ದಾವಣಗೆರೆ ; ಸದಾ ಚಟುವಟಿಕೆಯುಳ್ಳ ಹೊಸತನಕ್ಕೆ ಅಂಟಿಕೊಂಡಿರುವ ಅಂಚೆ ಇಲಾಖೆಯ ನಾನಾ ಯೋಜನೆಗಳನ್ನು ಬಡವನವರೆಗೂ ಮುಟ್ಟುವರೆಗೆ ಕೆಲಸ ಮಾಡುತ್ತಿರುವ ಅಂಚೆ ಅಧೀಕ್ಷಕ ಚಂದ್ರಶೇಖರ್ ನೇತೃತ್ವದಲ್ಲಿ ಕಂದನಕೋವಿ ಶಾಖಾ ಅಂಚೆ ಕಚೇರಿ ಉದ್ಘಾಟನೆ ಗೊಂಡಿತು. ಉದ್ಘಾಟನೆಯನ್ನು ಶಾಸಕ ಕೆ.ಎಸ್.ಬಸವಂತಪ್ಪ ನೆರವೇರಿಸಿದರು.
ದಾವಣಗೆರೆ ಅಂಚೆ ಕಚೇರಿಗೆ ಪ್ರಥಮವಾಗಿ ಅಂಚೆ ಅಧೀಕ್ಷಕರಾಗಿರುವ ಚಂದ್ರಶೇಖರ್ ಅಂಚೆ ಇಲಾಖೆಯಿಂದ ದೊರೆಯುವ ಸಾಕಷ್ಟು ಸೌಲಭ್ಯಗಳನ್ನು ಹಳ್ಳಿಯವರೆಗೆ ಮುಟ್ಟಿಸುತ್ತಿದ್ದಾರೆ. ಈ ಮೂಲಕ ಅಂಚೆಕಚೇರಿಯನ್ನು ಉತ್ತುಂಗ ಮಟ್ಟಕ್ಕೆ ಹೊತ್ತುಯ್ಯುತ್ತಿದ್ದಾರೆ. ಅಲ್ಲದೇ ಇವರ ಜತೆ ಎಎಸ್ಪಿ ಗುರುಪ್ರಸಾದ್, ಮಾರ್ಕೆಂಟಿಗ್ ಸಂತೋಷ್ ಕೂಡ ಹೆಜ್ಜೆ ಹಾಕುತ್ತಿದ್ದು, ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದನಕೋವಿ ಶಾಖಾ ಅಂಚೆ ಕಚೇರಿ ಉದ್ಘಾಟನೆಗೊಂಡಿದೆ.
ಕಂದನಕೋವಿ ಶಾಖಾ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಂಚೆ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, ಕಂದನಕೋವಿ ಅಂಚೆ ಕಚೇರಿಯು ಈಗ ತಾನೆ ಜನಿಸಿರುವ ಶಿಶುವಾಗಿದ್ದು ಅದನ್ನು ಪೋಷಿಸಿ ಬೆಳೆಸಿ, ಉಳಿಸಿ ಕಂದನಕೋವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯುಕ್ತವಾಗುವಂತೆ ನೋಡಿಕೋಳ್ಳಬೇಕಾಗಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಂದನಕೋವಿ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡ ಗ್ರಾಹಕರಿಗೆ ಪಾಸ್ ಪುಸ್ತಕ ರಶೀದಿ ಮತ್ತು ಕ್ಯೂಆರ್ ಕಾರ್ಡ್ ಗಳನ್ನು ವಿತರಿಸಲಾಯಿತು. ಅಂಚೆ ಇಲಾಖೆಯಲ್ಲಿ ಎಲ್ಲಾ ವಯಸ್ಕರಿಗೂ ವಿವಿಧ ಬಗೆಯ ಯೋಜನೆಗಳು ಮತ್ತು ಸೇವಾ ಸೌಲಭ್ಯಗಳು ಲಭ್ಯವಿದ್ದು ಅದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ದಾವಣಗೆರೆ ಅಂಚೆ ವಿಭಾಗದ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಗುರುಪ್ರಸಾದ್ ಜೆಎಸ್, ದಾವಣಗೆರೆ ಒಂದನೇ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶ್ರೀ ನರೇಂದ್ರ ನಾಯ್ಕ್ ಕೆ ಎಂ, ದಾವಣಗೆರೆ ಎರಡನೇ ಉಪ ವಿಭಾಗದ ಅಂಚೆ ನಿರೀಕ್ಷಕ ಅಶ್ವಥ್ ವಿ, ದಾವಣಗೆರೆ ಐಪಿಪಿಬಿ ಮ್ಯಾನೇಜರ್ ಶ್ರೀನಿವಾಸ್ ಕೆ ಎಚ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಂತೋಷ್ ಬಿ, ಅಣಜಿ ಉಪ ಅಂಚೆ ಕಛೇರಿಯ ಅಂಚೆಪಾಲಕ ಶಿವಮೂರ್ತಿ ಹಾಗೂ ಅಣಜಿ ಉಪ ಅಂಚೆ ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಅಂಚೆ ಮೇಲ್ವಿಚಾರಕ ಶಶಿಧರರ್ಮೂರ್ತಿ ಹಾಗೂ ಪುರುಷೋತ್ತಮ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ಉಮ್ಮಣ್ಣ ಎನ್, ದೀಪ, ರಂಗ ಸ್ವಾಮಿ, ಕರಿಬಸಪ್ಪ ಎಂಬಿ, ಶಿವಗಂಗಮ್ಮ ಮಂಜುನಾಥ, ಭಾರತಾಮ್ಮ ಮಹೇಶ್ವರಪ್ಪ ಎ ಎನ್, ಉಮೇಶ್, ಅಶೋಕ್ ಕುಮಾರ್ ಕೆ ಎಂ, ಶ್ರೀ ಷಣ್ಮುಖಪ್ಪ ಹಾಗೂ ಗ್ರಾಮದ ಸಮಸ್ತರು ಉಪಸ್ಥಿತರಿದ್ದರು.