
ದಾವಣಗೆರೆ : ನರೇಂದ್ರ ಮೋದಿ. ದೇಶದ ಜನಪ್ರಿಯ ಪ್ರಧಾನಿ.. ಆದ್ರೆ ವಿಪಕ್ಷಗಳ ನಾಯಕರುಗಳಿಗೆ ಮಾತ್ರ ಮೋದಿ ಜನಪ್ರಿಯ ಅಲ್ಲ. ಜನ ವಿರೋಧಿ ನಾಯಕ. ಕೊಟ್ಟ ಭರವಸೆಗಳನ್ನ ಈಡೇರಿಸದ ಜನಪ್ರತಿನಿಧಿ. ವಿಪಕ್ಷಗಳ ಮೇಲೆ ಸುಳ್ಳು ಪೊಳ್ಳುಗಳನ್ನ ಹೊರೆಸುವಂತಾ ಜನ ನಾಯಕ. ಇದಕ್ಕೆ ಕಾಂಗ್ರೆಸ್ ನಾಯಕರು ಈಗಾಗಲೇ ಸಾಕಷ್ಟು ಉದಾಹರಣೆಗಳನ್ನ ಕೊಟ್ಟಿದ್ದಾರೆ. ಈಗ್ಲೂ ಕೊಡ್ತಾನೇ ಇದ್ದಾರೆ. ಬಡವರ ಖಾತೆಗಳಿಗೆ ೧೫ಲಕ್ಷ ಹಣ ಹಾಕಬಹುದು ಅಂತೇಳಿದ್ದು, 2022ರೊಳಗೆ ರೈತರ ಆದಾಯ ಡಬಲ್ ಮಾಡ್ತೀವಿ ಅಂತೇಳಿ ಇನ್ನೂ ಈಡೇರಿಸದೇ ಇರೋದು. ಹೇಳಿದಂತೆ ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿಮಾಡದೆ ಇರೋದು. ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಬೆಳೆಯುತ್ತೆ. ಪರಿಸ್ಥಿತಿ ಹೀಗಿರೋವಾಗ್ಲೇ, ಇದೀಗ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ವಿರುದ್ಧ ಕೆಲವು ವಾಗ್ಬಾಣಗಳನ್ನ ಟ್ವೀಟ್ ಮಾಡೋ ಮೂಲಕ ಬಿಟ್ಟಿದೆ. ಹಾಗಾದ್ರೆ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ವಿರುದ್ಧ ಕಿಡಿಕಾರಿದ್ಯಾಕೆ.? ಏನದು ಅಂಬಾನಿ-ಅದಾನಿಗೆ ಟ್ರಕ್??ನಲ್ಲಿ ಕಂತೆ ಕಂತೆ ಹಣ ಅಂದ್ರಾ.?
ಕೋವಿಶೀಲ್ಡ್?? ಲಸಿಕೆ ಸೈಡ್? ಎಫೆಕ್ಟ್? ಸರ್ಟಿಫಿಕೇಟ್???ನಲ್ಲಿ ಮೋದಿ ಫೋಟೋ ಮಾಯ?
ಕೋವಿಶೀಲ್ಡ್ ಲಸಿಕೆಯ ಗಂಭೀರ ಅಡ್ಡಪರಿಣಾಮದ ಬಗ್ಗೆ ಒಪ್ಪಿಕೊಂಡ ನಂತರ ಜಗತ್ತಿನಾದ್ಯಂತ ಲಸಿಕೆಗಳನ್ನು ಹಿಂಪಡೆದಿದೆ ಅಸ್ಟ್ರಜೆನಿಕಾ ಕಂಪೆನಿ.ಆದರೆ, ಈಗಾಗಲೇ ಜನರ ದೇಹದೊಳಗೆ ಸೇರಿಸಿದ ಲಸಿಕೆಯನ್ನು ಹಿಂಪಡೆಯಲು ಸಾಧ್ಯವೇ ಅಂತೇಳಿ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಪ್ರಚಾರದ ಉದ್ದೇಶಕ್ಕಾಗಿ ಪೂರ್ಣ ಟ್ರಯಲ್ ನಡೆಯದ ಲಸಿಕೆಯನ್ನು ಜನತೆಗೆ ಬಲವಂತವಾಗಿ ನೀಡಿ, ಲಸಿಕೆಯಲ್ಲೂ ರಾಜಕಾರಣ ಮಾಡಿದ್ದ, ಸರ್ಟಿಫಿಕೇಟ್ ನಲ್ಲಿ ತಮ್ಮ ಫೋಟೋ ಮುದ್ರಿಸಿದ್ದ ಮೋದಿಯವರು ಈ ದೇಶದ ಜನರ ಜೀವ, ಜೀವನದ ಜೊತೆ ಚೆಲ್ಲಾಟ ಆಡಿದ್ದಾರೆ. ಪೂರ್ಣ ಟ್ರಯಲ್ ಆಗದ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಟ್ಟವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ್ದ ಬಿಜೆಪಿಗರೇ ಈಗ ನೈಜ ಜನದ್ರೋಹಿಗಳಲ್ಲವೇ.? ಲಸಿಕೆಯ ಪರಿಣಾಮಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದೇಕೆ.? ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದೇಕೆ.? ಅಂತೇಳಿ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಅಷ್ಟೇ ಅಲ್ಲ, ಚುನಾವಣೆ ಆರಂಭದ ಸಮಯದಲ್ಲಿ ಬಿಜೆಪಿಗರು “ಮೋದಿಯವರು ಉಚಿತ ಲಸಿಕೆ ಕೊಟ್ಟಿದ್ದಾರೆ, ಅದಕ್ಕಾಗಿ ಮತ ಕೊಡಿ’ ಎನ್ನುತ್ತಿದ್ದರು. ಯಾವಾಗ ಲಸಿಕೆಯ ಅಡ್ಡಪರಿಣಾಮಗಳನ್ನು ಕಂಪೆನಿ ಒಪ್ಪಿಕೊಂಡಿತೋ, ಆಗಿನಿಂದ ಬಿಜೆಪಿಗರ ಲಸಿಕೆ ಮಾತು ಬಂದ್ ಆಗಿವೆ.! ಸರ್ಟಿಫಿಕೇಟ್??ನಿಂದ ಮೋದಿ ಫೋಟೋ ಕೂಡ ಮಾಯವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ದೇಶದ ಜನರಿಗೆ ವಿಷ ಉಣಿಸಿದ ಮಹಾಪ್ರಭುಗಳಿಗೆ ಭಯ ಶುರುವಾಗಿದೆಯೇ ಅಂತೇಳಿ ಕಟುವಾಗಿ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಇಷ್ಟಕ್ಕೆ ನಿಲ್ಲದ ರಾಜ್ಯ ಕಾಂಗ್ರೆಸ್, ಅದಾನಿ ಅಂಬಾನಿ ಬಗ್ಗೆ ಮಾತಾಡದಿರುವುದಕ್ಕೆ ಟ್ರಕ್??ನಲ್ಲಿ ಹಣ ಕಳಿಸಿರಬಹುದು ಎನ್ನುವ ನರೇಂದ್ರ ಮೋದಿ ಅವರೇ, ಅದೇ ಅದಾನಿ ಅಂಬಾನಿಗಳಿಗೆ ದೇಶದ ಸಂಪತ್ತನ್ನು ನಿಮ್ಮ ಪಿತ್ರಾರ್ಜಿತ ಆಸ್ತಿ ಎಂಬAತೆ ಎತ್ತಿ ಕೊಟ್ಟಿರಲ್ಲ, ನಿಮಗೆ ಹಡಗಿನಲ್ಲಿ ಹಣ ತುಂಬಿ ಕಳಿಸಿದ್ದರಾ.? ಕೇವಲ ಮಾತಾಡದಿರಲು ಟ್ರಕ್ಕಲ್ಲಿ ಹಣ ಕೊಡಬಲ್ಲರು ಎಂದರೆ ದೇಶದ ಅಮೂಲ್ಯ ಸಂಪತ್ತನ್ನು ಅವರ ಕೈಗೆ ಕೊಟ್ಟಿರುವಾಗ ಋಣ ಸಂದಾಯ ಮಾಡದೇ ಇರುವರೇ..!? ಇದಕ್ಕೆ ಪ್ರಧಾನಿ ಮೋದಿಯವರು ದೇಶಕ್ಕೆ ಉತ್ತರಿಸಬೇಕು ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿದೆ.


ಬಿಜೆಪಿಗೆ ಸೋಲಿನ ಭಯ..!? ದಿಕ್ಕು ತಪ್ಪಿಸೋ ಪ್ರೊಪೆಗಂಡಾ?
ಚುನಾವಣೆ ನಡೆದ ನಂತರವೂ ಬಿಜೆಪಿ ಸೋಲಿನ ಕಡೆ ಹತ್ತಿರವಾಗುತ್ತಿರುವುದು ಗಮನಕ್ಕೆ ಬರುತ್ತಿದೆ, ಹಾಗಾಗಿಯೇ ಹೊಸ ಹೊಸ ಪ್ರೊಪೆಗಂಡಾ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸಗಳು ಹೆಚ್ಚಾಗುತ್ತಿವೆ. ಅದರ ಮುಂದುವರೆದ ಭಾಗವೇ ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಕಪೋಲಕಲ್ಪಿತ ವರದಿ, ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಜನಗಣತಿ ಮಾಡಿದೆಯೇ.? ಜನಗಣತಿ ಮಾಡದೆಯೇ ಇಂತಹ ವರದಿಯನ್ನು ಸ್ವತಃ ಪ್ರಧಾನಿಯೇ ಕುಳಿತು ಬರೆಸಿದರೇ.? ಇದು ಜನರ ದಿಕ್ಕುತಪ್ಪಿಸಲು ಹೆಡ್ ಲೈನ್ ಮ್ಯಾನೇಜ್ಮೆಂಟ್ ವರದಿಯೇ ಹೊರತು ಸತ್ಯಂಶವಿರುವ ವರದಿಯಲ್ಲ. ನರೇಂದ್ರ ಮೋದಿ ಅವರೇ, ನಿಮ್ಮ ಯಾವುದೇ ಗಿಮಿಕ್???ಗಳೂ ಈ ಬಾರಿ ನಡೆಯುವುದಿಲ್ಲ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ಹಾಗಾದ್ರೆ ರಾಜ್ಯ ಕಾಂಗ್ರೆಸ್?? ಪಟ್ಟಿ ಮಾಡಿರೋ ಈ ಪ್ರಶ್ನೆ ಮತ್ತು ಅಂಶಗಳ ಬಗ್ಗೆ ನೀವೇನಂತಿರಾ?