ದಾವಣಗೆರೆ : ಗಾಲಿ ಜನಾರ್ದನರೆಡ್ಡಿ.. ಇವರು ಸಕ್ರಿಯ ರಾಜಕಾರಣಕ್ಕೆ ಮರಳಬೇಕು ಅಂತೇಳಿ ಕನಸುಕಟ್ಟಿದ್ರು. ಜೊತೆಗೆ ಬಿಜೆಪಿಗೆ ಕಂ ಬ್ಯಾಕ್ ಆಗ್ಬೇಕು. ಹೈಕಮಾಂಡ್ ನಾಯಕರ ಸಪೋರ್ಟ್ ತಮಗೆ ಸಿಗಬೇಕು ಅಂತೇಳಿ ಹಂಬಲಿಸಿದ್ರು. ಆದ್ರೆ ಜನಾರ್ದರೆಡ್ಡಿ ಅವರ ಮೇಲೆ ಅಕ್ರಮ ಗಣಿಗಾರಿಕೆ ಕಳಂಕ ಕೇಳಿಬಂದಿತ್ತು. ಹೀಗಾಗಿ ಜನಾರ್ದನರೆಡ್ಡಿ ಅವರನ್ನ ಯಾವುದೇ ಕಾರಣಕ್ಕೂ ಬಿಜೆಪಿ ಸೇರಿಸಿಕೊಳ್ಳೋದಿಲ್ಲ ಅಂತೇಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಿದ್ರು.
ಆದ್ರೀಗ ಇದೇ ಅಮಿತ್ ಶಾ ಮತ್ತೆ ಜನಾರ್ದನರೆಡ್ಡಿ ಅವರನ್ನ ಭೇಟಿಯಾಗೋಕೆ ತೀರ್ಮಾನಿಸಿದ್ದಾರೆ. ಹಾಗಾದ್ರೆ BJPಗೆ ಜನಾರ್ದನರೆಡ್ಡಿ ಕಂ ಬ್ಯಾಕ್ ಆಗ್ತಾರಾ.? ರೆಡ್ಡಿ ಘರ್ ವಾಪ್ಸಿಗೆ ಮುಹೂರ್ತ ಫಿಕ್ಸ್ ಆಗಿ ಹೋಗಿದ್ಯಾ.? ಏನಿದು ರಾಜ್ಯ ಬಿಜೆಪಿಯ ಬಿಗ್ ಡೆವಲಪ್ಮೆಂಟ್ ಅಂದ್ರಾ?…ಈ ಸ್ಟೋರಿ ನೋಡಿ.
ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಯಾರೂ ಶಾಶ್ವತ ಮಿತ್ರರಲ್ಲ ಅನ್ನೋ ಮಾತಿದೆ.. ಅದು ಕಲ್ಯಾಣ ರಾಜ್ಯಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ವಿಷ್ಯದಲ್ಲೂ ಪ್ರೂವ್ ಆಗ್ತಾಯಿದೆ. ಇಷ್ಟು ದಿನ ರಾಜ್ಯ ಬಿಜೆಪಿ ನಾಯಕರು ಜನಾರ್ದನರೆಡ್ಡಿ ಅವರನ್ನ ಬಿಜೆಪಿಗೆ ಸೇರುವಂತೆ ಆಫರ್ ಕೊಟ್ರೆ ರೆಡ್ಡಿ ನಾನು ಬಿಜೆಪಿಗೆ ಸೇರಲ್ಲ., ಬೇಕಾದ್ರೆ BJPಗೆ KRPP ಬಾಹ್ಯ ಬೆಂಬಲ ಕೊಡುತ್ತೆ ಅಂತೇಳಿದ್ರು.. ಆದ್ರೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ರೆಡ್ಡಿ ಭೇಟಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದು. ಜನಾರ್ದನರೆಡ್ಡಿಅವರಿಗೆ ರೊಟ್ಟಿ ತಾನಾಗೇ ಜಾರಿ ತಪ್ಪಕ್ಕೆ ಬಿದ್ದಂತಾಗಿದೆ.
ಹೌದು ವೀಕ್ಷಕರೇ, ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಇದರ ಮಧ್ಯೆ ಬಿಜೆಪಿ ಹೈಕಮಾಂಡ್, ಕೆಆರ್ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಇತ್ತೀಚೆಗಷ್ಟೇ ಈ ಬಗ್ಗೆ ಚರ್ಚಿಸಲು ಹೈಕಮಾಂಡ್, ಶ್ರೀರಾಮುಲು ಅವರನ್ನು ದಿಲ್ಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು. ಆನಂತರ ಖುದ್ದು ಅಮಿತ್ ಶಾ, ಜನಾರ್ದನ ರೆಡ್ಡಿಯನ್ನು ದೆಹಲಿಗೆ ಕರೆಯಿಸಿಕೊಂಡು ಅಂತಿಮ ಸುತ್ತಿನ ಮಾತುಕತೆ ನಡೆಸಿತ್ತು. ಇದೀಗ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮುಹೂರ್ತ ಸಹ ಫಿಕ್ಸ್ ಆಗಿದೆ. ಇದೇ ಮಾರ್ಚ್ 25ರಂದು ಅಂದ್ರೆ ನಾಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಈ ವಿಷ್ಯವನ್ನ ತಿಳಿಸೋದಕ್ಕಾಗಿನೇ ಜನಾರ್ದನರೆಡ್ಡಿ ಇವತ್ತು ಸಂಜೆ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಕೆಆರ್ಪಿಪಿ ಪಕ್ಷದ ಮುಖಂಡರ ಜತೆ ಸಭೆ ನಡೆಯಲಿದ್ದು, ಸಭೆ ಬಳಿಕ ಸಂಜೆ 5 ಗಂಟೆಗೆ ರೆಡ್ಡಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಲಿದ್ದಾರೆ.
ನಿಮಗೆ ಗೊತ್ತಿರ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಆಹ್ವಾನದ ಮೇರೆಗೆ ಕೆಲವು ದಿನಗಳ ಹಿಂದೆ ದೆಹಲಿಗೆ ತೆರಳಿದ್ದರು. ಅಲ್ಲಿ ಶಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಮಾತುಕತೆ ನಡೆಸಿದ್ದರು. ಈ ವೇಳೆ ಬಿಜೆಪಿಗೆ ಸೇರುವಂತೆ ರೆಡ್ಡಿಗೆ ಆಹ್ವಾನ ನೀಡಿದ್ದಾರೆ. ಅಲ್ಲದೇ ಕೆಆರ್ಪಿಪಿ ಪಕ್ಷವನ್ನು ವಿಲೀನಗೊಳಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಜನಾರ್ದನರೆಡ್ಡಿ ಬಿಜೆಪಿಗೆ ಕಂಬ್ಯಾಕ್ ಆದ್ರೆ ಸೋತ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರಿಗೂ ಮರುಜೀವ ಬರುತ್ತೆ. ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಭಾಗದಲ್ಲಿ ಬಿಜೆಪಿಗೆ ಮಿಂಚಿನ ಸಂಚಲನ ಸಿಗುತ್ತೆ ಅನ್ನೋದು ಕೇಂದ್ರ ಬಿಜೆಪಿ ನಾಯಕರ ಲೆಕ್ಕಾಚಾರ.. ಅಷ್ಠೇ ಅಲ್ಲ, ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಅವರು ಮತ್ತೆ ಜೋಡೆತ್ತುಗಳಂತೆ ಸಕ್ರಿಯ ರಾಜಕೀಯಕ್ಕೆ ಎಂಟ್ರಿಕೊಟ್ರೆ ಲೋಕಸಭಾ ಅಖಾಡದಲ್ಲಿ ಧೂಳೆಬ್ಬಿಸಬಹುದು.. ಎಸ್ಟಿ ಮೀಸಲು ಕ್ಷೇತ್ರಗಳಾದ ರಾಯಚೂರು ಮತ್ತು ಬಳ್ಳಾರಿ ಗ್ರಾಮಾಂತರ ಎರಡೂ ಕ್ಷೇತ್ರಗಳನ್ನೂ ಕೈ ವಶ ಮಾಡಿಕೊಳ್ಳಬಹುದು ಅನ್ನೋ ಕೇಂದ್ರ ಬಿಜೆಪಿ ನಾಯಕರ ಲೆಕ್ಕಾಚಾರ..
ಹಾಗಾದ್ರೆ ಜನಾರ್ದನರೆಡ್ಡಿ ಬಿಜೆಪಿಗೆ ಕಂಬ್ಯಾಕ್ ಆಗ್ತಿರೋದ್ರ ಬಗ್ಗೆ ನೀವೇನಂತಿರಾ.? ಜನಾರ್ದರೆಡ್ಡಿ KRPP ಪಕ್ಷ ಸ್ಥಾಪಿಸಿ, ಇವರು MLA ಆಗಿರದಿದ್ರೆ ಇವತ್ತು ಬಿಜೆಪಿಗೆ ವಾಪಸ್ ಆಗಿ ಅಂತೇಳಿ ಅಮಿತ್ ಶಾ ಸೂಚಿಸಲು ಸಾಧ್ಯವಾಗ್ತಿತ್ತಾ.?