ಜಗಳೂರು :- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಬಿಸ್ತುವಳ್ಳಿ. ಬಿದರಿಕೆರೆ. ಬುಳ್ಳೇನಳ್ಳಿ.ಜಗಳೂರು ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತದಿಂದ ದಿಂದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಮತ್ತು ಭದ್ರತಾ ಪಡೆಗಳಿಂದ ಪಥಸಂಚಲನ ನಡೆಯಿತು.
ನಂತರ ದೊಣ್ಣೆಹಳ್ಳಿ ಮುಸ್ಟೂರು.ಹೊಸಕೆರೆ. ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಪೆರೇಡ್ ನಡೆಸಲಾಯಿತು.ಪಟ್ಟಣದ ಪ್ರಮುಖ ವಾರ್ಡ್ಗಳಲ್ಲಿ ಶಾಂತಿಯುತ ಚುನಾವಣೆ ಕುರಿತು 20 ಪೊಲೀಸ್ ಸಿಬ್ಬಂದಿಗಳು ಹಾಗೂ 50 ಜನ ಹರಿಯಾಣದ ರೈಲ್ವೆ ಕಮಾಂಡೇಂಟ್ ಭದ್ರತಾ ಪಡೆ ವತಿಯಿಂದ ಪರೇಡ್ ನಡೆಸಲಾಯಿತು.2024 ರ ಲೋಕಸಭಾ ಚುನಾವಣಾ ಹಿನ್ನೆಲೆ ಮಾದರಿ ನೀತಿ ಸಂಹಿತೆಯನ್ವಯ ಮತದಾರರು ಹಣ ಆಮಿಷೆಗಳಿಗೆ ಬಲಿಯಾ ಗದೆ ತಮ್ಮ ಅಮೂಲ್ಯ ಮತವನ್ನು ಕಡ್ಡಾಯ ವಾಗಿ ಯಾವುದೇ ಭಯವಿಲ್ಲದೆ ಚಲಾಯಿಸ ಬೇಕು.
ಪ್ರಭಾವಿಗಳು ಎಷ್ಟೇ ಶ್ರೀಮಂತರಿದ್ದರೆ ಅವರ ಆಸೆ ಆಮಿಷ ಗಳಿಗೆ ಮತದಾರರು ಒಳಗಾಗದೆ ಕಡ್ಡಾಯವಾಗಿ ನಿರ್ಭೀತಿಯಿಂದ ಮತಗಟ್ಟೆಗೆ ಬಂದುಮತ ದಾನ ಚಲಾಯಿಸಬೇಕು ಹಾಗೂ ಶಾಂತಿ ಭಂಗವಾಗದಂತೆ ಅಭ್ಯರ್ಥಿಗಳು ಕಾಯ್ದುಕೊಳ್ಳ ಬೇಕು. ಚುನಾವಣಾ ಸಂದರ್ಭದಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಗಲಾಟೆ ಗುಂಪು ಘರ್ಷಣೆ ಮಾಡಿದ್ದಲ್ಲಿ ಪೊಲೀಸ ರೊಂದಿಗೆ ಭದ್ರತಾ ಪಡೆ ಇದೆ ಎಂಬುದು ಖಾತ್ರಿಪಡಿಸುವ ಸಲು ವಾಗಿ ಈ ಪತ ಚಂಚಲನ ನಡೆಸಲಾಗಿದೆ
ಜಗಳೂರು ಪಟ್ಟಣದ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಕಮಾಂಡೋಪಡೆ. ಕೆಎಸ್ಆರ್ಪಿ ಪೊಲೀಸ್ ಹಾಗೂ ಜಗಳೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬೀದಿ ಗಳಾದ ಮರನಹಳ್ಳಿ ರಸ್ತೆ.ಈಶ್ವರ ದೇವಸ್ಥಾನ. ಇಂದಿರಾ ಬಡಾವಣೆ.ಬೈಪಾಸ್ ರಸ್ತೆ. ನೆಹರೂ ರಸ್ತೆ,ವಿದ್ಯಾನಗರ. ಜೆಸಿಆರ್ ಬಡವಣೆ. ಕ್ಯಾಂಪ್, ಮುಸ್ಲಿಂ ಕಾಲೋನಿ ಗಾಂಧೀಜಿ ವೃತ ಸೇರಿದಂತೆ ವಿವಿಧ ಬಡಾವಣೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ ದಾನ ಜಾಗೃತಿ ಮೂಡಿಸಿದರು.
ಕಮಾಂಡೋ ಪಥಚಂಚಲನ :-
ಈಗಾಗಲೇ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು. ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು ಮತಯಾಚನೆ ವೇಳೆ ಹಣ ಮದ್ಯ ಇತರೆ ಆಭರಣ ವಸ್ತ್ರಗಳ ಆಮಿಷವೊಡ್ಡಿ ಮತದಾರರ ಗಮನ ಸೆಳೆಯುವುದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಹರ್ಯಾಣದ ರೈಲ್ವೆ ಕಮಾಂಡೇಂಟ ಭದ್ರತಾ ಪಡೆ ಜಾಗೃತಿ ಪರೇಡ್ ನಡೆಸಲಾಯಿ ತು.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೂಡ ಈ ರೀತಿ ಪೆರೇಡ್ ನಡೆಸಲಾಗು ವುದು. ಈ ಪಥಸಂಚಲನ ವೇಳೆ ಹರ್ಯಾಣದ ರೈಲ್ವೆ ಕಮಾಂಡೇಂಟ್ ಭದ್ರತಾ ಪಡೆ ಮುಖ್ಯಸ್ಥರಾದ ಮೇಘರಾಜ್ ಜಗಳೂರು ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್.ಪಿಎಸ್ಐಗಳಾದ ಸಾಗರ್.ಆಶಾ ,ನಿಂಗಮ್ಮ ಮತ್ತು ಜಗಳೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಸೇರಿದಂತೆ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.