂಗಳ ಗೌರಿ ವ್ರತವನ್ನು ಆಚರಣೆ ಮಾಡಲಾಗಿದೆ. ಮಹಿಳೆಯರು ಮದುವೆಯಾದ ಮೊದಲ ವರ್ಷದಲ್ಲಿ ಮಂಗಳ ಗೌರಿ ಪೂಜೆ ಮಾಡುವುದು ತುಂಬಾ ವಿಶೇಷವಾಗಿದೆ.
ಮಂಗಳ ಗೌರಿ ಪೂಜೆಯ ಸಮಯದಲ್ಲಿ ಸವಿತಾ ಡಾ.ಪ್ರವೀಣ್, ಇನ್ನರ್ ವಿಲ್ ಮಾಜಿ ಅಧ್ಯಕ್ಷ ಬಿಂದು ವಿಜಯ ಕುಮಾರ್ ಹಾಗೂ ಮಾತೆಯರು ಉಪಸ್ಥಿತರಿದ್ದರು.