
ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಆರೋಪಿ ಗಿರೀಶ ಸಾವಂತ, ತಾಲೂಕಿನ ಮಾಯಕೊಂಡದ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹಲ್ಲೆ ಯತ್ನಿಸಿದ ಚಾಕುವನ್ನು ಪೊಲೀಸರು ದಾವಣಗೆರೆಯ ಮಾಯಕೊಂಡದ ಬಳಿ ಹುಡುಕಾಟ ನಡೆಸಿದರು. ಕೃತ್ಯಕ್ಕೆ ಬಳಸಿದ್ದ ಚಾಕುವಿನಿಂದಲೇ ರೈಲಿನಲ್ಲಿ ಮಹಿಳೆಗೆ ಇರಿದಿರುವ ಶಂಕೆ ವ್ಯಕ್ತವಾಗಿದೆ.
ಗದಗ ಜಿಲ್ಲೆ ಮುಳುಗುಂದದ ಚಿಂದಿಪೇಟೆ ಓಣಿಯ ನಿವಾಸಿ ಲಕ್ಷ್ಮಿ ಅವರಿಗೆ ಇರಿದಿದ್ದ ಆರೋಪಿ, ತಪ್ಪಿಸಿಕೊಳ್ಳಲು ರೈಲಿನಿಂದ ಜಿಗಿದಿದ್ದ. ಆತ ಬಿದ್ದಿದ್ದ ಸ್ಥಳ ಹಾಗೂ ಮಾಯಕೊಂಡದ ಆಸುಪಾಸಿನ ರೈಲ್ವೆ ಹಳಿಗಳ ಸುತ್ತಲೂ ಪೊಲೀಸರು ಚಾಕುವಿಗಾಗಿ ಹುಡುಕಾಡಿದರು.
‘ಆರೋಪಿ ಅಂಜಲಿ ಕೊಲೆ ಹಾಗೂ ಮಹಿಳೆಗೆ ಇರಿಯಲು ಬಳಸಿದ್ದ ಚಾಕು ಒಂದೇ ಆಗಿರುವ ಸಾಧ್ಯತೆ ಇದೆ. ಆ ಚಾಕುವೇ ಮುಖ್ಯ ಸಾಕ್ಷ್ಯವಾಗಿದೆ. ಇದಕ್ಕಾಗಿ ರೈಲ್ವೆ ಪೊಲೀಸರು ಹಾಗೂ ಹಳಿಗಳ ನಿರ್ವಹಣೆ ಮಾಡುವ ಕೀ ಮ್ಯಾನ್ಗಳು ಹುಡುಕಾಟ ನಡೆಸಿದ್ದಾರೆ. ರೈಲಿನಿಂದ ಜಿಗಿಯುವ ವೇಳೆ ಆರೋಪಿ ಅದನ್ನು ಸುತ್ತಮುತ್ತ ಬಿಸಾಡಿರುವ ಸಾಧ್ಯತೆ ಇದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.


‘ಮೃತ ಅಂಜಲಿ ಅವರ ದೇಹದಲ್ಲಾಗಿರುವ ಗಾಯಕ್ಕೂ, ಲಕ್ಷ್ಮಿ ಅವರಿಗೆ ಆಗಿರುವ ಗಾಯಕ್ಕೂ ಸಾಮ್ಯತೆ ಕಂಡುಬAದಿದೆ. ಇವೆರಡೂ ಕೃತ್ಯಗಳಿಗೂ ಆರೋಪಿ ಒಂದೇ ಆಯುಧ ಬಳಸಿರಬಹುದೆಂಬ ಅನುಮಾನ ಮೂಡಿದೆ’ ಎಂದು ಹೇಳಿವೆ.
ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ: ‘ಮಗನಿಗೆ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆತನ ದಾಖಲಾತಿಗೆಂದು ತುಮಕೂರಿಗೆ ಹೋಗಿ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲಿನಲ್ಲಿ ಪತಿ ಮಹಾಂತೇಶ ಸವಟೂರು ಅವರೊಂದಿಗೆ ಹುಬ್ಬಳ್ಳಿಗೆ ಬರುತ್ತಿದ್ದೆ. ಅರಸೀಕೆರೆಯಲ್ಲಿ ರೈಲು ಏರಿದ್ದ ಆರೋಪಿ ನಮ್ಮ ಸೀಟಿನ ಬಳಿ ಕುಳಿತ. ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ’ ಎಂದು ಲಕ್ಷ್ಮಿ ರೈಲ್ವೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ಒಂದೇ ಆಸ್ಪತ್ರೆಗೆ ದಾಖಲು: ಆರಂಭದಲ್ಲಿ ಲಕ್ಷ್ಮಿ ಅವರನ್ನು ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಅರ್ಧಗಂಟೆಯ ನಂತರ ಗಿರೀಶನನ್ನೂ ಇದೇ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು.
ಡಿಸಿಪಿ ರಾಜೀವ್ ಅಮಾನತು
ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ, ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ನ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ರಾಜೀವ್.ಎಂ ಅವರನ್ನು ಅಮಾನತು ಮಾಡಿ ಶನಿವಾರ ಆದೇಶ ಹೊರಡಿಸ

