ದಾವಣಗೆರೆ : ಯಾವ ಮನೆಯಲ್ಲಿ ಹಿರಿಯರು(ತಂದೆ/ತಾಯಿ) ಇರುತ್ತಾರೋ ಆ ಮನೆಯು ಸಂಸ್ಕೃತಿಯಿಂದ ತುಂಬಿರುತ್ತದೆ ಎಂದು ಜಿಲ್ಲಾ ನ್ಯಾಯಾಲಯದ ಒಂದನೇ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯ ಹೇಳಿದರು.
ನಗರದ ಕುಂದುವಾಡದಲ್ಲಿರುವ ಕೆಎಚ್ ಬಿಯ ತುಂಗಭದ್ರಾ ಬಡಾವಣೆಯಲ್ಲಿ ನಡೆದ ಹಿರಿಯ ನಾಗರಿಕರ ಸಂಘ ಉದ್ಘಾಟಿಸಿ ಮಾತನಾಡಿ, ಯಾರ ಮನೆಯ ಅಂಗಳ ಸ್ವಚ್ಚತೆಯಿಂದ ಕೂಡಿರುತ್ತದೆಯೋ ಆ ಮನೆಯ ಕುಟುಂಬದಲ್ಲಿ ಹಿರಿಯರು ವಾಸವಾಗಿದ್ದಾರೆ ಎಂದರ್ಥ.
ಅಂತಹ ಹಿರಿಯ ನಾಗರಿಕರು ಸೇರಿ ಕಟ್ಟಿರುವ ಈ ಸಂಘದಿಂದ ಇಡೀ ಬಡಾವಣೆಯ ವಾತಾವರಣವು ಸುಭಿಕ್ಷೆಯಿಂದ ಕೂಡಿರುತ್ತದೆ. ಅದಕ್ಕಾಗಿ ಈ ಸಂಘಕ್ಕೆ ಸಂಘದ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ನುಡಿದರು.
ಈ ಬಡಾವಣೆಯಲ್ಲಿ ಇಂತಹ ಸಂಘದ ಸ್ಥಾಪನೆ ಅವಶ್ಯಕತೆ ಇದ್ದು, ಈ ಬಡಾವಣೆಯ ಸಮಸ್ಯೆಗಳು ಹಾಗೂ ಸೌಕರ್ಯಗಳ ಅವಶ್ಯಕತೆಗಳ ಬಗ್ಗೆ ಧ್ವನಿ ಎತ್ತಲು ಸಂಘಟನೆಯಿಂದಲೇ ಸಾಧ್ಯ. ಒಟ್ಟಾರೆ ಹಿರಿಯ ನಾಗರಿಕರು ಸೇರಿ ಸಂಘವನ್ನು ಸ್ಥಾಪಿಸಿರುವುದು ಒಳ್ಳೆಯದು ಎಂದು ಅಭಿನಂದಿಸಿದರು
ನಿವೃತ್ತ ಅಡಿಷನಲ್ ಪೊಲೀಸ್ ಸೂಪರಿಡೆಂಟ್ ರವಿನಾರಾಯಣ ಮಾತನಾಡಿ, ಹಿರಿಯ ನಾಗರಿಕರ ಜೀವನ ಅದರಲ್ಲೂ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರು
ಸಮಯ ಕಳೆಯುವುದೇ ಕಷ್ಟವಾಗಿರುತ್ತದೆ. ಇಂತಹ ಹಿರಿಯ ನಾಗರಿಕರು ಸಂಘದಲ್ಲಿ ಸಮವಯಸ್ಕರೊಂದಿಗೆ ಮಾತುಕತೆ , ಒಡನಾಟದಿಂದ ಅವರ ಮನಸ್ಸು ಹಗುರವಾಗಿ ಆರೋಗ್ಯವಂತರಾಗಿರುತ್ತಾರೆ.
ಸರ್ಕಾರಗಳು ತಮ್ಮವಾರ್ಷಿಕ ಬಡ್ಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಯಾವ ಸವಲತ್ತುಗಳನ್ನು ಘೋಷಿಸಿರದ ಇರುವುದಕ್ಕೆ ವಿಷಾದ ವ್ಯಕ್ತ ಪಡಿಸಿದರು. ತುಂಗಭದ್ರ ಬಡಾವಣೆಯಲ್ಲಿ ಹಿರಿಯ ನಾಗರಿಕರ ಸಂಘವನ್ನು ಸ್ಥಾಪಿಸಿದ ಸಂಘದ ಅಧ್ಯಕ್ಷರಿರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಕೆ ವಾಸುದೇವ ಮಾತನಾಡಿ, ಈ ಬಡಾವಣೆಯಲ್ಲಿ ಕರ್ನಾಟಕ ಗೃಹಮಂಡಳಿಯು ನಿರ್ಮಿಸಿರುವ 170 ವಾಸದ ಮನೆಗಳು ಹಾಗೂ ಖಾಲಿ ಸೈಟ್ಗಳಲ್ಲಿ ಕಟ್ಟಿಸಿಕೊಂಡಿರುವಂತಹ 250 ಮನೆಗಳು ಒಟ್ಟು 500 ರಿಂದ 600 ಕುಟುಂಬಗಳು ವಾಸಿಸುತ್ತಿದ್ದಾರೆ. ಈ ಬಡಾವಣೆಯಲ್ಲಿ ವಾಸಮಾಡುವ ಕುಟುಂಬಗಳಿಗೆ ಮಹಾನಗರ ಪಾಲಿಕೆಯಿಂದ ಅತ್ಯವಶ್ಯಕವಾಗಿ ಬೇಕಾಗಿರುವ ಸೌಕರ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಇಲ್ಲಿರುವ ನಿವಾಸಿಗಳು ಹಾಗೂ ಹಿರಿಯ ನಾಗರಿಕರಗಳನ್ನು ಸಂಘಟಿಸಿ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಕಟ್ಟಲಾಗಿದೆ ಎಂದರು. ಈ ಸಂಘದ ಉದ್ಘಾಟನೆಯ ಅಮೃತಘಳಿಗೆಯು ಇಂದು ಒದಗಿಬಂದಿದೆ. ಈ ಕಾರ್ಯಕ್ಕೆ ಸಹಕರಿಸಿದ. ಎಲ್ಲಾ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಎಂ ಎಸ್ ರೇವಣ್ಣಪ್ಪ ಮಾತನಾಡಿ, ತುಂಗಭದ್ರಾ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ನಿರ್ಮಿಸಿರುವ ಮನೆಗಳ ಹಾಗೂ ಇಲ್ಲಿನ ನಿವಾಸಿಗಳ ಮೂಲ ಸೌಕರ್ಯಗಳನ್ನು ಪೂರೈಸಲುಹಿರಿಯ ನಾಗರೀಕರ ಸಂಘದ ಸ್ಥಾಪನೆ ಅವಶ್ಯಕವಾಗಿತ್ತು. ಈ ಕಾರಣದಿಂದ ಸಂಘಟಿತರಾಗಿರುವ ಸಂಘವನ್ನು ಸ್ಥಾಪಿಸಲಾಗಿದೆ ಎಂದರು.ಪ್ರಾರ್ಥನೆಯನ್ನು ಸಂಗೀತ ಬೋಧಕ ಶಿಕ್ಷಕಿ ಎಸ್.ಉಮಾ, ನಿವೃತ್ತ ಮುಖ್ಯ ಶಿಕ್ಷಕ, ಎನ್‌ಎಂ ಲಿಂಗೇಶ್ ಸ್ವಾಗತ ಕೋರಿದರು. ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ವಂದನಾರ್ಪಣೆ ಮಾಡಿದರು.