


ಶಿವಮೊಗ್ಗ: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಸರ್ಕಾರ ‘ವನ್ನು ಒತ್ತಾಯಿಸುವ ಮತ್ತು ಹೋರಾಟಕ್ಕೆ ಅಣಿಗೊಳಿಸುವ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಜಿಲ್ಲೆಯಲ್ಲಿದ್ದ ಎರಡು ಸಂಘಗಳ ಮೈತ್ರಿಗೆ ಇತಿಶ್ರೀ ನೀಡಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘವನ್ನು ಉಳಿಸಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಚಂದ್ರ ಭೂಪಾಲ್ ಹೇಳಿದರು.
ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಮಡಿವಾಳ ಸಂಘಗಳು ಎರಡು ಒಟ್ಟಿಗೆ ಕೆಲಸ ಮಾಡುತ್ತಿ ದ್ದವು. ಆದರೆ, ಅದರಲ್ಲಿನ ಒಂದು ಸಂಘ ಯಾವ ಹೋರಾಟವನ್ನು ಮಾಡದೆ, ಸಭೆಗಳನ್ನು ಕರೆಯದೆ ಅಸಹಕಾರ ನೀಡುತ್ತಿದ್ದರಿಂದ ಬೇಸತ್ತು ಎರಡು ಸಂಘದಿಂದ ಪ್ರತ್ಯೇಕಗೊಳಿಸಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘ (ರಿ.)ನ್ನು ಉಳಿ ಸಿಕೊಂಡು ಆ ಮೂಲಕ ಸಮಾಜದ ಸಂಘಟನೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ನೂತನ ತಂಡ ವನ್ನು ರಚಿಸಲಾಗಿದೆ ಎಂದರು.

ಜಿಲ್ಲಾ ಮಡಿವಾಳ ಸಮಾಜದ ಸರ್ವ ಸದಸ್ಯರ ಸಭೆ 2023ರಲ್ಲಿ ನಡೆದಾಗ ಅಲ್ಲಿ ಚುನಾವಣೆ ಹಣ ಕಾಸು, ಅವ್ಯವಹಾರ ಮತ್ತು ಸಂಘದ ಸದಸ್ಯರ ಹಣದ ದುರುಪಯೋಗ ಇವುಗಳ ವಿರುದ್ಧ ಧ್ವನಿಯೆತ್ತಿ ತನಿಖೆ ನಡೆಸುವಂತೆ ಪ್ರತಿಭಟನೆ ಕೂಡ ಮಾಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಂಘ ನಿಷ್ಕ್ರಿಯವಾಗಿರುವುದನ್ನು ಗಮನಿಸಿ ಶಿವಮೊಗ್ಗ ಜಿಲ್ಲಾ ಮಡಿ ವಾಳ ಸಂಘವನ್ನು ಪ್ರತ್ಯೇಕಗೊಳಿ ಸಲು ತೀರ್ಮಾನಿಸಲಾಗಿದೆ.ಸಂಘದಲ್ಲಿ ಸುಮಾರು 3 ಲಕ್ಷ ರೂ. ಠೇವಣಿ ಹಣ ಇತ್ತು. ಬೈಲದಂತೆ ಈ ಠೇವಣಿ ಹಣವನ್ನು ಖರ್ಚು ಮಾಡುವಂತಿರಲಿಲ್ಲ. ಅದರಿಂದ ಬರುವ ಬಡ್ಡಿ ಮಾತ್ರ ಖರ್ಚು ಮಾಡಬೇಕಿತ್ತು. ಆದರೆ ಸಂಘದ ಅಧ್ಯಕ್ಷರಾದ ಸದಾಶಿವಪ್ಪ ಮತ್ತು ಕಾರ್ಯದರ್ಶಿಯವರು ಈ ಹಣವನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಲೆಕ್ಕವನ್ನು ಕೊಟ್ಟಿಲ್ಲ. ಹಣ ಎಲ್ಲಿಹೋಯಿತು ಎಂಬುವುದು ಗೊತ್ತಿಲ್ಲ. ಇದು ಸಂಪೂರ್ಣ ತನಿಖೆಯಾಗಬೇಕು. ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಹಕಾರದ ಉಪನಿರ್ದೇಶಕರಿಗೆ ಈ ಬಗ್ಗೆ ದೂರು ಕೂಡ ನೀಡ ಲಾಗಿದೆ ಎಂದರು.

ಮಡಿವಾಳ ಸಮಾಜದ ಮಾಜಿ ಅಧ್ಯಕ್ಷ ಎಂ.ವಿ.ಮಹೇಂದ್ರಸ್ವಾಮಿ ಮಾತನಾಡಿ, ಪ್ರತ್ಯೇಕಗೊಂಡ ನಮ್ಮಸಂಘವನ್ನು ಮುನ್ನಡೆಲು ಮಡಿ ವಾಳ ಸಮಾಜದ ಮಹಾಸ್ವಾಮಿ ಗಳಾದ ಬಸವಮಾಚಿದೇವ ಸ್ವಾಮೀ ಜಿತುವರು ಆಶೀರ್ವಾದ ನೀಡಿದ್ದಾರೆ. ಈಗ ಆ ಸಂಘದಲ್ಲಿ ಇರುವವರು ಅತ್ಯಂತ ಕಡಿಮೆ ಸದಸ್ಯರು, ಅವರು ಕೂಡ ನಮ್ಮ ಜೊತೆ ಬರುತ್ತಾರೆ. ಮತ್ತು ಅವರು ಸಮಾಜದ ಅಭಿವೃದ್ಧಿಗೆ ಏನೇ ಕೆಲಸ ಮಾಡಿದರೂ ನಾವು ಅದಕ್ಕೆ ಅಡ್ಡಿಪಡಿಸುವುದಿಲ್ಲ. ಬದಲು ಸಹಕಾರ ನೀಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಡಿವಾಳ ಸಂಘದ ನೂತನ ಮಹಾಪ್ರಧಾನ ಕಾರ್ಯದರ್ಶಿ ಎಂ.ಕೆ.ಪ್ರಮೋದ್, ಪದಾಧಿಕಾರಿ ಗಳಾದ ಬಾಲಾಜಿರಾವ್, ಜೆ.ಹಿರ ಣ್ಣಯ್ಯ, ಎನ್.ಮಂಜುನಾಥ್, ಹೆಚ್.ಎಂ. ಮಂಜುನಾಥ್, ಟಿ. ಎಸ್.ಗುರುಮೂರ್ತಿ, ರವಿಕು ಮಾರ್, ಮೈಲಾರಪ್ಪ, ರಾಕೇಶ್, ಎಂ. ನಾಗರಾಜ್, ರುದ್ರೇಶ್, ಮೋಹನ್, ಸುಮೀತ್ ಆನಂದ್ ಇದ್ದರು.