


ಭದ್ರಾವತಿ: ತಾಲ್ಲೂಕಿನ ಮಾದಿಗ ಸಮಾಜದ ವತಿಯಿಂದ ಇಂದು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಹಾಗೂ ಕಾರ್ಯಾಲಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳ ಲಾಗಿತ್ತು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಆದಿ ಜಂಬಾವ ಮಠದ ಶ್ರೀ ಷಡಾಕ್ಷರಿ ಮುನಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ದಿವ್ಯ ಸಾನಿದ್ಯ ವಹಿಸಿದ್ದರು.

ಸಮಾಜದ ಅಧ್ಯಕ್ಷ ನ್ಯಾಯವಾದಿ ಡಾ.ಎಸ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ದಸಂಸ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಸಮಾಜದ ಮುಖಂಡರಾದ ಮಾರುತಿ, ಎಸ್.ಮಂಜುನಾಥ್, ಶ್ರೀನಿವಾಸ್, ಬಿ.ಎ.ಮಂಜುನಾಥ್, ಬಿ.ಶಿವಗಂಗಯ್ಯ, ಮೈಲಾರಪ್ಪ, ಕಾಂತರಾಜು, ಸಂಪತ್ ಕುಮಾರ್, ಅಣ್ಣಪ್ಪ, ಹರೀಶ್, ಶಿವಲಿಂಗಪ್ಪ, ಮಹೇಶ್, ಮಂಜುಳ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದರು.