ದಾವಣಗೆರೆ : ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳು ಹೈವೋಲ್ಟೇಜ್ ಕಣಗಳಾಗಿ ಮಾರ್ಪಟ್ಟಿವೆ. ಅಂತ ಕಣಗಳಲ್ಲಿ ಒಂದು ಚಿಕ್ಕಬಳ್ಳಾಪುರ.. ಇಲ್ಲಿ ಈ ಸಲ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಡಾ. ಕೆ ಸುಧಾಕರ್ ಸೋಲೋದು ಗ್ಯಾರಂಟಿ.. ಸೋತ್ಮೇಲೆ ಅವರು ಜೈಲಿಗೆ ಹೋಗೋದು ಕೂಡ ಗ್ಯಾರಂಟಿ ಅಂತೇಳಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಹಾಗಾದ್ರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಸೋಲ್ತಾರೆ ಅಂತೇಳಿ ಸಿಎಂ ಸಿದ್ದರಾಮಯ್ಯ ಖಚಿತವಾಗಿ ಹೇಳಿದ್ದೇಕೆ.? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಲೆಕ್ಕಾಚಾರಗಳೇನು ಗೊತ್ತಾ.?
ಚಿಕ್ಕಬಳ್ಳಾಪುರ.. ಹೇಳಿ ಕೇಳಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಮಾಜಿ ಸಚಿವ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ಡಾ. ಕೆ ಸುಧಾಕರ್ ಕಣದಲ್ಲಿದ್ರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಾ ರಾಮಯ್ಯ ಅಖಾಡಕ್ಕಿಳಿದಿದ್ದಾರೆ.. ಹಾಗಾದ್ರೆ ಯಾರು ರಕ್ಷಾ ರಾಮಯ್ಯ..? ಇವರು ಚಿಕ್ಕಬಳ್ಳಾರಪುದಲ್ಲಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಅದ್ಹೇಗೆ ಸವಾಲಾಗಿ ಪರಿಣಮಿಸಿದ್ದಾರೆ ಗೊತ್ತಾ.? ಅದನ್ನ ಒಂದು ಸ್ವಲ್ಪ ಡೀಟೇಲಾಗಿ ತೋರಿಸ್ತೀವಿ ನೋಡಿ.
ರಕ್ಷಾ ರಾಮಯ್ಯ. ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.. ಜೊತೆಗೆ ವಿಧಾನ ಪರಿಷತ್ ಸದಸ್ಯರೂ ಆಗಿರುವ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರ ಪುತ್ರ. ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರೋ MS.ರಾಮಯ್ಯ ಅವರ ಕುಟುಂಬದ ಕುಡಿ. MBA ಪದವೀಧರರಾದ ರಕ್ಷಾ ರಾಮಯ್ಯ 1999ರಿಂದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲೆ ಯುವ ಕಾಂಗ್ರೆಸ್ ಉಪಾಧ್ಯಕ್ಷ, ರಾಷ್ಟ್ರೀಯ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿ, ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಈಗ ಕೆಲಸ ಮಾಡುತ್ತಿದ್ದಾರೆ. ಆದ್ರೆ ಇದೇ ಮೊದಲ ಸಲ ರಕ್ಷಾ ರಾಮಯ್ಯ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್!!
ಇನ್ನ ರಕ್ಷಾ ರಾಮಯ್ಯ ಪರ ಸಿಎಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಭರ್ಜರಿ ಬ್ಯಾಟಿಂಗ್ ಮಾಡ್ತಾಯಿದ್ದಾರೆ. ಇವತ್ತು ಕೂಡ ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸಿರೋ ಸಿಎಂ ಸಿದ್ರಾಮಯ್ಯ, ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ. ‘ಸುಧಾಕರ್ ಆರೋಗ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟರು ಸಂಸತ್ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಅವರ ಕುರಿತ ಹಗರಣದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ ಅಂತೇಳಿ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನೀವೇ ಸುಧಾಕರ್ ಅವರನ್ನ ತಿರಸ್ಕರಿಸಿ ಸೋಲಿಸಿದ್ರಿ, ಈಗ ಮತ್ತೆ ತಮ್ಮ ಪ್ರಭಾವ ಬಳಸಿ ಪಾರ್ಲಿಮೆಂಟ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ ಅಂತೇಳಿ ಸಿಎಂ ಸಿದ್ದರಾಮಯ್ಯ ಮತದಾರರಿಗೆ ಕರೆ ಕೊಟ್ಟಿದ್ದಾರೆ.
ಮತ್ತೊಂದು ಕಡೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಡಾ. ಕೆ ಸುಧಾಕರ್ ಅವರನ್ನ ಸೋಲಿಸಿದ್ರು. ಆದ್ರೆ ಈ ಸಲವೂ ಸುಧಾಕರ್ ಗೆಲ್ಲಬಾರ್ದು ಅಂತೇಳಿ ಕಂಕಣ ತೊಟ್ಟಿರೋ ಪ್ರದೀಪ್ ಈಶ್ವರ್, ಸುಧಾಕರ್ ಅವರನ್ನು ನಾವು ಸೋಲಿಸೇ ತೀರುತ್ತೇವೆ. ಅವರನ್ನು ಸಂಸತ್ತಿನ ಮೆಟ್ಟಿಲು ಹತ್ತಲು ಬಿಡಲ್ಲ ಅಂತೇಳಿ ಶಪಥ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ಪಕ್ಷ ಸುಧಾಕರ್ ಚುನಾವಣೆಯಲ್ಲಿ ಒಂದೇ ಒಂದು ವೋಟು ಲೀಡ್ ಪಡೆದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ಸುಧಾಕರ್ ಸೋತರೆ ತಮ್ಮ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಿಟ್ಟು ಕೊಡಬೇಕು, ಸವಾಲನ್ನು ಸ್ವೀಕರಿಸುವುದಾದರೆ ಇಬ್ಬರೂ ಹೋಗಿ ನಂದಿಕೇಶ್ವರ ದೇವಸ್ಥಾನಲ್ಲಿ ಪ್ರಮಾಣ ಮಾಡೋಣ ಅಂತೇಳಿ ಪ್ರದೀಪ್ ಈಶ್ವರ್ ಸವಾಲ್ ಎಸೆದಿದ್ರು.
ಡಾ. ಕೆ ಸುಧಾಕರ್ ಅವರಿಗೆ ಆ ದಮ್ಮು, ತಾಕತ್ತು, ಕಲೇಜಾ ಇದ್ದರೆ ತನ್ನ ಸವಾಲು ಸ್ವೀಕರಿಸಲಿ ಎಂದು ಸವಾಲ್ ಎಸೆದಿದ್ರು. ಆದ್ರೆ ಸುಧಾಕರ್ ಇದಕ್ಕೆ ರಿಯಾಕ್ಟ್ ಮಾಡಿರ್ಲಿಲ್ಲ.
ಇನ್ನ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಗೆದ್ದೇ ಗೆಲ್ತಾರೆ ಅನ್ನೋ ರಾಜಕೀಯ ವಿಶ್ಲೇಷಣೆಗಳು ಬಲವಾಗಿ ಕೇಳಿಬರ್ತಾಯಿರೋದ್ಯಾಕೆ ಗೊತ್ತಾ? ಅದನ್ನೂ ತೋರಿಸ್ತೀವಿ ನೋಡಿ.
ರಕ್ಷಾ ರಾಮಯ್ಯಗೆ ಪ್ಲಸ್ ಆಗೋ ಅಂಶಗಳು
⦁ ರಕ್ಷಾ ರಾಮಯ್ಯ ಯುವ, ಪ್ರತಿಭಾವಂತ ಮತ್ತು ಜನಪ್ರಿಯ ಕಾಂಗ್ರೆಸ್ ಮುಖಂಡ
⦁ ಇವರ ಸರಳ ಮತ್ತು ಸಿಂಪಲ್ ವ್ಯಕ್ತಿತ್ವ, ಬಡವರು, ಶ್ರೀಸಾಮಾನ್ಯರ ಜತೆ ಬೆರೆಯುವಂತಾ ಗುಣ ಗೆಲುವಿನ ದಡ ತಲುಪಿಸುತ್ತೆ
⦁ BJP ಅಭ್ಯರ್ಥಿ ಡಾ. ಕೆ ಸುಧಾಕರ್ ಅವರ ಮೇಲೆ ಕೋವಿಡ್ ಹಗರಣದ ಆರೋಪ ಇದೆ. ಇದು ರಕ್ಷಾ ರಾಮಯ್ಯಗೆ ಪ್ಲಸ್ ಆಗುತ್ತೆ.
⦁ ಇದೇ ರೀತಿ ಕಳೆದ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಕೆ ಸುಧಾಕರ್ಗಿಂತ ರಕ್ಷಾ ರಾಮಯ್ಯಗೆ ಜನಪ್ರಿಯತೆ ಸಿಕ್ಕಿತ್ತು
⦁ ಇನ್ನ ಬಾಗೇಪಲ್ಲಿಯಲ್ಲಿ ಒಕ್ಕಲಿಗರ ಮತಗಳು ಕಾಂಗ್ರೆಸ್ ಬೆನ್ನಿಗೆ ನಿಲ್ತಾಯಿವೆ. ಜೆಡಿಎಸ್ ಕಾರ್ಯಕರ್ತರು ಹಾಗೂ ಜಿಲ್ಲಾ ಮುಖಂಡರು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ.
⦁ ಚಿಕ್ಕಬಳ್ಳಾಪುರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ರಕ್ಷಾ ರಾಮಯ್ಯ ಕೈ ಹಿಡಿಯೋ ಸಾಧ್ಯತೆ ಇದೆ.
⦁ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚಾಗಿದೆ. ಅಹಿಂದ ಬಲವರ್ಧನೆಯಾಗಿದೆ. ವಿಶೇಷವಾಗಿ ರಕ್ಷಾರಾಮಯ್ಯ ಪ್ರತಿನಿಧಿಸುತ್ತಿರೋ ಬಲಿಜ ಮತಗಳು ಕೂಡ ಕಾಂಗ್ರೆಸ್ ಬೆನ್ನಿಗೆ ಗಟ್ಟಿಯಾಗಿ ನಿಂತಿವೆ. ಈ ಮತಗಳು ಕಳೆದ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಂಚಿ ಹೋಗಿದ್ವು ಅನ್ನೋದು ವಿಶೇಷ.
⦁ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6+1ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
⦁ ಗೌರಿಬಿದನೂರು, ಬಾಗೇಪಲ್ಲಿ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ರಕ್ಷಾ ಅವರ ಪ್ರಾಬಲ್ಯ ಕಾಂಗ್ರೆಸ್‌ನ್ನು ಗೆಲುವಿನ ದಡ ಸೇರಿಸೋ ಸಾಧ್ಯತೆ ಇದೆ.
⦁ ಅಷ್ಟೇ ಅಲ್ಲ, ಯಲಹಂಕದಲ್ಲಿ ವಿಶ್ವನಾಥ್ ಸೈಲೆಂಟ್ ಆಗಿರೋದು ಮತ್ತು ಅತೃಪ್ತ ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ಚಿಕ್ಕಬಳ್ಳಾಪುರದಲ್ಲಿ ಹಿನ್ನಡೆಯಾಗುವಂತೆ ಮಾಡೋ ಸಾಧ್ಯತೆ ಇದೆ.
⦁ ಕೊನೆದಾಗಿ ಸೆಮಿ ಅರ್ಬನ್ ಪ್ರದೇಶವಾಗಿರೋ ದೊಡ್ಡಬಳ್ಳಾಪುರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಆಗಿದ್ವು. ಆದ್ರೀಗ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಂದ ಇಲ್ಲಿನ ಮತದಾರರು ಕೂಡ ಕಾಂಗ್ರೆಸ್ ಕಡೆ ವಾಲೋ ಸಾಧ್ಯತೆ ಇದೆ.
ಹೀಗೆ ಎಲ್ಲ ರೀತಿಯಲ್ಲೂ ಅಳೆದೂ ತೂಗಿದ್ರೂ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ಗೆ ಹಿನ್ನಡೆಯಾಗೋ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಚುನಾವಣೆಗೆ ಇನ್ನು ಕೆಲವೇ ದಿನಗಳ ಬಾಕಿ ಇರೋ ಟೈಮಲ್ಲಿ ಆಂಧ್ರದ ಸ್ಟಾರ್ ನಟ ಕಂ ಪೊಲಿಟಿಷಿಯನ್ ಆಗಿರೋ ಪವನ್ ಕಲ್ಯಾಣ್ ಅವರನ್ನ ಚಿಕ್ಕಬಳ್ಳಾಪುರಕ್ಕೆ ಕರೆಸಿ ತಮ್ಮ ಪ್ರಚಾರ ನಡೆಸಿಕೊಳ್ಳೋಕೆ ಡಾ. ಕೆ ಸುಧಾಕರ್ ಪ್ಲ್ಯಾನ್ ಮಾಡಿದ್ದಾರೆ.
ಆದ್ರೆ ಹೊರಗಿನ ಯಾರೇ ಸ್ಟಾರ್ ನಟರು ಬಂದ್ರೂ ಸುಧಾಕರ್ ಗೆಲುವು ಕಷ್ಟ ಅನ್ನೋ ಮಾತುಗಳು ಚಿಕ್ಕಬಳ್ಳಾಪುರದಲ್ಲಿ ಹರಿದಾಡ್ತಾಯಿವೆ. ಇದೆಲ್ಲವನ್ನೂ ಮೀರಿ, ಬಿಜೆಪಿ ಅಭ್ಯರ್ಥಿ ಒಕ್ಕಲಿಗರಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದಲ್ಲಿ ಎರಡೂ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಆದರೂ, ಇಬ್ಬರೂ ಅಭ್ಯರ್ಥಿಗಳಿಗೆ ಒಳ ಏಟಿನ ಭೀತಿ ಕಾಡುತ್ತಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಬಹುಸಂಖ್ಯೆಯಲ್ಲಿದ್ದರೂ, ತೀರಾ ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿರುವ ಸಮುದಾಯಗಳು ಕಾಂಗ್ರೆಸ್‌ಗೆ ಹೆಚ್ಚು ಗೆಲುವನ್ನ ಕೊಟ್ಟಿರೋ ಇತಿಹಾಸವಿದೆ. ಈ ಲೆಕ್ಕಾಚಾರಗಳು ಏನೇ ಇದ್ರೂ ಅಂತಿಮವಾಗಿ ಮತದಾರ ಪ್ರಭು ಯಾರಿಗೆ ವಿಜಯದ ಮಾಲೆ ಹಾಕ್ತಾನೆ ಅನ್ನೋದು ಜುಲೈ 4ರಂದು ಗೊತ್ತಾಗಲಿದೆ.