ಹಗರಿಬೊಮ್ಮನಹಳ್ಳಿ :ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ದಾನದಲ್ಲಿ ದೈವತ್ವ ಕಂಡ ಮಹಾದಾನಿ ದಿ.ಅಕ್ಕಿ ಕೊಟ್ರಪ್ಪ ಅವರ ನುಡಿನಮನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಸಭೆ ಹಮ್ಮಿಕೊಳ್ಳಲಾಗಿತ್ತು.
ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರ ವ್ಯಕ್ತಿತ್ವ, ದಾನಧರ್ಮ ಇತರರಿಗೂ ಮಾದರಿಯಾಗಿದೆ. ಸೆ.೨೫ರಂದು ವಿರಶೈವ ಕಲ್ಯಾಣ ಮಂಟಪದಲ್ಲಿ ನಡೆವ ನುಡಿನಮನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ವೀರಶೈವ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಗುರುಬಸವರಾಜ ಸೊನ್ನದ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರು ಜಾತಿ, ಧರ್ಮವನ್ನು ಮೀರಿದ ಮಹಾದಾನಿಯಾಗಿದ್ದಾರೆ.
ಶೈಕ್ಷಣಿಕ, ಧಾರ್ಮಿಕ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲು ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇವೇಳೆ ಅಕ್ಕಿ ಕೊಟ್ರಪ್ಪ ಅವರ ಮೇಲಿನ ಜನರ ಅಭಿಮಾನ ಕಂಡು ಅವರ ಪುತ್ರ ಅಕ್ಕಿ ಶಿವಕುಮಾರ್ ಕಣ್ಣೀರಿಟ್ಟರು. ವೀರಶೈವ ಸಮಾಜದ ಬಸವರಾಜ ರೆಡ್ಡಿ, ರೇವಣಸಿದ್ದೇಶ್ವರ, ಚಿನ್ಮಲ್ಲಿ ಸುರೇಶ್, ಕೊಟ್ರೇಶ್ ಸಕ್ರಹಳ್ಳಿ, ಬನ್ನಿಗೋಳ ವೆಂಕಣ್ಣ, ದೇವಿಪ್ರಸಾದ್, ವಿಶ್ವನಾಥ, ಮಲ್ಲಿಕಾರ್ಜುನ, ಹುಡೇದ್ ಗುರುಬಸವರಾಜ, ಎಚ್.ಬಿ.ಮಂಜುಬನಾಥ, ವೀರೇಶ್ ಪೋಟೋ, ಸತೀಶ್ ಪಾಟೀಲ್, ಅಮೃತ್ ಮಂಜುನಾಥ, ಉಮಾಪತಿ ಶೆಟ್ಟರ್, ರಾಚಪ್ಪ, ಉಮೇಶ್ ನೆಲ್ಕುದ್ರಿ, ಸೊಬಟಿ ಹರೀಶ್ ಸೇರಿ ನೂರಾರು ಮುಖಂಡರು ಇತರರಿದ್ದರು.
——-