
ಹರಿಹರ: ಮಕ್ಕಳನ್ನು ಹಲವು ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾಸಕ್ತಿ ಹೆಚ್ಚಿಸುವ ಉದ್ದೇಶವೇ ಕಲಿಕಾ ಹಬ್ಬ ಎಂದು ಎಫ್ಎಲ್ಎನ್ ನೂಡಲ್ ಅಧಿಕಾರಿ ಸಿ.ಕೆ. ಮಹೇಶ್ ಹೇಳಿದರು.
ತಾಲೂಕಿನ ಕಮಲಾಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾನುವಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯೆಂಬುದು ಒತ್ತಡವಾಗದೇ ಮಕ್ಕಳಿಗೆ ಆನಂದಮಯ ಚಟುವಟಿಕೆ ರೂಪದಲ್ಲಿರುವಂತೆ ಮಾಡುವುದಾಗಿದ್ದು, ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳ ಜ್ಞಾನ ವಿಕಸಿತವಾಗಲು ಸಹಕಾರಿಯಾಗಿದೆ ಎಂದು ವಿವರಿಸಿದರು.


ಗ್ರಾಮದ ಮುಖಂಡ ಈಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಎಂ.ಕೆ. ಮಾತನಾಡಿದರು. ಸಿಆರ್ಪಿ ಸುನಿತಾ ಡಿ. ಸ್ವಾಗತಿಸಿದರು. ಶಿಕ್ಷಕ ರಾಮನಗೌಡ ಪ್ಯಾಟಿ ನಿರೂಪಿಸಿದರು.
ಇಸಿಒ ಬಸವರಾಜ್ ಎಚ್.ಬಿ., ಸಿಆರ್ಪಿಗಳಾದ ಕೆ.ಎನ್. ಬಸವರಾಜ್, ಚನ್ನಮ್ಮ ತಡಕನಹಳ್ಳಿ, ಜಿ.ವಿ. ಲಲಿತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶರಣ್ಕುಮಾರ್ ಹೆಗಡೆ, ಸರ್ಕಾರಿ ನೌಕರರ ಸಂಘದ ಜ್ಯೋತಿಲಕ್ಷ್ಮೀಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಗ್ರಾಮದ ಮುಖಂಡರಾದ ಬಸವನಗೌಡ್ರು, ಹಾಲಸಿದ್ದಪ್ಪ, ಈಶ್ವರಪ್ಪ ಕೆ.ಎಸ್., ಗುರುಬಸಪ್ಪ, ರುದ್ರಗೌಡ್ರು, ಹುಲ್ಮನಿ ರಾಮಪ್ಪ, ಮುಖ್ಯಶಿಕ್ಷಕ ಮಂಜುನಾಥ್, ಎಸ್ಡಿಎಂಸಿ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಮಹಾಂತೇಶ್ ಕೆ.ಎಸ್., ನಿಜಲಿಂಗಪ್ಪ, ಗಂಗಾಧರ ಜಿ.ಬಿ., ಗಂಗಮ್ಮ, ಶ್ರುತಿ ಹೊಸೂರು, ಪ್ರಿಯಾ ನಾಗಪ್ಪನವರ್, ಶಿಕ್ಷಕರಾದ ಪ್ರಭುಗೌಡ ಪಾಟೀಲ್, ಹರೀಶ್, ಉಮಾದೇವಿ, ಕ್ಯಾರ್ಲಿನ್ ಓಲಿವರ್ ಫರ್ನಾಂಡಿಸ್, ಈರಮ್ಮ ಇತರರಿದ್ದರು.ಹತ್ತು ಶಾಲೆಗಳ ೧೪೦ ಮಕ್ಕಳು ೭ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು