
ದಾವಣಗೆರೆ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡ್ತಾಯಿದೆ.
ಈ ನಡುವೆ ಹೆಚ್ಡಿ ರೇವಣ್ಣ ಕಿಡ್ನಾಪ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ರೆ, ಪ್ರಜ್ವಲ್ ಬೆಂಗಳೂರಿಗೆ ಬಂದ ಕೂಡ್ಲೇ ಬಂಧನವಾಗೋ ಸಾಧ್ಯತೆ ಇದೆ.. ಆದ್ರೀಗ ಅವರು ಇವರಲ್ಲ., ಡೈರೆಕ್ಟ್ಆಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರೇ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ. ಯಾಕಂದ್ರೆ ಕುಮಾರಸ್ವಾಮಿ ಏನ್ ಸಾಚಾನಾ ಅಂತೇಳಿ ಕಾಂಗ್ರೆಸ್ ಶಾಸಕರೊಬ್ಬರು ಹೊಸ ಬಾಂಬ್ ಸ್ಫೋಟಿಸಿದ್ದಾರೆ. ಹಾಗಾದ್ರೆ ಏನದು ಹೊಸ ಬಾಂಬ್.?
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ಟ್ವಿಸ್ಟ್ ಪಡ್ಕೊಂತಿದೆ. ಜೊತೆಗೆ ಈಗಿರೋ ಕೇಸ್ಗಳ ಪೈಕಿ ಇನ್ನೂ ಒಂದಷ್ಟು ಕೇಸ್ಗಳು ಪ್ರಜ್ವಲ್ ಮತ್ತು ದಳಪತಿಗಳ ಮೇಲೆ ಬೀಳೋ ಸಾಧ್ಯತೆ ಇದೆ. ಈ ಪ್ರಕರಣವನ್ನ ಕೆದಕುತ್ತಾ ಹೋದ್ರೆ ಜೆಡಿಎಸ್ನ ಒಬ್ಬೊಬ್ಬರೇ ಘಟಾನುಘಟಿ ನಾಯಕರು ತಗ್ಲಾಕ್ಕೊಳ್ಳೋ ಸಾಧ್ಯತೆ ಇದೆ. ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರೋ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆ ಎಲೆಕ್ಷನ್ ಮುಗಿಯೋ ವರೆಗೂ ದೇಶಕ್ಕೆ ವಾಪಸ್ ಆಗೋದು ಅನುಮಾನ. ಆದ್ರೆ ಅವರು ವಾಪಸ್ ಆದ ಕೂಡ್ಲೇ ಅವರ ಬಂಧನವಾಗೋದು ಕೂಡ ಗ್ಯಾರಂಟಿ. ಪರಿಸ್ಥಿತಿ ಹೀಗಿರೋವಾಗ್ಲೆ, ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಿ ಅಂತೇಳಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕ್ಯಾತೆ ತೆಗೆಯುತ್ತಿದ್ದಾರೆ. ಸಿಬಿಐ ಕೇಂದ್ರದ ಅಧೀನದಲ್ಲಿರೋದ್ರಿಂದ ಪ್ರಕರಣವನ್ನ ಸುಲಭವಾಗಿ ಹಳ್ಳ ಹಿಡಿಸಬಹುದು. ಅಂದ್ರೆ ಸುಲಭವಾಗಿ ಮುಚ್ಚಿ ಹಾಕಬಹುದು ಅನ್ನೋದು ಕಮಲ ದಳ ಪಕ್ಷಗಳ ಅಸಲಿ ಪ್ಲ್ಯಾನ್ ಅನ್ನೋ ರಾಜಕೀಯ ವಿಶ್ಲೇಷಣೆಗಳಿವೆ. ಆದ್ರೀಗ ಕೈ ಶಾಸಕರೊಬ್ಬರು ಸ್ಫೋಟಿಸಿರೋ ಹೊಸ ಬಾಂಬ್ ಏನಂದ್ರೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಏನ್ ಸಾಚಾನಾ.? ಇವರೇನು ಒಳ್ಳೆಯವರಾ.? ಸದ್ಯದಲ್ಲೇ ಇವರು ಕೂಡ ಜೈಲು ಸೇರೋ ಸಾಧ್ಯತೆ ಇದೆ ಅಂತೇಳಿದ್ದಾರೆ.


ಹೌದು ವೀಕ್ಷಕರೇ, ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಇಂಥ ಹೊಸ ಬಾಂಬ್ಅನ್ನ ಸ್ಫೋಟಿಸಿದ್ದಾರೆ. ಪೆನ್‌ಡ್ರೈವ್ ಪ್ರಕರಣ ಸಂಬಂಧ ಶುಕ್ರವಾರವಷ್ಟೇ ಹೊಳೆನರಸೀಪುರದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಬಂಧನವಾಗಿದೆ. ಕುಮಾರಸ್ವಾಮಿ ಅವರು ಸಹ ಬಂಧನವಾಗುವ ದಿನಗಳು ದೂರವಿಲ್ಲ. ಅವರೇನು ಸಾಚಾನಾ ಅಂತೇಳಿ ಶಾಸಕ ಕದಲೂರು ಉದಯ್ ಪ್ರಶ್ನೆ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರ ವೈಯಕ್ತಿಕ ಜೀವನದ ಕುರಿತು ಟೀಕೆ ಮಾಡಿರೋ ಮಾಡಿರೋ ಕದಲೂರು ಉದಯ್, ಕುಮಾರಸ್ವಾಮಿ ಅವರು ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರೇನು ಒಳ್ಳೆಯವರಲ್ಲ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯದ ಕಿರುಕುಳ ಬಗ್ಗೆಯೂ ನಾವು ಕೇಳಿದ್ದೇವೆ ಅಂತೇಳಿದ್ದಾರೆ. ಜೆಡಿಎಸ್ ನಾಯಕ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಈಗಾಗಲೇ ಜೈಲಲ್ಲಿದ್ದಾರೆ. ಅವರ ಸಹೋದರ ಎಚ್‌ಡಿ ಕುಮಾರಸ್ವಾಮಿ ಅವರು ಸಹ ಜೈಲಿಗೆ ಹೋಗಲಿದ್ದಾರೆ. ಪೆನ್‌ಡ್ರೈವ್ ಪ್ರಕರಣದ ನಂತರ ಹೆಚ್‌ಡಿಕೆ ವಿರುದ್ಧವು ಮಹಿಳೆಯು ದೂರು ನೀಡಲಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ರಾಧಿಕಾ ಅವರು ಪತ್ನಿಯಂತೆ ಕಾಣುತ್ತಾರೆ. ಮಗಳ ವಯಸ್ಸಿನ ಇವರನ್ನು ಪುಸಲಾಯಿಸಿ ಮಗಳು ಕೈಗೆ ಕೊಟ್ಟಿದ್ದಾರೆ. ಇದೀಗ ಅವರನ್ನು ರೋಡಿಗೆ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆದವರು ಇಂಥಹ ನೀಚ ಕೆಲಸ ಮಾಡುತ್ತಾರಾ? ಹಾಗಾದರೆ ಕುಮಾರಸ್ವಾಮಿ ಅವರೇನು ಸಾಚಾನಾ ಅಂತೇಳಿ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ರಾಜಕೀಯ ಜೀವನದುದ್ದಕ್ಕೂ ಬೇರೆಯವರನ್ನು ಬೆದರಿಕಸಿಕೊಂಡೆ ಬಂದರು. ಅಪಪ್ರಚಾರ ಮಾಡಿ, ಬೇರೆಯವರನ್ನು ಮುಳುಗಿಸಿಯೇ ಈವರೆಗೆ ಬಂದಿದ್ದೆ ಅವರ ಸಾಧನೆ. ಇವರು ಸಹ ನೀಚ ಕೆಲಸ ಮಾಡಿದ್ದಾರೆ. ಇವರ ಮನೆ ಹೆಣ್ಣು ಮಕ್ಕಳ ಮರಿಯಾದೆ ಹೋಗಿದ್ದರೆ ಹೀಗೆ ರಸ್ತೆಯಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದರಾ? ಎಂದು ವೈಯಕ್ತಿಕವಾಗಿ ಉದಯ್ ಅವರು ಕುಟುಕಿದ್ದಾರೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ಪ್ರಜ್ವಲ್ ಪ್ರಕರಣದ ಸಂತ್ರಸ್ತೆಯರ ಕ್ಷಮೆ ಕೇಳಿ ಗೌರವಹಿತವಾಗಿ ನಡೆದುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಸರ್ಕಾರದ ವಿರುದ್ಧ ಪ್ರತಿಭಟಿಸುವುದಕ್ಕೆ ಅಂದ ಭಕ್ತರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಅಂತೇಳಿ ಆರೋಪಿಸಿದ್ದಾರೆ. ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಪ್ರಕರಣವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಪ್ರಕರಣವನ್ನು ಭೇದಿಸಲು ಎಸ್‌ಐಟಿ ಸಮರ್ಥವಾಗಿದೆ. ತಲೆಮರಿಸಿಕೊಂಡಿರುವ ಆರೋಪಿ ಸಾಚಾ ಆಗಿದ್ದರೆ ಎಸ್‌ಐಟಿ ಮುಂದೆ ಬಂದು ಹೇಳಿಕೆ ನೀಡಲಿ ಅಂತಾನೂ ಕದಲೂರು ಉದಯ್ ತಾಕೀತು ಮಾಡಿದ್ದಾರೆ.
ಹಾಗಾದ್ರೆ ಶಾಸಕ ಕದಲೂರು ಉದಯ್ ಅವರು ಹೇಳಿದಂತೆ ಕುಮಾರಸ್ವಾಮಿ ಕೂಡ ಜೈಲು ಸೇರೋ ದಿನಗಳು ದೂರವಿಲ್ವಾ.? ಕುಮಾರಸ್ವಾಮಿ ಸಾಚಾನಾ.? ಅಲ್ವಾ

