ಚಿತ್ರದುರ್ಗ: ಚಳ್ಳಕೆರೆ ಭೂ ಮಾಪನ ಇಲಾಖೆ ಅಧಿಕಾರಿ ಕಾರು ಚಾಲಕ ಲಂಚ ಸ್ವೀಕರಿಸುವಾಗ ಚಾಲಕನ್ನು ವಶಕ್ಕೆ ಪಡೆದ ಲೋಕಾಯುಕ್ತರು. ಎಡಿಎಲ್ ಆರ್ ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದ ರೈತ ಕೆ.ಜಿ.ಜಯಣ್ಣ ಜಮೀನನ್ನು ಪಾಲು ವಿಭಾಗ ಮಾಡಿಸಿಕೊಳ್ಳಲು ಒಂದು ವರ್ಷದಿಂದ ತಾಲೂಕು ಕಚೇರಿಗೆ ಅಲೆದಾಡಿದರೂ, ಅಧಿಕಾರಿಗಳು ಪಾಲು ವಿಭಾಗ ಮಾಡಿಕೊಡದೆ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟು, ಕೊನೆಗೆ ಇದು ಸರ್ವೇ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಭೂಮಾಪನ ಇಲಾಖೆಯ ಎಡಿಎಲ್ ಆರ್ ಗಂಗಣ್ಣ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು ಹತ್ತು ಸಾವಿರರೂಗಳಿಗೆ ಒಪ್ಪಿಕೊಂಡಿದ್ದ ರೈತ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.
ಇಂದು ಹಣ ನೀಡಲು ಬಂದಾಗ ವಾಹನ ಚಾಲಕನ ಕೈಗೆ ಕೊಡುವಂತೆ ತಿಳಿಸಿದ್ದು, ವಾಹನ ಚಾಲಕನ ಕೈಗೆ ಹಣ ನೀಡುವಾಗ ಲೋಕಾಯುಕ್ತರು ಹಣದ ಸಮೇತ ವಶಕ್ಕೆ ಪಡೆದಿದ್ದು ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಎಡಿಎಲ್ ಆರ್ ಗಂಗಣ್ಣ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ವಾಹನ ಚಾಲಕನ್ನು ವಶಕ್ತೆ ಪಡೆದು ತನಿಖೆ ಕೈಗೊಂಡಿದ್ದಾರೆ.