ನ್ಯಾಮತಿ.; ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಶ್ರೀಆಂಜನೇಯ ಸ್ವಾಮಿ ರಥೋತ್ಸವವು ಹಲಗೆ, ಡ್ರಮ್ ಸೆಟ್, ದಾಸಪ್ಪರ ವಾದ್ಯಗಳೊಂದಿಗೆ ಸಾಂಪ್ರದಾಯಕವಾಗಿ ಬುಧವಾರ ಜರುಗಿತು.
ಶ್ರೀಆಂಜನೇಯ ದೇವರ ಶಿಲಾ ಮೂರ್ತಿಗೆ ಮುಂಜಾನೆಯೇ ಅರ್ಚಕರಿಂದ ಮಂತ್ರ ಘೋಷಣೆಯಲ್ಲಿ ಅಭಿಷೇಕ, ಅಲಂಕಾರ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆದವು.ನಂತರ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಜೈಕಾರದೊಂದಿಗೆ ಅಲಂಕರಿಸಿದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವವನ್ನು ನಡೆಸಲಾಯಿತು.ರಥೋತ್ಸವವು ಮೆರವಣಿಗೆಯಲ್ಲಿ ಗ್ರಾಮ ದೇವರುಗಳಾದ ಶ್ರೀಬಸವೇಶ್ವರ ಸ್ವಾಮಿ, ಭೂತಪ್ಪ ಗ್ರಾಮದೇವರುಗಳು ಸೇರಿದಂತೆ ಭಕ್ತರ ಸಮ್ಮುಖದಲ್ಲಿ ನಡೆಯಿತು. ರಥೋತ್ಸವದ ನಂತರ ಭಕ್ತರು ದೇವರ ದರ್ಶನ ಪಡೆದು ಹಣ್ಣು-ಕಾಯಿ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು.
ರಥೋತ್ಸವದಲ್ಲಿ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿಯ ಮುಖಂಡರು ಸೇರಿದಂತೆ ಸುತ್ತ ಮುತ್ತಲಿನ ಭಕ್ತರು ಗ್ರಾಮಸ್ಥರು ಭಾಗವಹಿಸಿದ್ದರು.