ದಾವಣಗೆರೆ : ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್ ಆಗಿದ್ಹೇಗೆ?ಈ ಪ್ರಕರಣದ ಹಿಂದಿದ್ಯಾ DK ಮಾಸ್ಟರ್ ಪ್ಲ್ಯಾನ್?ಪೆನ್ಡ್ರೈವ್ ಬಗ್ಗೆ BJP ಮುಖಂಡ ಸ್ಫೋಟಕ ಹೇಳಿಕೆ?
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಲೀಕ್ ಆಗಿದ್ದು ಹೇಗೆ.? ಅದು ಕೂಡ ಲೋಕಸಭಾ ಚುನಾವಣೆಗೆ ಇನ್ನ ಕೇವಲ 2 ದಿನ ಬಾಕಿ ಇರೋವಾಗ ಹಾಸನದ ಹಾದಿ ಬೀದಿಗಳಲ್ಲಿ ಈ ಅಶ್ಲೀಲ ವಿಡಿಯೋಗೆ ಸಂಬಂಧಿಸಿದ ಪೆನ್ಡ್ರೈವ್ಗಳನ್ನ ಎರಚಿದ್ದು ಯಾರು? ಯಾಕೆ ಅನ್ನೋ ಪ್ರಶ್ನೆಗಳು ಇದೀಗ ಎಲ್ಲರನ್ನೂ ಕಾಡ್ತಾಯಿವೆ. ಪರಿಸ್ಥಿತಿ ಹೀಗಿರೋವಾಗ್ಲೇ, ಈ ಪ್ರಕರಣದ ಹಿಂದೆ ಡಿಸಿಎಂ ಡಿಕೆಶಿ ಮಾಸ್ಟರ್ ಪ್ಲ್ಯಾನ್ ಇದ್ಯಾ ಅನ್ನೋ ಅನುಮಾನವೂ ವ್ಯಕ್ತವಾಗ್ತಾಯಿದೆ. ಹಾಗಾದ್ರೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಯ ವಿಡಿಯೋ ಫೂಟೇಜ್ ಡಿಕೆಶಿ ಕೈ ಸೇರಿದ್ದಾದ್ರೂ ಹೇಗೆ ಅಂದ್ರಾ…?
ಅಶ್ಲೀಲ ವಿಡಿಯೋ, ನೂರಾರು ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿರೋ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಹಾಸನದಾಧ್ಯಂತ ಹರಿದಾಡ್ತಾಯಿವೆ. ಇದ್ರಿಂದ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ರಾತ್ರೋರಾತ್ರಿ ಪರಾರಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಇತ್ತ ಗಂಭೀರ ಆರೋಪ ಹೊತ್ತಿರೋ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೆಲ ಮಹಿಳೆಯರು ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಸಂಘಟನೆಗಳು ಇದಕ್ಕೆ ಕೆಂಡಾಕಾರುತ್ತಿದ್ದು, ಬೀದಿಗಿಳಿದು ಪ್ರತಿಭಟನೆಗಳನ್ನ ಮಾಡ್ತಾಯಿವೆ. ಪ್ರಜ್ವಲ್ಗೆ ಕಠಿಣ ಶಿಕ್ಷೆ ಆಗ್ಲೇಬೇಕು ಅಂತೇಳಿ ಪಟ್ಟು ಹಿಡಿದಿವೆ. ಇದೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಈ ಪ್ರಕರಣವನ್ನ SIT ತನಿಖೆಗೆ ಒಪ್ಪಿಸಿದೆ. ಆದ್ರೆ ಇಲ್ಲಿ ಕಾಡೋ ಪ್ರಶ್ನೆ ಏನು ಅಂದ್ರೆ ಪ್ರಜ್ವಲ್ ಮೇಲಿರೋ ಆರೋಪ ನಿಜಾನೋ ಸುಳ್ಳೋ ಅದು ಬೇರೆ ವಿಚಾರ.
ಆದ್ರೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಈ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ಗಳನ್ನ ಹಾಸನದ ಹಾದಿ ಬೀದಿಯಲ್ಲಿ ಲೋಕಸಭಾ ಚುನಾವಣೆಗೆ 2 ದಿನ ಬಾಕಿ ಇರೋ ಟೈಮಲ್ಲಿ ಎರಚಿದ್ಯಾರು.? ಅದ್ಯಾವ ಉದ್ದೇಶದಿಂದ ಈ ಕೆಲಸ ಮಾಡಿದ್ರು ಅನ್ನೋ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಅನ್ನೋರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಈ ದೇವರಾಜೇಗೌಡ ಯಾರು ಅನ್ನೋದು ನಿಮಗೆಲ್ಲಾ ಗೊತ್ತೇ ಇರುತ್ತೆ. ಕಳೆದ ಜನವರಿಯಲ್ಲಿ ಅಂದ್ರೆ ಕೇವಲ 4 ತಿಂಗಳ ಹಿಂದೆ ಹಾಸನದಲ್ಲಿ ಪ್ರಸ್ಮೀಟ್ ಮಾಡಿದ್ದ ಇವರು ಅವತ್ತೇ ಹೆಚ್ಡಿ ರೇವಣ್ಣ ಕುಟುಂಬದ ರಾಸಲೀಲೆ ವೀಡಿಯೋ ಬಾಂಬ್ಅನ್ನ ಸ್ಫೋಟಿಸಿದ್ರು. ರೇವಣ್ಣ ಇನ್ನುಮುಂದೆ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು. ಅವರು ಸುಮ್ಮನಿರದಿದ್ರೆ ಹಾಸನದ ಪ್ರಮುಖ ವೃತ್ತದಲ್ಲಿ LED ಪರದೆ ಹಾಕಿ ವೀಡಿಯೋ ಪ್ಲೇ ಮಾಡೋದಾಗಿ ವಾಗ್ದಾಳಿ ನಡೆಸಿದ್ರು. ಆದ್ರೆ ವಿಡಿಯೋ ಬಿಡುಗಡೆ ಮಾಡಿರ್ಲಿಲ್ಲ. ಆದ್ರೀಗ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, ದೇವರಾಜೇಗೌಡ ಈ ಬಗ್ಗೆ ಸ್ಪಷ್ಟಣೆ ಕೊಟ್ಟಿದ್ದಾರೆ. ಈ ರಾಸಲೀಲೆ ವಿಡಿಯೋ ವಿಚಾರ 2023 ರಲ್ಲೇ ಬಂದಿತ್ತು. ಆದರೆ, ಪ್ರಜ್ವಲ್ ರೇವಣ್ಣ ನ್ಯಾಯಾಲಯದಲ್ಲಿ ಸ್ಟೇ ಪಡೆದುಕೊಂಡಿದ್ದರು. ಈ ಹಿಂದೆ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಮೇಲೂ ಸ್ಟೇ ಪಡೆದಿದ್ದರು. ಈ ವೇಳೆ ಕಾರ್ತಿಕ್ ನನ್ನ ಬಳಿಗೆ ಬಂದು ವಕಾಲತ್ತು ಹಾಕಿ ಎಂದಿದ್ದ, ಈ ವೇಳೆ ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನು ನೋಡಿದ್ದೆ ಎಂದು ಸ್ಫೋಟಕ ವಿಷಯವನ್ನ ವಕೀಲ ಮತ್ತು ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಬಿಚ್ಚಿಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾರ್ತಿಕ್ ಬಂದು ನನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಹಲವಾರು ಅಶ್ಲೀಲ ವೀಡಿಯೋ ಇತ್ತು. ನಂತರ ಈ ವಿಡಿಯೋ ಯಾರ್ಯಾರಿಗೆ ಕೊಟ್ಟಿದ್ದಿಯಾ ಎಂದು ಕಾರ್ತಿಕ್ಗೆ ಕೇಳಿದ್ದೆ. ಅದಕ್ಕೆ ಆತ ಈಗಾಗಲೇ ವಿಡಿಯೋಗಳು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್, ಸೇರಿ ಕೆಲ ಕಾಂಗ್ರೆಸ್ ಲೀಡರ್ಗಳಿಗೆ ಹೋಗಿವೆ ಎಂದು ಹೇಳಿದ್ದ ಅಂತೇಳಿ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಆದರೆ, ಈ ವಿಡಿಯೋ ಸಿಕ್ಕ ನಂತರ ಎರಡು ತಿಂಗಳಾದ್ದರೂ ಏನು ಮಾಡಿಲ್ಲಿಲ್ಲ.
ಕೇಳಿದ್ರೆ ಇದನ್ನು ಯಾವಾಗ ಬಳಕೆ ಮಾಡಬೇಕು ಅನ್ನೊದು ಗೊತ್ತಿದೆ. ಆಗ ಮಾಡುತ್ತೇನೆ ಎಂದು ಕಾರ್ತಿಕ್ ಹೇಳಿದ್ದ ಅಂತೇಳಿ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ. ಇನ್ನೂ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪತ್ರ ಬರೆದು ಇ ಮೇಲ್ ಮಾಡಲಾಗಿತ್ತು. ಆದ್ರೆ ಇ ಮೇಲ್ ಡಿಲಿವರ್ ಆಗಿರಲಿಲ್ಲ. ನಂತರ ವಿಜೇಯೇಂದ್ರ ಅವರಿಗೂ ವಿಡಿಯೋ ಬಗ್ಗೆ ಪತ್ರ ಬರೆದು ಕಛೇರಿಗೆ ನೀಡಿದ್ದೆ. ಆದ್ರೆ ಅವರು ಹೇಳಿದಂತೆ ಪತ್ರ ಅವರಿಗೂ ತಲುಪಿಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.
ಇನ್ನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿ ರೇವಣ್ಣ ಅವರ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ್ರನ್ನ ರೇವಣ್ಣ ಕೇವಲವಾಗಿ ನಡೆಸಿಕೊಂಡಿದ್ರಂತೆ. ಕಾರ್ಯಕ್ರಮ ಒಂದರಲ್ಲಿ ಸ್ಟೇಜ್ ಹತ್ತಲು ಬಿಡದೇ ಡರ್ಟಿ ಫೆಲೋ ಎಂದು ನಿಂದಿಸಿದ್ರಂತೆ. ಇದ್ರಿಂದ ಕೆರಳಿಕೆಂಡವಾಗಿದ್ದ ದೇವರಾಜೇಗೌಡ್ರು ಹೆಚ್ಡಿ ರೇವಣ್ಣ ವಿರುದ್ಧ ಸಿಡಿದೆದ್ದಿದ್ರು. ಈ ತರಹದ ವಿಡಿಯೋಗಳನ್ನ ಮಾಡಿದ್ದು ದೊಡ್ಡ ತಪ್ಪು. ಅದೇ ರೀತಿ ಹೆಣ್ಣು ಮಕ್ಕಳ ವಿಡಿಯೋ ರಿಲೀಸ್ ಮಾಡಿದ್ದು ಸಹ ತಪ್ಪು. ನಿನ್ನ ಮಗ ಕೋರ್ಟ್ನಲ್ಲಿ ತೆಗೆದುಕೊಂಡಿರುವ ಸ್ಟೇ ವೆಕೇಟ್ ಮಾಡಿಸಿ ಮಹಿಳೆಯರ ಅನುಮತಿ ಕೊಡಿಸು. ನಾನು LED ಪರದೆಯಲ್ಲಿ ರಾಸಲೀಲೆ ವಿಡಿಯೋ ಪ್ಲೇ ಮಾಡಿಸುತ್ತೆನೆ. ಆಗ ಯಾರು ಡರ್ಟಿ ಫೆಲೋ ಅನ್ನೋದು ಗೊತ್ತಾಗುತ್ತೆ ಅಂತೇಳಿ ದೇವರಾಜೇಗೌಡ ಗುಡುಗಿದ್ರು.
ಅದೇನೇ ಇರ್ಲಿ, ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋಗಳು ಹಾಸನದಲ್ಲಿ ಹರಿದಾಡ್ತಾಯಿವೆ. ಈ ಕುರಿತು SIT ತನಿಖೆ ಕೈಗೆತ್ತಿಕೊಂಡಿದೆ. ಇದೇ ಸಂದರ್ಭದಲ್ಲಿ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.