
ಶಿವಮೊಗ್ಗ: ಪಂ.ಪುಟ್ಟರಾಜ ಗವಾಯಿ ಅಂಧ ಮಕ್ಕಳ ಸಂಗೀತ ವಿದ್ಯಾಲಯದ ಮಕ್ಕಳೊಂದಿಗೆ ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಿಸಲಾಯಿತು. ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಶಿವಮೊಗ್ಗ ಜಿಲ್ಲೆ ವತಿಯಿಂದ ಶಿವಮೊಗ್ಗ ನಗರದ ಡಾ. ಪಂಡಿತ ಪುಟ್ಟರಾಜ ಗವಾಯಿ ಅಂಧ ಮಕ್ಕಳ ಸಂಗೀತ ವಿದ್ಯಾಲಯ, ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠಶಾಲೆಯ ಮಕ್ಕಳಿಗೆ ಬಟ್ಟೆ, ದಿನಸಿ ಮತ್ತು ಅಗತ್ಯ ವಸ್ತುಗಳ ವಿತರಣೆ ಮಾಡುವ ಮುಖಾಂತರ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಯುವ ಮುಖಂಡ ಕೆ. ರಂಗನಾಥ್, ಸೂಡಾ ಸದಸ್ಯರಾದ ಎಂ. ಪ್ರವೀಣ್ ಕುಮಾರ್, ಪ್ರಮುಖರಾದ ಹೆಚ್.ಪಿ. ಗಿರೀಶ್, ಬಿ. ಲೋಕೇಶ್, ಎಸ್. ಕುಮಾರೇಶ್, ಎಂ. ರಾಹುಲ್, ಕವಿತಾ, ಎಂ. ರಾಕೇಶ್, ಕೆ.ಎಲ್. ಪವನ್, ಗುರುಪ್ರಸಾದ್, ಸಚಿನ್ ಸಿಂದ್ಯಾ, ಮೋಹನ್, ರಾಮ್ ಕುಮಾರ್, ರಾಜೇಶ್, ಇರ್ಫಾನ್, ರಾಹಿಲ್, ಸಚಿನ್, ಧನುಷ್ ಜಾದವ್, ಮಿಥುನ್, ಅಧ್ನನ್, ಕಿರಣ್, ವಿನಯ್ ಬಜಾರ್, ಗಣೇಶ್, ಸಾಹಿಲ್ ಹಾಗೂ ಇತರರು ಇದ್ದರು.