![](https://davangerevijaya.com/wp-content/uploads/2025/01/IMG-20250116-WA0145.jpg)
ಬೆಂಗಳೂರು.
2024-25ನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನೂತನ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆಯಾಗಿದ್ದಾರೆ.
ಇನ್ನು, ಉಪಾಧ್ಯಕ್ಷರಾಗಿ ನಿರ್ಮಾಪಕ ಪ್ರವೀಣ್ ಕುಮಾರ್ ಹಾಗು ಕಾರ್ಯದರ್ಶಿಯಾಗಿ ಕುಶಾಲ್ ಆಯ್ಕೆಯಾದರು. ಇದರೊಂದಿಗೆ ಮಂಡಳಿಯ ಚುಕ್ಕಾಣಿ ಸಾ.ರಾ.ಗೋವಿಂದು ಬಣದ ಪಾಲಾಗಿದೆ.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250116-WA0230.jpg)
ಫಿಲ್ಮ್ ಚೇಂಬರ್ ಚುನಾವಣೆಯ ಫಲಿತಾಂಶ:
ನಿರ್ಮಾಪಕ ವಲಯದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸಫೈರ್ ವೆಂಕಟೇಶ್ ಆಯ್ಕೆ
ನಿರ್ಮಾಪಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್ ಗೆಲುವು
ವಿತರಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ಸಿ.ಶ್ರೀನಿವಾಸ್ ಆಯ್ಕೆ
ವಿತರಕರ ವಲಯದ ಗೌರವ ಕಾರ್ಯದರ್ಶಿಯಾಗಿ ಕುಮಾರ್ ಎಂ.ಎನ್. (ಕೆಸಿಎನ್ ಕುಮಾರ್) ಚುನಾಯಿತ
ಪ್ರದರ್ಶಕರ ವಲಯದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ರಂಗಪ್ಪ
ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಎಲ್ ಆಯ್ಕೆ
ಖಜಾಂಚಿ ಸ್ಥಾನಕ್ಕೆ ಚಿಂಗಾರಿ ಮಹದೇವ್ ಆಯ್ಕೆ
![](https://davangerevijaya.com/wp-content/uploads/2025/01/IMG-20250116-WA01462.jpg)