
ನಂದೀಶ್ ಭದ್ರಾವತಿ ದಾವಣಗೆರೆ
ನೀವೇನಾದ್ರೂ ಊರಿಗೆ ಹೋಗುತ್ತಿದ್ದೇನೆ ನಾಳೆಯಿಂದ ಹಾಲು ಬೇಡ ಎಂದು ಹೇಳುವಾಗ ಸ್ವಲ್ಪ ಅಲರ್ಟ್ ಆಗಿರಿ..ಅರೇ ಹೀಗ್ಯಾಕೇ ಹೇಳುತ್ತಿದ್ದೀರಿ ಅಂತ ನಿಮಗೆ ಅನ್ನಿಸಬಹುದು ಅದಕ್ಕೂ ಉತ್ತರ ಇದೆ..ಅದನ್ನು ಮುಂದೆ ಹೇಳುತ್ತೇವೆ, ತಪ್ಪದೇ ಈ ಸ್ಟೋರಿ ನೋಡಿ..
ದಾವಣಗೆರೆ ಜಿಲ್ಲೆಯ ಹರಿಹರದ ವಿದ್ಯಾನಗರದ ವೈದ್ಯರೊಬ್ಬರು ನಾಳೆಯಿಂದ ಹಾಲು ಬೇಡ ಅಂದಿದ್ದಾರೆ. ಇಷ್ಟೇ ಹಾಲುಮಾರುವ ಇದೇ ಸಮಯವನ್ನು ಕಾದಿದ್ದ. ವೈದ್ಯರು ಊರಿಗೆ ಹೋಗುವುದು ಖಚಿತ ಎಂದು ಅರಿತ ಹಾಲಿನವ ತನ್ನ ಗ್ಯಾಂಗ್ ನ್ನು ಅಲರ್ಟ್ ಮಾಡಿ ವೈದ್ಯರ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಸೇರಿ 32.85 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದರು.

ಸ್ಕಾಚ್ ಕುಡಿದ ಕಳ್ಳರು
ವೈದ್ಯರ ಮನೆಗೆ ನುಗ್ಗಿದ ಕಳ್ಳರು ಇಡೀ ಮನೆ ಜಾಲಾಡಿದ್ದಾರೆ. ಆಗ ಫ್ರಿಜ್ ನಲ್ಲಿದ್ದ ಸ್ಕಾಚ್ ಕುಡಿದು,ಬಂಗಾರ ತೆಗೆದುಕೊಂಡು ಮನೆ ಖಾಲಿ ಮಾಡಿದ್ದಾರೆ. ಅಷ್ಟೇ ಅಲ್ಲ ಎಣ್ಣೆ ಹೊಡೆಯಲು ಫ್ರಿಜ್ ನಲ್ಲಿದ್ದ ಸ್ಕ್ಯಾಚ್ ಕುಡಿದು ಎಂಜಾಯ್ ಮಾಡಿದ್ದರು.
ತಂಡ ರಚನೆ
ಎಸ್ಪಿ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ & ಶ್ರೀಮಂಜುನಾಥ ಜಿ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್ ಮತ್ತು ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್. ದೇವಾನಂದ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್ ಬಿ ವಿಭಾಗದ ಸಿಬ್ಬಂದಿಗಳು ಹಾಗೂ ಹರಿಹರ ನಗರ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿತರ ಪತ್ತೆಗೆ ಸೂಚಿಸಲಾಗಿತ್ತು.
ಕಳ್ಳರನ್ನು ಹಿಡಿಯುವಲ್ಲಿ ಈ ತಂಡ ಎಕ್ಸ್ ಫರ್ಟ್
ಬೇರೆ ಜಿಲ್ಲೆಯ ಡಿಸಿಆರ್ ಬಿ ತಂಡಕ್ಕೆ ಹೋಲಿಸಿದರೆ ದಾವಣಗೆರೆ ಡಿಸಿಆರ್ ತಂಡ ಕ್ರೈಂ ಮಟ್ಟ ಹಾಕುವಲ್ಲಿ ಸಖತ್ ಫೇಮೇಸ್ ಆಗಿದ್ದು, ಈ ಕ್ರೈಂ ನ್ನು ಕೂಡ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಬೇಧಿಸಿದೆ.
ಯಾರು ಕಳ್ಳರು
ಹೊಂಚು ಹಾಕಿ ಮನೆಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಈ ಕ್ರೈಂ ತಂಡ ಬಂಧಿಸಿದೆ. ಬಂಧಿತರಿಂದ ಚಿನ್ನ, ಬೆಳ್ಳಿ ಸೇರಿ 32.85 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.04 ಜನರನ್ನು ವಶಕ್ಕೆ ಪಡೆಯಲಾಗಿದೆ.
ಯಾರು ಅಂತರ್ ಜಿಲ್ಲಾ ಕಳ್ಳರು
ಆರೋಪಿತರುಗಳಾದ ಕಿರಣ ಗುಬ್ಬಿ, 24ವರ್ಷ, ಕೊಟ್ರೇಶ.ಸಿ.ಕೆ @ ಕುಪಸಾದ್, 22ವರ್ಷ, 3ನಿತ್ಯಾನಂದ @ ನಿತ್ಯಾನಂದ ಕೆಳಗಿನಮನಿ, 24ವರ್ಷ, ಶಿವರಾಜ್ @ ಶಿವು, 32ವರ್ಷ, ಇವರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಪ್ರಕರಣದಲ್ಲಿನ ಇನ್ನೊಬ್ಬ ಆರೋಪಿ ಶಂಕರ್ ಗುಬ್ಬಿ, 33ವರ್ಷ, ಕೂಲಿ ಕೆಲಸ ಮಾಡುತ್ತಿದ್ದು, ರಾಣೆಬೆನ್ನೂರು ತಾಲೂಕು ಇವನ ಊರು. ಬಹುತೇಕರ ಊರು ರಾಣೆ ಬೆನ್ನೂರು ಆಗಿದೆ. ಆರೋಪಿ ಶಂಕರ್ ನು ಹಾಲಿ ಹಾವೇರಿ ಜಿಲ್ಲೆ ಹಲಗೇರಿ ಪೊಲೀಸ್ ಠಾಣೆ ಕೇಸಿನಲ್ಲಿ ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.
ಸಿಕ್ಕಿದ್ದು ಹೇಗೆ
ಹರಿಹರ ನಗರದ ವಿದ್ಯಾನಗರದ ಹೊರವಲಯದಲ್ಲಿ ಮನೆಗಳ್ಳತನಕ್ಕೆ ಹೊಂಚು ಹಾಕಿ ಆಗಮಿಸಿದ್ದ ಮನೆಗಳ್ಳತನ ಮಾಡುವ ತಂಡವನ್ನು ಬೆನ್ನೇತ್ತಿ ಕಳ್ಳರನ್ನು ಬಂಧಿಸಲಾಗಿದೆ. ಶಿವರಾಜ್ ಎಂಬಾತ ಕಿಂಗ್ ಪಿನ್ ಆಗಿದ್ದು, ಈತನನ್ನು ಮೊದಲು ಬಂಧಿಸಲಾಯಿತು. ಬಳಿಕ ಉಳಿದವರನ್ನು ಅಂದರ್ ಮಾಡಲಾಗಿದೆ. ಈ ವಿಚಾರಣೆ ವೇಳೆ ಆರೋಪಿಗಳು ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಸಿ.ಬಡಾವಣೆಯ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಶಿವರಾಜ್ ಹಾಲು ಮಾರುತ್ತಿದ್ದವ
ಶಿವರಾಜ್ ವೈದ್ಯರೊಬ್ಬರ ಮನೆಗೆ ಹಾಲು ಹಾಕುತ್ತಿದ್ದವ. ಯಾವಾಗ ವೈದ್ಯ ನಾಳೆಯಿಂದ ಹಾಲು ಬೇಡ ಅಂದನೋ ರಾತ್ರಿ ತನಗೆ ಪರಿಚಯವಿರುವ ಕಳ್ಳರನ್ನು ಕರೆದುಕೊಂಡು ಮನೆಗೆ ನುಗ್ಗಿ ಬಂಗಾರ ಕದಿದ್ದ.
ಡಿಜಿಟಲ್ ವಾಚ್ ಕಳ್ಳರನ್ನು ಹಿಡಿಯಲು ಸಹಾಯವಾಗಿತ್ತು
ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನು ಕದ್ದಿದ್ದರು. ಈ ಸಂದರ್ಭದಲ್ಲಿ ಹಾಲು ಮಾರುತ್ತಿದ್ದ ಶಿವರಾಜ್ ಡಿಜಿಟಲ್ ವಾಚ್ ಕಟ್ಟಿಕೊಂಡಿದ್ದ. ಇದರ ಜಾಡು ಹಿಡಿದ ಪೊಲೀಸರು ಮೊದಲು ಶಿವರಾಜ್ ನನ್ನು ಹಿಡಿದು ಉಳಿದವರನ್ನು ಬಂಧಿಸಿತು.
ಆರೋಪಿತರುಗಳಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ
32,00,000/- ರೂ ಬೆಲೆಯ 434 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು
40,000/-ರೂ ಬೆಲೆಯ 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ
45,000/-ರೂ ಬೆಲೆಯ ಆಪಲ್ ಐಪೋನ್ ವಾಚ್
ಒಟ್ಟು- 32,85,000/-ರೂ ಬೆಲೆಯ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಅಂತರ್ ಜಿಲ್ಲಾ ಕಳ್ಳರನ್ನು ಮಟ್ಟ ಹಾಕಿದ್ದು , ನಮ್ಮ ಕರ್ನಾಟಕ ಪೊಲೀಸ್ ಕೂಡ ಚಾಣಾಕ್ಷ ಎಂದು ತೋರಿಸಿಕೊಟ್ಟಿದ್ದಾರೆ.