


ದಾವಣಗೆರೆ : ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತ ಹಾಕಲು ಅರ್ಹರಿದ್ದು, ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಮೊದಲು ತಪ್ಪದೇ ಚೆಕ್ ಮಾಡಿ..
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಇಲಾಖೆಯ ಅಧಿಕೃತ ವೆಬ್ಸೈಟ್ https://electoralsearch.eci.gov.in/ ಭೇಟಿ ನೀಡಬೇಕು. ನಂತರ ನಿಮ್ಮ ಹೆಸರು ನೋಂದಣಿಯನ್ನ ತಿಳಿಯಲು ನೀವು ಮೂರು ವಿಧಾನಗಳನ್ನು ಅನುಸರಿಸುವ ಆಯ್ಕೆ ಕಾಣುತ್ತದೆ. ಮೊದಲನೆಯದಾಗಿ EPIC ಮೂಲಕ ಹುಡುಕಬಹುದು, ಇಲ್ಲದಿದ್ದರೇ ವಿವರಗಳ ಮೂಲಕ ಅಥವಾ ಮೊಬೈಲ್ ಸಂಖ್ಯೆ ಮೂಲಕ ಹುಡುಕಬಹುದು.

ಹಂತ 3:- ಆಯ್ಕೆ ಮಾಡಿದ ನಂತರ ನೀವು ಆಯ್ಕೆ ಮಾಡಿದ ಆಪ್ಷನ್ ಅನುಸಾರವಾಗಿ ನಿಮ್ಮ ಹೆಸರು ನಿಮ್ಮ ಊರು, ನಿಮ್ಮ ತಂದೆ ತಾಯಿಯ ಹೆಸರು, ನಿಮ್ಮ ಹುಟ್ಟಿದ ದಿನಾಂಕದ, ನಿಮ್ಮ ಗಂಡನ ಹೆಸರು ನಿಮ್ಮ ಜಿಲ್ಲೆ ಹಾಗೂ ತಾಲೂಕು ಹಾಗೂ ರಾಜ್ಯ, ಮತ್ತು ನಿಮ್ಮ EPIC ಮಾಹಿತಿಯನ್ನು ನಮೂದಿಸಿ.

ಹಂತ 4:- ಮಾಹಿತಿಗಳನ್ನು ನಮೂದಿಸಿದ ನಂತರ ಕ್ಯಾಪ್ಟ ಸಂಖ್ಯೆಯನ್ನು ನಮೂದಿಸಬೇಕು.
ಹಂತ 5:- serach ಬಟನ್ ಕ್ಲಿಕ್ ಮಾಡಿ. ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿದ ನಂತರ ನಿಮಗೆ ನಿಮ್ಮ ಹೆಸರು ಫೋಟೋ ಹಾಗೂ ನಿಮ್ಮ ವಿವರಗಳು ಮೊಬೈಲ್ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ಕಾಣಿಸಿದರೆ ನಿಮ್ಮ ಹೆಸರು ಮತದಾರರ ಪಟ್ಟಿಯನ್ನು ಇದೆ ಎಂದು ತಿಳಿಯಬೇಕು. ಒಂದು ವೇಳೆ ನಿಮ್ಮ ಹೆಸರು ಕಾಣಿಸದೆ ಇದ್ದರೆ ನೀವು ಮತದಾರರ ಪಟ್ಟಿಯನ್ನು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ನೋಂದಣಿ ಆಗದೆ ಇದ್ದಲ್ಲಿ ಏನು ಮಾಡಬೇಕು?
ಆನ್ಲೈನ್ ಮೂಲಕ ಮಾಹಿತಿ ಸಿಗದೇ ಇದ್ದರೆ ಅಥವಾ ನಿಮ್ಮ ಹೆಸರು ನೋಂದಣಿ ಆಗದೆ ಇದ್ದರೆ ನೀವು ನಿಮ್ಮ ಹತ್ತಿರದ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ. ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಸಹಾಯ ಮಾಡುತ್ತಾರೆ.
ಮತದಾನಕ್ಕೆ ತೆರಳುವಾಗ ಕೊಂಡೊಯ್ಯಬೇಕಾದಾಗ ದಾಖಲೆಗಳು
ಮತದಾನಕ್ಕೆ ತೆರಳುವಾಗ ವೋಟಿಂಗ್ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ಮೂಲ ಪ್ರತಿಯನ್ನು ಮತದಾನ ಮಾಡುವಾಗ ಕೊಂಡೊಯ್ಯಬೇಕು. ಹಾಗೂ ನಿಮ್ಮ ಮತದಾನ ಪಟ್ಟಿಯ ಚೀಟಿಯನ್ನು ನಿಮಗೆ ಚುನಾವಣಾ ಅಧಿಕಾರಿಗಳು ನೀಡಿರುತ್ತಾರೆ ಅದನ್ನು ಸಹ ನೀವು ತೆಗೆದುಕೊಂಡು ಹೋಗಬೇಕು.