ದಾವಣಗೆರೆ ವಿಜಯ ನ್ಯಾಮತಿ
ಲೋಕಸಭೆ ಚುನಾವಣೆ ಹಿನ್ನೆಲೆ ತಾಲೂಕಿನ ಸವಳಂಗ ಚೆಕ್ ಪೋಸ್ಟ್ ಬಳಿ ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಕೊಂಡ್ಯೋಯುತ್ತಿದ್ದ 500ರೂ ಮುಖಬೆಲೆಯ 83 ಸಾವಿರದ 500 ರೂ.ಗಳನ್ನ ಎಸ್ಎಸ್ಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ವಶ ಪಡಿಸಿಕೊಂಡಿದ್ದಾರೆ.
ಸೋಗಿಲು ಗ್ರಾಮದ ವ್ಯಕ್ತಿಯೊಬ್ಬರು ಬೋರ್ವೇಲ್ ಕೇಸಿಂಗ್ ಪೈಪ್ ತರಲೆಂದು ಕೊಂಡ್ಯೋಯುತ್ತಿರುವುದಾಗಿ ಹೇಳಿಕೆ ನೀಡಿದ್ದು ಸೂಕ್ತ ದಾಖಲೆ ಇಲ್ಲದ ಹಿನ್ನಲೆ ಹಣವನ್ನು ಎಸ್ಎಸ್ಟಿ ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಹಣ ವಶಪಡಿಸಿಕೊಂಡು ಹೊನ್ನಾಳಿ ಉಪ ಖಜಾನೆ ಸುಪರ್ದಿಗೆ ಒಪ್ಪಿಸಲಾಗಿದೆ.