ವಿಶಾಖಪಟ್ಟಣಂ : ತನಗಿಂತ ಹೆಂಡತಿಗೆ ಹೆಚ್ಚು ಹಣ ಕೊಡುತ್ತಿದ್ದಾನೆ ಎಂಬ ಕೋಪಕ್ಕೆ ಮಹಿಳೆಯೊಬ್ಬಳು ತನ್ನ ಲಿವ್ ಇನ್ ಪಾರ್ಟನರ್‌ನ ಮರ್ಮಾಂಗವನ್ನು ತರಕಾರಿ ಕೊಯ್ಯುವ ಚಾಕುವಿನಲ್ಲಿ ಕತ್ತರಿಸಿದ ಪ್ರಸಂಗ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಗಾಯಗೊಂಡವನನ್ನು ಬಿಹಾರ ಮೂಲದ ವಿಜಯ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ತನ್ನ ಲಿವ್-ಇನ್ ಪಾರ್ಟ್‌ನರ್ ಸೀತಾ ಕುಮಾರಿ ಎಂಬಾಕೆಯೊಂದಿಗೆ ವಿಜಯ್ ವಾಸಿಸುತ್ತಿದ್ದ. ಆದಾಗ್ಯೂ ಯಾದವ್ ತನ್ನ ದುಡಿಮೆಯ ಬಹುಪಾಲು ಹಣವನ್ನು ಪತ್ನಿಗೆ ಕಳುಹಿಸುತ್ತಿದ್ದ.. ಕೋಪಗೊಂಡ ಸೀತಾ ನಿದ್ದೆ ಮಾಡುತಿದ್ದ ವಿಜಯ್‌ಕುಮಾರ್ ಕಣ್ಣು, ಕೈಗಳನ್ನು ಕಟ್ಟಿ, ಮೊಬೈಲ್ ಜನನಾಂಗಗಳಿಗೆ ಕತ್ತರಿ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಮತ್ತು ಸೀತಾ ಇಬ್ಬರೂ ಬಿಹಾರದ ನಿವಾಸಿಗಳು. ವಿಜಯ್ ಮದುವೆಯಾಗಿದ್ದ ಹೊರತಾಗಿಯೂ ಸೀತಾ ಜತೆ ಜೀವನ ನಡೆಸುತ್ತಿದ್ದಳು. ಆದಾಗ್ಯೂ ಆಕೆಗೆ ದುಡ್ಡು ಕಳುಹಿಸುತ್ತಿದ್ದಳು. ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸೀತಾಕುಮಾರಿ ಅಸಮಾಧಾನಗೊಂಡಿದ್ದಳು. ಹೀಗಾಗಿ ಆತ ಮಲಗಿದ್ದಾಗ ಹಲ್ಲೆ ಮಾಡಿದ್ದಾಳೆ. ವಿಜಯ್ ತೊರಗುಡಿಪಾಡು ಗ್ರಾಮದಲ್ಲಿ ಹೈನುಗಾರನಾಗಿ ಕೆಲಸ ಮಾಡುತ್ತಿದ್ದರು. ಸೀತಾ ಕುಮಾರಿ ಮತ್ತು ವಿಜಯ್ ಯಾದವ್ ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದರು. ಮಹಿಳೆ ವಿಜಯ್ ಅವರ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿ ಕತ್ತರಿಸಿದ್ದಾಳೆ. ಎಂದು ಪೊಲೀಸ್ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ನಾನು ಸಂಪಾದಿಸಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದೆ. ಈ ಬಗ್ಗೆ ಸೀತಾ ಅದರ ಬಗ್ಗೆ ಅತೃಪ್ತಿ ಹೊಂದಿದ್ದಳು. ಊಟದ ನಂತರ ನಾನು ಮಲಗಲು ಹೋದಾಗ ಸೀತಾ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ವಿಜಯ್ ಹೇಳಿದ್ದಾರೆ