


ದಾವಣಗೆರೆ : ನಾವು ಎಂದಿಗೂ ಲಂಚ ಸ್ವೀಕಾರ ಮಾಡೋದಿಲ್ಲ ಎಂದು ಆಣೆ ಮಾಡಿದ್ದ ಚನ್ನಗಿರಿ ಅಸಿಸ್ಟೆಂಟ್ ಎಂಜಿನಿಯರ್ ಕೆಲ ದಿನಗಳಲ್ಲಿಯೇ ಮಾತು ಮುರಿದು ಲಂಚ ಸ್ವೀಕಾರ ಮಾಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಂತೆಬೆನ್ನೂರಿನ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್, ಸೆಕ್ಷನ್ ಆಪೀಸರ್ ಮೋಹನ್ ಕುಮಾರ್ ಹತ್ತು ಸಾವಿರ ಲಂಚ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಏನಿದು ಘಟನೆ

ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಲ್ಲಾಪುರ ಗ್ರಾಮ, ಚನ್ನಗಿರಿ ತಾಲ್ಲೂಕಿನಲ್ಲಿ
ಸೋಮಶೇಖರಪ್ಪರ ಎಂಬುವರ ಹೊಲದಲ್ಲಿ ಅಳವಡಿಸಿದ್ದ ಆರ್‌ಆರ್ ನಂ.ಕೆಜಿಐಪಿ-7574ನೇ ಟಿಸಿಯು ಸುಮಾರು 01 ವರ್ಷದ ಹಿಂದೆ ಸುಟ್ಟು ಹೋಗಿತ್ತು.
ಸದರಿ ಟಿಸಿಯನ್ನು ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸಿಕೊಡುವ ಬಗ್ಗೆ ಮೋಹನ್ ಕುಮಾರ್
ರೂ.10,000/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಮಯದಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಸ್.ಕೌಲಾಪೂರೆ, ಪೊಲೀಸ್ ಅಧೀಕ್ಷಕರು ಮತ್ತು ಕಲಾವತಿ, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಹೆಚ್.ಗುರುಬಸವರಾಜ ಮತ್ತು ಸರಳ. ಪಿ. ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿತರಾದ ಮೋಹನ್ ಕುಮಾರ್, ಅಸಿಸ್ಟೆಂಟ್ ಇಂಜಿನಿಯರ್ ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ