
ದಾವಣಗೆರೆ : ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (UFBU) ದಾವಣಗೆರೆ ಜಿಲ್ಲಾ ಸಂಚಾಲಕರಾಗಿ ಕೆ.ರಾಘವೇಂದ್ರ ನಾಯರಿ ಆಯ್ಕೆಯಾಗಿದ್ದಾರೆ ಎಂದು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಜ್ಯ ಉಪಾಧ್ಯಕ್ಷ ಕೆ.ವಿಶ್ವನಾಥ್ ಬಿಲ್ಲವ ತಿಳಿಸಿದ್ದಾರೆ.
ಈ ಮೊದಲು ಸಂಚಾಲಕರಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ನಾಯಕ ಕೆ.ಎನ್.ಗಿರಿರಾಜ್ ಅವರು ಬೆಂಗಳೂರಿಗೆ ವರ್ಗವಾದ ಹಿನ್ನೆಲೆಯಲ್ಲಿ ನಡೆದ ಯುಎಫ್‌ಬಿಯು ಜಿಲ್ಲಾ ಸಮಿತಿ ಸಭೆಯಲ್ಲಿ ಕೆ.ರಾಘವೇಂದ್ರ ನಾಯರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ಮುಖಂಡ ಸುನಿಲ್ ಮ್ಯಾಗೇರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಯುಎಫ್‌ಬಿಯು ಜಿಲ್ಲಾ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯ ಸಂಘಟನೆಗಳ ನಾಯಕರು ಹಾಜರಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುನಿಲ್ ಎಸ್ ಮ್ಯಾಗೇರಿ, ಎಂ.ಡಿ.ವಿದ್ಯಾಸಾಗರ್, ಎಂ.ಎಸ್.ವಾಗೀಶ್, ಕಿರಣ್ ಕುಮಾರ್, ದುರ್ಗಪ್ಪ, ಕೆನರಾ ಬ್ಯಾಂಕಿನ ಪ್ರದೀಪ್ ಪಾಟೀಲ, ಕೆ.ವಿಶ್ವನಾಥ್ ಬಿಲ್ಲವ, ಜೆ.ಟಿ.ಶಕ್ತಿ ಪ್ರಸಾದ್, ಪರಶುರಾಮ, ಕೆ.ಮಂಜುನಾಥ್, ಕರ್ಣಾಟಕ ಬ್ಯಾಂಕಿನ ಹೆಚ್.ಎಸ್.ತಿಪ್ಪೇಸ್ವಾಮಿ, ಕೆ.ಗಂಗಾಧರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಜಯ್ ಕುಮಾರ್, ಬ್ಯಾಂಕ್ ಆಫ್ ಬರೋಡದ ಅಣ್ಣಪ್ಪ ನಂದಾ, ಇಂಡಿಯನ್ ಬ್ಯಾಂಕಿನ ಕೆ.ಎಂ.ರಾಜಶೇಖರ, ಶಸಿಸೇಕರ್ ಮತ್ತಿತರರು ಹಾಜರಿದ್ದರು.

